ಚಿಕ್ಕಮಗಳೂರು

ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆ

Published On :

ಕಡೂರು: ಮಕ್ಕಳ ಮನಸ್ಸನ್ನು ಮುದಗೊಳಿಸುವ ಚಿತ್ರಕಲೆ ಅವರ ವ್ಯಕ್ತಿತ್ವವನ್ನೂ ವಿಕಸನಗೊಳಿಸಬಲ್ಲದು ಎಂದು ಚಿತ್ರಕಲಾ ಶಿಕ್ಷಕ ಎಂ.ಎಸ್. ಲಿಂಗರಾಜು ಹೇಳಿದರು.
 ಪಟ್ಟಣದ ಕೋಟೆ ಶ್ರೀ ಶಾರದಾ ಸಭಾ ಭವನದಲ್ಲಿ ಪಟ್ಟಣದ ಸಮೂಹ ಸ್ಪಂದನ ಸಂಸ್ಥೆ 67ನೇ ಸ್ವಾತಂತ್ರ್ಯದಿನಾಚರಣೆ ಪ್ರಯುಕ್ತ ಆಯೋಜಿಸಿದ್ದ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆಯನ್ನು ಚಿತ್ರ ಬಿಡಿಸಿ ತೋರಿಸುವ ಮೂಲಕ ಉಧ್ಘಾಟಿಸಿ ಮಾತನಾಡಿ, ಚಿತ್ರ ಕಲೆ ಮೈಗೂಡಿಸಿಕೊಳ್ಳುವುದರಿಂದ ವ್ಯಕ್ತಿಯ ಆಂತರಿಕ ಮತು ಬಾಹ್ಯ ಸೌಂದರ್ಯ ವ್ಯಕ್ತವಾಗುತ್ತದೆ. ಪುರಾತನ ಕಲೆಯಾಗಿರುವ ಚಿತ್ರಕಲೆಯ ಬಗ್ಗೆ ನಿರಾಸಕ್ತಿ ಹೆಚ್ಚಾಗಿರುವ ಇಂದಿನ ದಿನಗಳಲ್ಲಿ ಮಕ್ಕಳಲ್ಲಿ ಜಾಗೃತಿ ಮೂಡಿಸುವಲ್ಲಿ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿರುವುದರಿಂದ ಮಕ್ಕಳಲ್ಲಿ ಕಲೆಯ ಬಗೆ ಆಸಕ್ತಿ ಮೂಡಿಸುತ್ತಿರುವುದು ಸಂತಸದ ಸಂಗತಿ ಎಂದರು.
 ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಶಿಕ್ಷಕ ಕೆ.ಪಿ. ಶ್ರೀಧರ್ ಕಾರ್ಯಕ್ರಕಮವನ್ನು ಶ್ಲಾಘಿಸಿದರು. ಸಂಸ್ಥೆಯ ಅಧ್ಯಕ್ಷ ಟಿ.ಸಿ. ಕಿರಣ್ ಮತ್ತು ತಂಡದ ಸದಸ್ಯರು ಇದ್ದರು. 33 ಶಾಲೆಗಳಿಂದ 150 ವಿದ್ಯಾರ್ಥಿಗಳು ಭಾಗವಹಿಸಿದ್ದರು.
--
ಶ್ರೀ ವಿಠಲ ರುಕ್ಮಾಯಿ ದಿಂಡಿ ಉತ್ಸವ
ತರೀಕೆರೆ: ಸಮೀಪದ ಅಜ್ಜಂಪುರದಲ್ಲಿ ಭಾವಸಾರ ಕ್ಷತ್ರಿಯ ಸಮಾಜ ಮತ್ತು ಭಜನಾ ಮಂಡಳಿ, ಯುವಕ ಮಂಡಳಿ ಹಾಗೂ ಮಹಿಳಾ ಮಂಡಳಿಯಿಂದ 94ನೇ ವರ್ಷದ ಶ್ರೀ ವಿಠಲ ರುಕ್ಮಾಯಿ ದೇವರ ದಿಂಡಿ ಉತ್ಸವ ಏರ್ಪಡಿಸಲಾಗಿತ್ತು.
 ಶ್ರೀ ವಿಠಲ ರುಕ್ಮಾಯಿ ಸಮುದಾಯ ಭವನದ ಸಭಾ ಮಂಟಪದಲ್ಲಿ ಅಭಿನಂದನಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ಜಿ.ಎಚ್. ಶ್ರೀನಿವಾಸ್ ಅವರು ಮಾತನಾಡಿ, ವಿಠಲ ರುಕ್ಮಾಯಿ ಸಭಾ ಭವನಕ್ಕೆ ಶಾಸಕರ ಅನುದಾನದಿಂದ ನೆರವು ನೀಡುವುದಾಗಿ ತಿಳಿಸಿದರು. ಬೆಂಗಳೂರು ಕೆ.ವಿ. ರೇಣುಕಾ ವಸಂತಕುಮಾರ್, ನಾಗರತ್ನಮ್ಮ ಜಿ.ಎಸ್. ಲಕ್ಷ್ಮಣರಾವ್, ಸಮುದಾಯ ಭವನಕ್ಕೆ ನೆರವು ನೀಡುವುದಾಗಿ ತಿಳಿಸಿದರು. ಭಾವಸಾರ ಕ್ಷತ್ರಿಯ ಸಮಾಜದ ಅಧ್ಯಕ್ಷ ಎಂ.ಎನ್. ಜನಾರ್ಧನರಾವ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
 ಹನುಮಂತರಾವ್, ಪಾಂಡುರಂಗರಾವ್ ಮತ್ತು ನಾಗರಾಜರಾವ್‌ರಿಂದ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಏರ್ಪಡಿಸಲಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.