ಚಿಕ್ಕಮಗಳೂರು

ಕೃಷಿ ತಾಂತ್ರಿಕ ಮಾಹಿತಿ ಸದ್ಬಳಕೆಯಾಗಲಿ

Published On :

ನರಸಿಂಹರಾಜಪುರ: ಕೃಷಿ ಇಲಾಖೆ ಆತ್ಮ ಯೋಜನೆಯಡಿ ಕೃಷಿ ಕ್ಷೇತ್ರ ಪಾಠ ಶಾಲೆ ಮೂಲಕ ರೈತರ ಕೃಷಿ ಕ್ಷೇತ್ರದಲ್ಲೇ ನೀಡುವ ತಾಂತ್ರಿಕ ಮಾಹಿತಿಯನ್ನು ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಪಂ ಸದಸ್ಯ ಕೆ. ಮಂಜಪ್ಪ ರೈತರಿಗೆ ಕರೆ ನೀಡಿದರು.
ತಾಲೂಕಿನ ಬಾಳೆ ಗ್ರಾಪಂನ ಶಿರಗಳಲೆ ಗ್ರಾಮದಲ್ಲಿ ಕೃಷಿ ಇಲಾಖೆಯ ಆತ್ಮ ಯೋಜನೆಯಡಿ ಪ್ರಾರಂಭಿಸಲಾದ ರೈತ ಕೃಷಿ ಕ್ಷೇತ್ರ ಪಾಠ ಶಾಲೆ ಉದ್ಘಾಟಿಸಿ ಮಾತನಾಡಿದರು. ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿ ವಿ.ಎಸ್. ಶಿವಮೂರ್ತಿ ಮಾಹಿತಿ ನೀಡಿ, ಬತ್ತ ಬೆಳೆಯುವ ರೈತರು ಮೂಲ ಗೊಬ್ಬರವನ್ನು ನಾಟಿಯಾದ 4 ರಿಂದ 20 ದಿನದಲ್ಲಿ ಬಳಸುತ್ತಿದ್ದಾರೆ. ಇದರಿಂದ ಬತ್ತದ ಸಸಿಯ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶ ಕೊರತೆಯಿಂದ ಸಸಿಯ ಬೆಳವಣಿಗೆ ಕುಂಠಿತವಾಗುತ್ತದೆ.
ಇಳುವರಿಯೂ ಕಡಿಮೆಯಾಗುತ್ತದೆ. ಆದ್ದರಿಂದ ಪೋಷಕಾಂಶ ನೀಡುವ ರಸಗೊಬ್ಬರವನ್ನು ನಾಟಿಯ ದಿನವೇ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.
ಅಧಿಕ ಇಳುವರಿ ನೀಡುವ ಬತ್ತದ ತಳಿಗಳಾದ ಜಯ, ತುಂಗಾ, ಐಆರ್ 64 ಹಾಗೂ ಎಟಿಯು 1001 ತಳಿಗಳಿಗೆ ಒಂದು ಎಕರೆಗೆ 100 ಕೆ.ಜಿ 10.26.26 ಅಥವಾ 50 ಕೆಜಿ ಡಿಎಪಿ ಮತ್ತು 50 ಕೆಜಿ ಎಂಓಪಿ ಬಳಸಬೇಕು. ಇದರಿಂದ ನಾಟಿಯ ಪ್ರಾರಂಭದಲ್ಲೇ ಚಿಕ್ಕ ವಯಸ್ಸಿನ ಸಸಿಗಳಿಗೆ ಶಿಪಾರಸ್ಸು ಮಾಡಿ ಪೋಷಕಾಂಶಗಳು ದೊರತು ಉತ್ತಮ ಇಳುವರಿ ಬರುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸಂಜೀವಿನಿ ಸಾವಯವ ಕೃಷಿ ಅಭಿವೃದ್ಧಿ ಸಮಿತಿ ಅಧ್ಯಕ್ಷ ಓ.ಎಂ. ಜೋಸೆಫ್ ವಹಿಸಿದ್ದರು. ಅತಿಥಿಗಳಾಗಿ ಪ್ರಗತಿಪರ ಕೃಷಿಕ ಆಂಟೋನಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.