ರೋಟರಿ ಪದಾಧಿಕಾರಿಗಳ ಪದಗ್ರಹಣ
ಕ.ಪ್ರ.ವಾರ್ತೆ, ಬೀರೂರು, ಜು.25 ಬೀರೂರು ಪಟ್ಟಣದ ರೋಟರಿ ಹಾಗೂ ಇನ್ನರ್ ವೀಲ್ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿ ಪದಗ್ರಹಣ ಸಮಾರಂಭ ಇಲ್ಲಿನ ಪತ್ರೆ ಕೆ. ಚನ್ನವೀರಪ್ಪಯ್ಯ ಕಲ್ಯಾಣ ಮಂದಿರದಲ್ಲಿ ನಡೆಯಿತು. ಚಿಕ್ಕನಾಯಕನಹಳ್ಳಿ ರೋಟರಿ ಮಾಜಿ ಅಧ್ಯಕ್ಷ ಪಿಎಚ್ಎಫ್ ಎಂ.ವಿ. ನಾಗರಾಜರಾವ್, ನೂತನ ರೋಟರಿ ಅಧ್ಯಕ್ಷ ಕೆ.ಎನ್. ಗೋಪಾಲಕೃಷ್ಣ ಹಾಗೂ ಕಾರ್ಯದರ್ಶಿ ಸಿ.ವಿ. ನಾಗೇಂದ್ರ, ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಪ್ರೇಮಾ ಬಸವರಾಜ್ ಹಾಗೂ ಕಾರ್ಯದರ್ಶಿ ಸವಿತಾ ಜಗದೀಶ್ ಅವರಿಗೆ ಪ್ರತಿಜ್ಞಾವಿಧಿ ಭೋಧಿಸಿ ಮಾತನಾಡಿದರು.
ತೃಪ್ತಿಯೇ ಮುಖ್ಯ: ಮನುಷ್ಯ ಜೀವನದಲ್ಲಿ ಆನಂದ ಮತು ತೃಪ್ತಿ ಅತ್ಯಂತ ಪ್ರಮುಖವಾದದ್ದು ಯಾವುದೇ ಕೆಲಸನ್ನು ಶ್ರದ್ದೆಯಿಂದ ಅರ್ಪಣಾ ಮನೋಭಾವದಿಂದ ಮಾಡಿದಾಗ ಹಾಗೂ ಸೇವೆಗೆ ದೊರೆತ ಅವಕಾಶ ಸದ್ಬಳಕೆ ಮಾಡಿಕೊಂಡಾಗ ಈ ಆನಂದ ಪಡೆಯಲು ಸಾಧ್ಯ ಎಂದರು.
ರೋಟರಿ ಸಹಾಯಕ ರಾಜ್ಯಪಾಲ ಡಾ ಜಿ.ಸಿ. ಶರತ್ ಮಾತನಾಡಿ, 108 ವರ್ಷಗಳ ರೋಟರಿ ಇತಿಹಾಸದಲ್ಲಿ 3 ಜನರಿಂದ ಪ್ರಾರಂಭವಾದ ಸಂಸ್ಥೆ ಇಂದು 217 ದೇಶಗಳಲ್ಲಿ 34,335 ಸಂಸ್ಥೆಗಳನ್ನು ಒಳಗೊಂಡು 1,23,656 ಸಕ್ರಿಯ ಸದಸ್ಯರಿದ್ದಾರೆ ಎಂದರು.
ನೂತನ ಕಾರ್ಯಕಾರಿ ಸಮಿತಿ ಸದಸ್ಯರು, ನಿರ್ದೇಶಕರು, ಗಣ್ಯರಾದ ಪತ್ರೆ ಸಿ.ಸದಾಶಿವನ್, ಮಾರ್ಗದ ವಿಶ್ವನಾಥ್, ವೈದ್ಯ ಡಾ ಅನಂತಪದ್ಮನಾಭ, ಕಡೂರು ಹಾಗೂ ತರೀಕೆರೆ ರೋಟರಿ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಪ್ರತಿಭಾನ್ವಿತ ಮಕ್ಕಳಿಗೆ ಪುರಸ್ಕರಿಸಲಾಯಿತು. ನಾಗರಾಜ್ ಸ್ವಾಗತಿಸಿಗದರು. ಗೌರಿ ಪ್ರಸನ್ನ ನಿರೂಪಿಸಿದರು. ಸಿ.ವಿ. ನಾಗೇಂದ್ರ ವಂದಿಸಿದರು.
--
ಸಮಾಜ ಸೇವಕ ದಿ. ಮಂಜುನಾಥ್ ಸ್ಮರಣೆ
ತರೀಕೆರೆ: ಮಮತ ಮಹಿಳಾ ಸಮಾಜದ ಆವರಣದಲ್ಲಿ ಮಾಜಿ ಶಾಸಕ ದಿ.ಟಿ.ಸಿ. ಬಸಪ್ಪ ಅವರ ಪುತ್ರ ಸಮಾಜ ಸೇವಕ, ದಿ.ಟಿ.ಬಿ. ಮಂಜುನಾಥ್ ಅವರ ಸ್ಮರಣೆ ಸಮಾರಂಭ ಏರ್ಪಡಿಸಲಾಗಿತ್ತು.
ಪುರಸಭಾ ಮಾಜಿ ಅಧ್ಯಕ್ಷ ಟಿ.ಆರ್. ನಾಗರಾಜ್, ಗಿರಿಜಮ್ಮ ನಾಗರಾಜ್, ಶಾರದ ಅಶೋಕ್, ಲತಾ ಗೋಪಾಲಕೃಷ್ಣ, ವಿಜಯ ಪ್ರಕಾಶ್ ಮಂಜುನಾಥ್ ಅವರ ಸಮಾಜ ಸೇವೆ ಸ್ಮರಿಸಿದರು. ಮಮತ ಮಹಿಳಾ ಸಮಾಜದ ಅಧ್ಯಕ್ಷೆ ಸೌಭಾಗ್ಯಮ್ಮ ಶ್ರೀರಂಗಪ್ಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶ್ಮಾಮಲ ಮಂಜುನಾಥ್, ರಶ್ಮಿ ರಮೇಶ್, ವನಜಾ ಹರೀಶ್, ವರಮಹಾಲಕ್ಷ್ಮಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

