ಚಿಕ್ಕಮಗಳೂರು

'ಮಕ್ಕಳಿಗೆ ಸಂಸ್ಕೃತಿ, ಸಂಸ್ಕಾರದ ಅರಿವು ಮೂಡಿಸಿ'

Published On :

ಕ.ಪ್ರ.ವಾರ್ತೆ, ತರೀಕೆರೆ,  ಜು.26
ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮಕ್ಕಳಿಗೆ ತಿಳಿಸಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಜಾನಪದ ತಜ್ಞ ಡಾ.ಬಸವರಾಜ ನೆಲ್ಲೀಸರ ತಿಳಿಸಿದ್ದಾರೆ.
ಸಮೀಪದ ಲಕ್ಕವಳ್ಳಿಯಲ್ಲಿ, ಲಕ್ಕವಳ್ಳಿ ಹೋಬಳಿ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಜುಳ ಸೀನೋಜಿರಾವ್ ಅವರ ನಿವಾಸದಲ್ಲಿ ಏರ್ಪಾಡಾಗಿದ್ದ ಸಾಹಿತ್ಯ ಸಂಭ್ರಮ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿ ಆಧುನಿಕತೆ ಮತ್ತು ಸಂಸ್ಕೃತಿ ಕುರಿತು  ಮಾತನಾಡುತ್ತಿದ್ದರು.
ಸಂಸ್ಕಾರ ಮುಖ್ಯ: ಜಾಗತೀಕರಣ, ದೂರದರ್ಶನದಿಂದ ಸೃಜನಾತ್ಮಕತೆ ಹಾಳಾಗುತ್ತಿದೆ. ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಮಕ್ಕಳಿಗೆ ನೀಡಿದಲ್ಲಿ ಮಾತ್ರ ಅವರು ನಮ್ಮೊಂದಿಗೆ ಇರಲು ಸಾಧ್ಯ. ಇಲ್ಲವಾದಲ್ಲಿ ಹಿರಿಯರು ವೃದ್ದಾಶ್ರಮ ನೋಡಿಕೊಳ್ಳುವ ನೋಡಿಕೊಳ್ಳುವ ಪರಿಸ್ತಿತಿ ಈಗಾಗಲೇ ಬಂದೊಗಿದೆ, ಜಾಗತೀಕರಣ ಬದುಕನ್ನು ಆವರಿಸಿಕೊಳ್ಳುವದರ ಮೂಲಕ ನಮ್ಮ ಸಂಸ್ಕೃತಿ ಸಂಸ್ಕಾರಗಳು ನಾಶವಾಗುತ್ತಿದೆ, ಕೊಳ್ಳುಬಾಕ ಸಂಸ್ಕೃತಿಯಿಂದಾಗಿ, ವಸ್ತು ಐಬೋಗಗಳೇ ಸಂತೋಷ ನೀಡುತ್ಕವೆ ಎಂಬ ಭ್ರಮೆ ಇತ್ತೀಚಿನ ಪೀಳಿಗೆಯದ್ದಾಗಿದೆ ಎಂದು ತಿಳಿಸಿದ ಅವರು ಒಂಟಿ ಜೀವನ ನೆಡೆಸುವುದರ ಮೂಲಕ ಶುಷ್ಕ ಬದುಕನ್ನು ಅರೆಸುತ್ತಾ ಸಾಗಿರುವುದು ನಿಜಕ್ಕೂ ವಿಷಾಧನೀಯವಾಗಿದೆ ಎಂದು ಅವರು ತಿಳಿಸಿದರು.
ಉಪನ್ಯಾಸಕ ರಾಜಾನಾಯ್ಕ ಅವರು ಮಾತನಾಡಿ, ಮಹಿಳೆಯರು ಇಂತಹ ಕಾರ್ಯಕ್ರಮದಲ್ಲಿ ಭಾಗವಹಿಸುವುದರ ಮೂಲಕ ಸಮಾಜಮುಖಿಯಾಗಬೇಕು ಎಂದು ತಿಳಿಸಿದರು.
ತಾಲೂಕು ಕಸಾಪ ಅಧ್ಯಕ್ಷ ಜಿ.ಸುಬ್ರಹ್ಮಣ್ಯ ಮಾತನಾಡಿ ಸಾಹಿತ್ಯ ಅಧ್ಯಯನ ನಮ್ಮ ಆಲೋಚನೆ ದಿಕ್ಕನ್ನು  ಬದಲಾಯಿಸಿ ಸನ್ಮಾರ್ಗದಲ್ಲಿ  ನೆಡೆಯುವ ಅವಕಾಶ ಕಲ್ಪಿಸುತ್ತದೆ ಹಾಗಾಗಿ ಪುಸ್ತಕ ಓದುವ ಹವ್ಯಾಸ ಹೆಚ್ಚಾಗಬೇಕು ಎಂದು ತಿಳಿಸಿದರು
ಲಕ್ಕವಳ್ಳಿ ಹೋಬಳಿ ಕಸಾಪ ಅಧ್ಯಕ್ಷೆ ಸಂದ್ಯಾ ದತ್ತಾತ್ರಿ ಅಧ್ಯಕ್ಷತೆ ವಹಿಸಿದ್ದರು. ಜಿ.ಪಂ. ಸದಸ್ಯ ಕೆ.ಪಿ. ಕುಮಾರ್, ತಾ.ಪಂ. ಸದಸ್ಯ ಅನ್ಬು ಅವರು ಮಾತನಾಡಿದರು. ಮಹಿಳಾ ಘಟಕದ ಅಧ್ಯಕ್ಷೆ ಮಂಜುಳಾಬಾಯಿ,  ರಮೇಶ್, ಪಾಂಡುರಂಗ ಜಾದವ್, ದಾದಾಪೀರ್, ನಾಗರತ್ನ, ಕಸಾಪ ಸದಸ್ಯರು ಮತ್ತಿತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.