ಜೆಡಿಎಸ್, ಕಾಂಗ್ರೆಸ್ ಡೋಂಗಿ ಜಾತ್ಯತೀತ ಪಕ್ಷಗಳು
ಚಿಕ್ಕಮಗಳೂರು: ಜಾತ್ಯತೀತ ಪಕ್ಷಗಳೆಂದು ನಾಮಫಲಕ ಹಾಕಿಕೊಂಡಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷಗಳು ಅಲ್ಪಸಂಖ್ಯಾತರನ್ನು ಓಟ್ ಬ್ಯಾಂಕ್‌ಗೆ ಸೀಮಿತಗೊಳಿಸಿದ್ದಾರೆ ಎಂದು ಬಿಜೆಪಿ ನಗರಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಆರೋಪಿಸಿದ್ದಾರೆ.
ನಗರದ ಪಾಂಚಜನ್ಯ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಅಲ್ಪಸಂಖ್ಯಾತ ಮೋರ್ಚಾ ನಗರ ಅಧ್ಯಕ್ಷರಾಗಿ ಆಯ್ಕೆಯಾದ ಸಿ.ಎ. ದಾವೂದ್ ಅವರನ್ನು ಸೋಮವಾರ ಅಭಿನಂದಿಸಿ ಮಾತನಾಡಿದ ಅವರು, ಅಲ್ಪಸಂಖ್ಯಾತರನ್ನು ಬಿಜೆಪಿಯಿಂದ ದೂರಗೊಳಿಸುವ ಹುನ್ನಾರ ನಡೆಸಿ ಕಳೆದ ಹಲವು ದಶಕಗಳಿಂದಲೂ ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಅವರಿಗೆ ಯಾವುದೇ ರೀತಿ ಸೌಲಭ್ಯ ಒದಗಿಸದೆ ಮೊಣಕೈಗೆ ತುಪ್ಪ ಸವೆರುತ್ತಾ ಭರವಸೆಯ ಮಹಾಪೂರವೆ ಹರಿಸಿದ್ದಾರೆ ಎಂದರು.
ಸಮಾನವಾಗಿ ಕಂಡಿದೆ: ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ನೂರಾರು ಕೋಟಿ ಅನುದಾನ ನೀಡುವ ಮೂಲಕ ಎಲ್ಲರನ್ನು ಸಮಾನವಾಗಿ ಕಂಡಿದೆ. ಈ ಸಂಬಂಧ ಆಡಳಿತ ಪಕ್ಷದ ಉಹಾಪೋಹಗಳಿಗೆ ಮುಂದಿನ ಚುನಾವಣೆಯಲ್ಲಿ ಅಲ್ಪಸಂಖ್ಯಾತರೆ ಉತ್ತರ ಹೇಳುವ ಕಾಲ ಸನ್ನಿಹಿತವಾಗಿದೆ ಎಂದರು.
ಡೋಂಗಿ ಜಾತ್ಯತೀತ ಪಕ್ಷಗಳು: ಸಿ.ಎ. ದಾವೂದ್ ಮಾತನಾಡಿ, ಕಾಂಗ್ರೆಸ್ ಗೊಡ್ಡು ಭರವಸೆಗಳನ್ನು ಕಳೆದ 5 ದಶಕಗಳಿಂದ ಅನುಭವಿಸಿದ್ದೇವೆ. ಅಲ್ಪಸಂಖ್ಯಾತರಲ್ಲಿ ಕಡುಬಡವರೆ ಹೆಚ್ಚಾಗಿರುವ ಒಳಗುಟ್ಟನ್ನು ಅರಿತ ಡೋಂಗಿ ಜಾತ್ಯತೀತ ಪಕ್ಷಗಳು ಅಲ್ಪಸಂಖ್ಯಾತರ ಹೆಸರಿನಲ್ಲಿ ಅದೆಷ್ಟೋ ಮಂದಿ ತಮ್ಮ ಬೊಕ್ಕಸ ಗಟ್ಟಿಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.
ಅಲ್ಪಸಂಖ್ಯಾತ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹಮದ್ ಅನ್ವರ್, ನಗರ ಸಭಾ ಸದಸ್ಯರಾದ ಕೆ.ಎಸ್. ಪುಷ್ಪರಾಜ್, ರವೀಂದ್ರ ಪ್ರಭು, ಮಾಜಿ ಸದಸ್ಯ ಸಗಾಯಿದಾಸ್, ಕನಕರಾಜ್, ಕೆ.ಪಿ. ವೆಂಕಟೇಶ್, ಸೀತಾರಾಂ ಭರಣ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

