ಚಿಕ್ಕಮಗಳೂರು

ಹಾನಿಗೊಳಗಾದ ಪ್ರದೇಶಗಳಿಗೆ ಸಂಸದ ಭೇಟಿ

Published On :

ಕೊಪ್ಪ: ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲೂಕಿನ ವಿವಿಧ ಪ್ರದೇಶಗಳಿಗೆ ಸಂಸದ ಜಯಪ್ರಕಾಶ್ ಹೆಗ್ಡೆಯವರು ಸೋಮವಾರ ಭೇಟಿ ನೀಡಿ ಸಂತ್ರಸ್ತರಿಗೆ ಸಾಂತ್ವನ ಹೇಳಿದರು.
 ಉಡುಪಿ ಮತ್ತು ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಸದರ ತಾಲೂಕಿನ ಒಂದು ದಿನದ ಪ್ರವಾಸದಲ್ಲಿ ಶಾನುವಳ್ಳಿಯ ನಂಜುಡಪ್ಪ ಮತ್ತು ಬೋಜರವರ ಮನೆಯ ಬಳಿ ಹಾಗೂ ಬಿಲ್ಲಗದ್ದೆ ಮತ್ತು ಕರವಾನೆ, ಮಳುಲಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಭಾರೀ ಪ್ರಮಾಣ ಭೂಕುಸಿತವಾಗಿ ಸಂಪರ್ಕ ಕಡಿದು ಹೋಗಿ ನೀರು ಡೇಕಣ್ಣ, ಆಶೋಕ್, ರಮೇಶ್‌ರವರ ತೋಟಗದ್ದೆಗಳಿಗೆ ನುಗ್ಗಿ ಭಾರೀ ಪ್ರಮಾಣ ಹಾನಿಯಾಗಿದ್ದನ್ನು ಪರಿಶೀಲಿಸಿದರು.
 ನಂತರ ಭುನವನಕೋಟೆ ಗ್ರಾಪಂ ವ್ಯಾಪ್ತಿಯ ಕೆಳಾಂಗಡಿಯಲ್ಲಿ ಸೀತಾ ನದಿಯ ಕೊರೆತ ಮತ್ತು ಗ್ರಾಮಾಂತರ ಗ್ರಾಪಂ ನಾಗಲಾಪುರದ ತುಂಗಾ ನದಿಯ ದಂಡೆಯ ಬಳಿ ಇರುವ ಅಡಕೆ ಮರಗಳು ಕೊಚ್ಚಿಕೊಂಡು ಹೋಗಿರುವುದನ್ನು ವಿಕ್ಷಿಸಿದರು. ಬಿಡುವಿಲ್ಲದ ಮಳೆಯಿಂದ ಅಡಕೆ ತೋಟಗಳಿಗೆ ಕೊಳೆ ರೋಗ ತಗುಲಿರುವ ಶಾನುವಳ್ಳಿ ಅಣ್ಣಯ್ಯ ಮತ್ತು ನಾರ್ವೆ ಮುರಳಿಯವರ ತೋಟ ಸೇರಿದಂತೆ  ಕಾಫಿ ಮತ್ತು ಕಾಳು ಮೆಣಸು ಬಳ್ಳಿಗಳಿಗೆ ಕೊಳೆ ರೋಗ ತಗುಲಿರುವ ಪ್ರದೇಶಗಳಿಗೆ ಬೇಟಿ ನೀಡಿದರು.
 ಅತಿವೃಷ್ಟಿಯಿಂದ ಹಾನಿಗೊಳಗಾದ ಸಂತ್ರಸ್ಥರಿಗೆ ಸಂಸದರು ಸಂತ್ವಾನ ಹೇಳುವ ಸಮಯದಲ್ಲಿ  ಈಭಾಗಗಳಲ್ಲಿ ಬಾರೀ ಪ್ರಮಾಣದ ಹಾನಿ ಸಂಬವಿಸಿದ್ದರೂ ಯಾವ ಅಧಿಕಾರಿಗಳು ಹಾನಿಯಾದ ಪ್ರದೇಶಗಳಿಗೆ ಬೇಟಿ ನೀಡಿಲ್ಲ, ಸರ್ಕಾರದಿಂದ ಪರಿಹಾರ ಸಿಗುತ್ತದೆ ಎಂಬ ನಂಬಿಕೆ ನಮ್ಮಲ್ಲಿ ಇಲ್ಲ ಎಂದು ಸಂತ್ರಸ್ತರು ಸಂಸದರ ಬಳಿ ದೂರಿದರು.
 ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸೀತಾ ನದಿ ಮತ್ತು ತುಂಗಾ ನದಿಯ ಕೊರತೆ ಆಗಿರುವ ಪ್ರದೇಶಗಳ ಬಗ್ಗೆ ವರದಿ ಸಲ್ಲಿಸುವಂತೆ ನೀರಾವರಿ ಇಲಾಖೆ ಕಾರ್ಯದರ್ಶಿಗಳಿಗೆ ತಿಳಿಸಿದ್ದೇನೆ. ಈ ಬಗ್ಗೆ ನೀರಾವರಿ ಮಂತ್ರಿ ಹಾಗೂ ಮುಖ್ಯಮಂತ್ರಿಗಳ ಬಳಿ ಶಾಶ್ವತ ಕಾಯಕಲ್ಪ ಒದಗಿಸುವಂತೆ ಒತ್ತಾಯ ಮಾಡುತ್ತೇನೆ. ಈ ಭಾಗದಲ್ಲಿ ಅಡಕೆ ಕೊಳೆರೋಗದಿಂದ ನಷ್ಟವಾಗಿರವ ಬಗ್ಗೆ ಸಂಪೂರ್ಣ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸುವಂತೆ ತಾಲೂಕು ತೋಟಗಾರಿಕಾ ಇಲಾಖೆಯ ನಿರ್ದೇಶಕರಿಗೆ ಸ್ಥಳಕ್ಕೆ ಕರೆಸಿ ಸೂಚನೆ ನೀಡಿದ್ದೇನೆ ಇವರ ವರದಿಯ ಅಧಾರದ ಮೇಲೆ ಇದೊಂದು ವಿಶೇಷ ಪ್ರಕೃತಿ ವಿಕೋಪ ಎಂದು ಪರಿಗಣಿಸಿ ಪರಿಹಾರ ನೀಡುವಂತೆ ಮುಖ್ಯಮಂತ್ರಿಗಳೊಂದಿಗೆ ಸಮಲೋಚನೆ ಮಾಡಿ ಪರಿಹಾರ ಕೊಡಿಸುವ ಪ್ರಯತ್ನ ಮಾಡುತ್ತೇನೆ ಎಂದರು.
 ಹಾನಿಯಾದ ಪ್ರದೇಶಗಳಿಗೆ ಭೇಟಿ ನೀಡುವ ಸಮಯದಲ್ಲಿ ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಜಿ. ಶೋಭಿಂತ್, ಕಿಸಾನ್ ಘಟಕದ ಅಧ್ಯಕ್ಷ ನಾರ್ವೆ ಆಶೋಕ್, ನವೀನ್, ಅಸಗೋಡು ನಾಗೇಶ್, ಒಣಿತೋಟ ರತ್ನಕಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.