ಬಾವಿಕೆರೆಯನ್ನು ಸುವರ್ಣ ಗ್ರಾಮ ಯೋಜನೆಗೆ ಸೇರಿಸಿ
ತರೀಕೆರೆ: ತಾಲೂಕಿನ ಬಾವಿಕೆರೆ ಗ್ರಾಮವನ್ನು ಸುವರ್ಣಗ್ರಾಮ ಯೋಜನೆಗೆ ಸೇರಿಸಿ ಅಭಿವೃದ್ಧಿ ಪಡಿಸಬೇಕು ಎಂದು ಜಯಕರ್ನಾಟಕ ಸಂಘಟನೆ ಬಾವಿಕೆರೆ ಶಾಖೆ ಅಧ್ಯಕ್ಷ ಕಾರ್ತಿಕ್ ಅವರು ಶಾಸಕ ಜಿ.ಎಚ್.ಶ್ರೀನಿವಾಸ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ತಾಲೂಕು ಲಕ್ಕವಳ್ಳಿ ಹೋಬಳಿ ಬಾವಿಕೆರೆ ಗ್ರಾಮದಲ್ಲಿ ರೈತರು ಹಾಗೂ ಪರಿಶಿಷ್ಟ ಜಾತಿಗೆ ಸೇರಿದ ಜನರೇ ಹೆಚ್ಚಿದ್ದು, ಈ ಗ್ರಾಮದಲ್ಲಿನ ರಸ್ತೆಗಳ ಸ್ಥಿತಿ ಮಳೆಗಾಲದಲ್ಲಿ ಕೆಸರುಗದ್ದೆಯಂತೆ ಮಾರ್ಪಾಡಾಗಿದ್ದು, ರಸ್ತೆಗಳು, ಕೆಸರು-ಕೊಳಚೆಯಿಂದ ಕೂಡಿ, ರಸ್ತೆಗೂ ಚರಂಡಿಗೂ ವ್ಯತ್ಯಾಸವೇ ಇಲ್ಲದಂತಾಗಿ, ವೃದ್ಧರು, ಶಾಲಾ ಮಕ್ಕಳು, ವಾಹನಗಳು, ಗ್ರಾಮಸ್ಥರು ಸಂಚರಿಸಲು ತುಂಬಾ ತೊಂದರೆಯಾಗುತ್ತಿದೆ ಎಂದು ತಿಳಿಸಲಾಗಿದೆ.
ನೀರು ನುಗ್ಗುವುದು: ಗ್ರಾಮದ ಹಲವೆಡೆ ಮಳೆಗಾಲದಲ್ಲಿ ರಸ್ತೆ ನೀರು ಮನೆ ಒಳಗೆ ನುಗ್ಗುತ್ತಿದೆ. ಗ್ರಾಪಂ ಇದ್ದರೂ, ಗ್ರಾಮವೊಂದಕ್ಕೆ ಇರಬೇಕಾದ ಮೂಲ ಸೌಕರ್ಯಗಳಲ್ಲಿದೆ ಬಾವಿಕೆರೆ ಕುಗ್ರಾಮವಾಗಿದೆ. ಆದುದರಿಂದ ಬಾವಿಕೆರೆ ಗ್ರಾಮವನ್ನು ಮುಂದಿನ ಕ್ರೀಯಾಯೋಜನೆಯಲ್ಲಿ ಸುವರ್ಣಗ್ರಾಮ ಯೋಜನೆಗೆ ಸೇರಿಸಿ, ಗ್ರಾಮದಲ್ಲಿ ಪ.ಪೂ. ಕಾಲೇಜು ಪ್ರಾರಂಭಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂಬ ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕಾರ್ತಿಕ್, ಗೌರವಾಧ್ಯಕ್ಷರು ಪ್ರವೀಣ್ ಮತ್ತು ಸಂಘಟನೆ ಸದಸ್ಯರು ಮನವಿ ಸಲ್ಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

