ಚಿಕ್ಕಮಗಳೂರು

ಕಲ್ಲುಗುಡ್ಡಿಯಲ್ಲಿ ಕೆಸರುಗದ್ದೆ ಓಟ

Published On :

ಬಾಳೆಹೊನ್ನೂರು: ಸಮೀಪದ ಜೇಸಿಐ ಬಿಳಾಲುಕೊಪ್ಪ ಸಂಸ್ಥೆ ವತಿಯಿಂದ ಕಲ್ಲುಗುಡ್ಡಿಯಲ್ಲಿ ಕೆಸರುಗದ್ದೆ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ಬಾಳೆಕೊಡಿಗೆಯ ಕೃಷಿಕ ಬಿ.ವಿ. ಬಾಲಕೃಷ್ಣ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಜೇಸಿ ವಲಯ ಉಪಾಧ್ಯಕ್ಷ ವಿ. ಶ್ರೀನಿವಾಸ್, ಜಯಪುರ ಠಾಣಾಧಿಕಾರಿ ಕುಮಾರು ಹಾಡಕರ್, ಗುತ್ತಿಗೆದಾರ ಜಿ.ಎಸ್. ತಿಮ್ಮಪ್ಪ ಭಾಗವಹಿಸಿದ್ದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ವಿಜೇತರಿಗೆ ಬಸರೀಕಟ್ಟೆಯ ಶರಣ್ ಡಿ. ಕುನ್ಹಾ ಬಹುಮಾನ ವಿತರಿಸಿದರು. ಜೇಸಿ ಅಧ್ಯಕ್ಷ ಬಿ.ಎಸ್. ನಾಗರಾಜ್ ರಾವ್ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಸಂಸ್ಥೆಯ ಎಂ.ಪಿ. ವಿನಯ್, ಜಿ.ಟಿ. ಶಂಕರ್, ಸಂತೋಷ್ ಕುಮಾರ್, ಐ.ಎ. ರಂಗನಾಥ್, ಟಿ.ಎಸ್. ಗಣೇಶ್, ಶ್ರೇಣಿಕ್ ಜೈನ್ ಭಾಗವಹಿಸಿದ್ದರು.
ವಿಜೇತರು: ಪುರುಷರ ವಿಭಾಗ- ಹಗ್ಗ ಜಗ್ಗಾಟ: ಜೈ ಭಾರತ್ ಎ ತಂಡ (ಪ್ರ), ಜೈ ಭಾರತ್ ಬಿ ತಂಡ (ದ್ವಿ), ಬ್ಯಾಸ್ಕೆಟ್ ಬಾಲ್: ಚಾಮುಂಡೇಶ್ವರಿ ತಂಡ (ಪ್ರ), ಬಿಳಾಲುಕೊಪ್ಪ ತಂಡ (ದ್ವಿ), ರನ್ನಿಂಗ್ ರೇಸ್: ಜಯಕುಮಾರ್ ಕಲ್ಲುಗುಡ್ಡೆ (ಪ್ರ), ಆದರ್ಶ್ ಜೈನ್ ಸಂಸೆ (ದ್ವಿ).
ಮಹಿಳೆಯರ ವಿಭಾಗ: ಹಗ್ಗ ಜಗ್ಗಾಟ: ಅನ್ನಪೂರ್ಣೇಶ್ವರಿ ತಂಡ (ಪ್ರ), ಶಾರದಾ ತಂಡ (ದ್ವಿ), ಬಾಲ್ ಆನ್ ದ ಬಕೆಟ್: ಕೆ.ಎಸ್. ವಾಣಿ (ಪ್ರ), ಆಶಾ (ದ್ವಿ), ಮಕ್ಕಳ ರನ್ನಿಂಗ್ ರೇಸ್: ಅನಿಲ್ ಸಾಯ್ ಕೊಡಿಗೆ (ಪ್ರ), ಜೀವನ್ ಕೊಗ್ರೆ (ದ್ವಿ) ಸ್ಥಾನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.