ಚಿಕ್ಕಮಗಳೂರು

ಕೆರೆ ಕಳಪೆ ಕಾಮಗಾರಿ: ಚರ್ಚಿಸಿ ತನಿಖೆಗೆ ಕ್ರಮ

Published On :

ಕ.ಪ್ರ.ವಾರ್ತೆ  ಕಡೂರು ಜೂ. 1
 ಉತ್ತಮ ಮಳೆಯಾಗಿ ರೈತರು ಸಂತಸ ಪಡಬೇಕಾದ ಸಮಯದಲ್ಲಿ ಕಳಪೆ ಕಾಮಗಾರಿಗಳಿಂದ ಕೆರೆಗಳ ಏರಿ ಒಡೆಯಲು ಕಾರಣವಾಗಿರುವ ಬಗ್ಗೆ ಸಮಗ್ರ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ರೈತರಿಗೆ ಕಡೂರು ವಿಧಾನಸಭಾ ಕ್ಷೇತ್ರದ ಶಾಸಕ ವೈ.ಎಸ್.ವಿ. ದತ್ತ ಭರವಸೆ ನೀಡಿದರು.                                                  ಅವರು ಶನಿವಾರ ಬೆಳಿಗ್ಗೆ ಮಳೆಯಿಂದ ಕಡೂರು ಕ್ಷೇತ್ರದಲ್ಲಿ ಹಾನಿಯುಂಟಾಗಿರುವ ಕೆರೆಗಳ ಪ್ರದೇಶಗಳಿಗೆ ಭೇಟಿ ನೀಡಿ ಮತ್ತು ಕಡೂರು ವಿಧಾನಸಭಾ ಕ್ಷೇತ್ರದ ಜಿ.ಯರದಕೆರೆಯಲ್ಲಿ ಕಳೆದ ಶುಕ್ರವಾರ ಕುರಿಮರಿ ಮೇಯಿಸಿಕೊಂಡು ಬರಲು ಹೋಗಿದ್ದ ವೈ.ಆರ್. ಗೋಪಿ ಎಂಬ ಯುವಕನು ಸಿಡಿಲಿಗೆ ಬಲಿಯಾಗಿ ಮೃತಪಟ್ಟ ಕುಟುಂಬವನ್ನು ಭೇಟಿ ಮಾಡಿ ಪೋಷಕರನ್ನು ಸಂತೈಸಿದ ಶಾಸಕ ದತ್ತ ಕುಟುಂಬದವರಿಗೆ ಸರ್ಕಾರದಿಂದ 1.50 ಲಕ್ಷ ರು. ಪರಿಹಾರದ ಚೆಕ್ ವಿತರಿಸಿದರು.
ಸೂಕ್ತ ಕ್ರಮ: ವಕ್ಕಲಗೆರೆಯ ಕೆರೆ ಮತ್ತು ಬಿಳುವಾಲದ ಕೆರೆ ಒಡೆದಿರುವುದನ್ನು ವೀಕ್ಷಿಸಿ ಮಾತನಾಡಿದ ಅವರು, ಮಳೆಬಾರದೆ ನೀರಿಲ್ಲದೆ ಹಲವಾರು ವರ್ಷದಿಂದ ನೀರಿಲ್ಲ ಎಂದು ಹಲುಬುತ್ತಿದ್ದ ರೈತರಿಗೆ ಕೆರೆ ಕಳಪೆ ಕಾಮಗಾರಿಯಿಂದಾಗಿ ನೀರು ಸಂಗ್ರಹಿಸಿಟ್ಟುಕೊಳ್ಳಲು ಆಗದಂತಹ ಸ್ಥಿತಿ  ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಸಭೆ ಕರೆದು ಸಮಗ್ರ ತನಿಖೆಗೆ ಒಳಪಡಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
 ಕೆರೆಗಳು ಮತ್ತು ಚೆಕ್ ಡ್ಯಾಂಗಳ ಕಳಪೆ ಕಾಮಗಾರಿಗೆ ಯಾರೇ ಕಾರಣರಾಗಿದ್ದರೂ ಕೂಡ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕಾಲೇಜಿಗೆ ಭೇಟಿ: ಕಡೂರು ಸರ್ಕಾರಿ ಪದವಿಪೂರ್ವ ಕಾಲೇಜಿಗೆ ಭೇಟಿ ನೀಡಿದ ಅವರು ಅಲ್ಲಿಯ ಕುಂದು ಕೊರತೆಗಳ ಬಗ್ಗೆ ಆಲಿಸಿದರು. ಕಾಲೇಜಿನ ಅಧ್ಯಾಪಕರ ಹೆಚ್ಚುವರಿ ಕೊಠಡಿಗಳ ಕೊರತೆ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಒಂದು ತಿಂಗಳಲ್ಲಿ ಸರ್ಕಾರದಿಂದ ಕ್ರಮ ಕೈಗೊಂಡು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
 ಈ ಸಂದರ್ಭದಲ್ಲಿ  ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಂ. ಮಹೇಶ್ವರಪ್ಪ, ಜಿಲ್ಲಾ ಯುವ ಜೆಡಿಎಸ್ ಕಾರ್ಯದರ್ಶಿ ಮಂಜುನಾಥ ಪ್ರಸನ್ನ, ಎನ್.ಇಮಾಮ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.