ಬಡವರ ಸೇವೆ ಸಿಬ್ಬಂದಿಯ ಆದ್ಯ ಕರ್ತವ್ಯ: ಡಾ. ಕನ್ನಯ್ಯ
ಕ.ಪ್ರ.ವಾರ್ತೆ, ಚಿಕ್ಕಮಗಳೂರು, ಜೂ.3
ಸರ್ಕಾರಿ ಆಸ್ಪತ್ರೆಯಲ್ಲಿ ಕೆಲಸ ಸಿಗುವುದೇ ಬಡವರ ಸೇವೆ ಮಾಡಲು, ದೊರಕುವ ದೊಡ್ಡ ಅವಕಾಶ ಎಂದು ಮಲ್ಲೇಗೌಡ ಸಾರ್ವಜನಿಕ ಆಸ್ಪತ್ರೆ ಜಿಲ್ಲಾ ಸರ್ಜನ್ ಡಾ. ಕನ್ನಯ್ಯ ಹೇಳಿದ್ದಾರೆ.
ನೂತನ ಜಿಲ್ಲಾ ಸರ್ಜನ್ ಆಗಿ ಅಧಿಕಾರ ವಹಿಸಿಕೊಂಡ ಸಂಬಂಧ ಸೋಮವಾರ ಕರ್ನಾಟಕ ರಣಧೀರ ಪಡೆ ಕಾರ್ಯಕರ್ತರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಆಸ್ಪತ್ರೆಗೆ ಬರುವ ಬಡ ರೋಗಿಗಳಿಗೆ ವೈದ್ಯಕೀಯ ಅನುಕೂಲತೆಗಳನ್ನು ಕಲ್ಪಿಸುವುದು ನಮ್ಮ ಮುಖ್ಯ ಉದ್ದೇಶ, ಈಗ ತಮಗೆ ಸಿಕ್ಕಿರುವ ಅಲ್ಪವಾಧಿ ಅವಕಾಶವನ್ನು ಬಳಸಿಕೊಂಡು ಆರ್ಥಿಕವಾಗಿ ಹಿಂದುಳಿದ ಬಡವರಿಗೆ ಅನುಕೂಲತೆಗಳನ್ನು ಮಾಡಿಕೊಡಲು ಪ್ರಯತ್ನಿಸುತ್ತೇನೆ ಎಂದರು.
ಜಿಲ್ಲಾ ಸರ್ಜನ್ ಅಗುವ ಮೂಲಕ ಸೇವೆ ಮಾಡುವ ಪೂರ್ಣ ಪ್ರಮಾಣದ ಆಸೆ ತೀರಿಸಿಕೊಳ್ಳಲು ಅನುಕೂಲವಾಗಿದೆ. ನಮಗಿರುವ ಅಧಿಕಾರ ಸದ್ಬಳಕೆಯಾದಾಗ ನಮ್ಮ ಬಗ್ಗೆ ಅಷ್ಟೇ ಕರುಣೆ, ಹಾಗೂ ಶಕ್ತಿ ನಿವೃತ್ತಿ ನಂತರ ಸಿಗುತ್ತದೆ ಎಂದರು.
ಸಿಬ್ಬಂದಿ ಕೊರತೆ: ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಇದೆ, ಅದನ್ನು ತುಂಬುವ ಭರವಸೆ ಸಿಕ್ಕಿದೆ. ಎಲ್ಲಾ ಸಿಬ್ಬಂದಿಗಳ ನೇಮಕ ಆದರೆ ಉತ್ತಮ ಸೇವೆ ನೀಡಲು ಸಹಕಾರಿ ಆಗುತ್ತದೆ ಎಂದು ಹೇಳಿದರು.
ಪ್ರಾಮಾಣಿಕ ಸೇವೆ: ಕರ್ನಾಟಕ ರಣಧೀರ ಪಡೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಜೆನ್ನಿಕ್ಲಾಸ್ ಡೇವಿಡ್ ಮಾತನಾಡಿ, ಡಾ. ಕನ್ನಯ್ಯ ಅವರು ಜಿಲ್ಲಾ ಆಸ್ಪತ್ರೆಯಲ್ಲಿ 2 ದಶಕಕ್ಕೂ ಹೆಚ್ಚು ಕಾಲ ಉತ್ತಮ ಸೇವೆ ಸಲ್ಲಿಸಿ ಯಾವುದೇ ಆಸೆ ಪಡದೆ ಪ್ರಾಮಾಣಿಕ ಕೆಲಸ ಮಾಡಿದ ಕಾರಣ ಜಿಲ್ಲಾ ಸರ್ಜನ್ ಹುದ್ದೆಗೆ ಅವಕಾಶ ದೊರೆತಿದೆ. ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಅಭಿನಂದಿಸಲಾಗುತ್ತಿದೆ. ಸಿಕ್ಕ ಅವಕಾಶವನ್ನು ಬಡಜನತೆಗೆ ಧಾರೆ ಎರೆಯುವ ಮೂಲಕ ಜನಮನ್ನಣೆ ದೊರೆಯಲೆಂದು ಆಶಿಸಿದರು.
ಸಂಘಟನೆಯ ಜಿಲ್ಲಾ ಉಪಾಧ್ಯಕ್ಷ ಶಾಂತಕುಮಾರ್, ಪಾಪಣ್ಣ, ಸುಂದರೇ ಗೌಡ, ಚಂದ್ರಶೇಖರ್, ದಿನೇಶ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

