ಚಿಕ್ಕಮಗಳೂರು

ಪ್ರಾಮಾಣಿಕ ಸೇವೆಯಿಂದ ವೃತ್ತಿ ಸಾರ್ಥಕ: ಪ್ರಭಾಕರ್

Published On :

ಕ.ಪ್ರ.ವಾರ್ತೆ, ಚಿಕ್ಕಮಗಳೂರು,  ಜೂ.3
ಹುಟ್ಟಿದ ಮನುಷ್ಯನಿಗೆ ಸಾವು ಹೇಗೆ ನಿಶ್ಚಿತವೋ ಪ್ರತಿಯೊಬ್ಬ ಸರ್ಕಾರಿ ನೌಕರರಿಗೆ ನಿವೃತ್ತಿಯೂ ಖಚಿತ. ಆದರೆ, ವೃತ್ತಿ ಜೀವನದಲ್ಲಿ ನಾವು ಮಾಡಿದ ಕೆಲಸ ನಿವೃತ್ತಿ ಹೊಂದದ ಹಾಗೆ ಶಾಶ್ವತವಾಗಿ ಜನರ ಮನಸಿನಲ್ಲಿ ಉಳಿದರೆ ಸಾರ್ಥಕತೆ ಸಿಗುತ್ತದೆ ಎಂದು ಪೌರಾಯುಕ್ತ ಹೆಚ್.ಜಿ. ಪ್ರಭಾಕರ್ ಹೇಳಿದ್ದಾರೆ.
ನಗರಸಭೆಯಲ್ಲಿ ನಿವೃತ್ತ ನೌಕರರಿಗೆ ಹಮ್ಮಿಕೊಂಡಿದ್ದ ಬೀಳ್ಕೊಡಿಗೆ ಸಮಾರಂಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಸೇವೆಯ ಭಾಗ್ಯ ಆಕಸ್ಮಿಕ, ಸಿಕ್ಕ ಅವಕಾಶಗಳನ್ನು ಸಾರ್ವಜನಿಕ ಕೆಲಸಗಳಿಗೆ ಮುಡುಪಾಗಿಟ್ಟು ಕಚೇರಿಗಳಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡಬೇಕು ನ ಎಂದು ತಿಳಿಸಿದರು.
ಪ್ರಾಮಾಣಿಕತೆ ಮುಖ್ಯ: ಇಂದು ನಿವೃತ್ತಿಯಾಗುತ್ತಿರುವ ನೌಕರರು ಸರ್ಕಾರಿ ಸೇವೆ ಸಲ್ಲಿಸಿದಷ್ಟು ವಯಸ್ಸು ನನಗೆ ಆಗಿಲ್ಲ, ನಿಮ್ಮ ವೃತ್ತಿ ಜೀವನದಲ್ಲಿ ಬಹಳಷ್ಟು ಕಷ್ಟ ಸುಖಗಳನ್ನು ಅನುಭವಿಸಿದ್ದೀರಿ. ಯಾವುದೇ ಒಬ್ಬ ಸರ್ಕಾರಿ ನೌಕರನ ಪ್ರಾಮಾಣಿಕತೆ ಅವನ ನಿವೃತ್ತಿ ಜೀವನದಲ್ಲಿ ಬೆಳಕು ಚೆಲ್ಲುತ್ತದೆ ಎಂದರು.
ನಗರಸಭೆ ಸದಸ್ಯ ಮುತ್ತಯ್ಯ ಮಾತನಾಡಿ, ಪೌರ ಕಾರ್ಮಿಕರು ತನ್ನ ಕುಟುಂಬದ ಹಿತಕ್ಕಿಂತ ಸಾರ್ವಜನಿಕರ ಯೋಗ ಕ್ಷೇಮಕ್ಕೆ ಹೆಚ್ಚು ಒತ್ತು ಕೊಟ್ಟು ಕೆಲಸಮಾಡಿ ತಮ್ಮ ಜೀವನ ಸವೆಸುತ್ತಾರೆ. ವೃತ್ತಿ ಜೀವನದ ನಂತರ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಕೊಟ್ಟು ಸಂಸಾರದ ಜವಾಬ್ಧಾರಿ ಹೊರಬೇಕು.
ನಗರಸಭೆಯಲ್ಲಿ ಕಳೆದ 20 ವರ್ಷದಿಂದಲೂ ನೌಕರರು ನಿವೃತ್ತಿ ಹೊಂದುತ್ತಲೆ ಇದ್ದಾರೆ. ಇದರಿಂದ ಪೌರ ಕಾರ್ಮಿಕರು, ನೀರುಗಂಟಿ, ಬಿಲ್ ಕಲೆಕ್ಟರ್, ಮೇಸ್ತ್ರಿಗಳು ಸೇರಿದಂತೆ ಹಲವು ಕೆಲಸಗಳಿಗೆ ಸಿಬ್ಬಂದಿ ಕೊರತೆ ಹೆಚ್ಚಿದ್ದು ಒಟ್ಟಾರೆ 120ಕ್ಕೂ ಹೆಚ್ಚು ಸಿಬ್ಬಂದಿಗಳ ಅವಶ್ಯಕತೆ  ಇದೆ ಎಂದು ನುಡಿದರು.
ನಿವೃತ್ತ ನೌಕರರಾದ ಬಿ.ಎಸ್. ಮೋಕ್ಷನಾಥ್, ವೆಂಕಟಮ್ಮ, ರಾಮಮ್ಮ, ಗೌರಮ್ಮ, ಮಲ್ಲಿಕಾರ್ಜುನ್, ಸಿದ್ದಪ್ಪ, ರುದ್ರಪ್ಪರವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಪೌರ ಸೇವಾ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ. ಗುರುಮೂರ್ತಿ, ವ್ಯವಸ್ಥಾಪಕ ಕಾಂತರಾಜ್, ನಗರಸಭೆ ಸದಸ್ಯ ಅಬ್ದುಲ್ ರೆಹಮಾನ್ ಕುರೇಶಿ, ಕಂದಾಯಾಧಿಕಾರಿ  ಬಸವರಾಜ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.