ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಿಸಿ
ತರೀಕೆರೆ: ರೈತರಿಗೆ ತೊಂದರೆಯಾಗದಂತೆ ರಸಗೊಬ್ಬರ ವಿತರಿಸಬೇಕೆಂದು ತಹಸೀಲ್ದಾರ್ ರಂಜಿತ ತಿಳಿಸಿದ್ದಾರೆ.
ಮಂಗಳವಾರ ಮಿನಿ ವಿಧಾನಸೌಧದ ಸಭಾಂಗಣದಲ್ಲಿ ಏರ್ಪಡಿಸಿದ್ದ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ರಸಗೊಬ್ಬರ ವಿತರಕರ ಸಭೆಯ ಅಧ್ಯಕ್ಷತೆ ವಹಿಸಿ
ಮಾತನಾಡಿ, ರಸಗೊಬ್ಬರದ ದರ ಮತ್ತು ದಾಸ್ತಾನು ಪಾರದರ್ಶಕವಾಗಿ ಎಲ್ಲರ ಗಮನಕ್ಕೆ ಬರುವ ರೀತಿಯಲ್ಲಿ ಪ್ರಕಟಿಸಿ, ಪ್ರತಿಯೊಬ್ಬರಿಗೂ ಮಾಹಿತಿ ನೀಡಿ,
ರಸಗೊಬ್ಬರದ ದಾಸ್ತಾನು ಅಗತ್ಯವಿದ್ದರೆ, ಬೇಗ ಮನವಿ ಕೊಡಿ, ಸರ್ಕಾರದ ಸುತ್ತೋಲೆಯನ್ನು ಮೀರಬಾರದು, ಬ್ರಾಂಡ್ಗೆ ಅಂಟಿಕೊಳ್ಳದೆ, ರೈತರಿಗೆ ಈ ಬಗ್ಗೆ ತಿಳುವಳಿಕೆ ಕೊಡಿ, ನಿಮ್ಮ ಸಮಸ್ಯೆಗಳಿಗೆ ಓಗೊಡುತ್ತೇವೆ, ತಾಲೂಕು ಅಡಳಿತಕ್ಕೆ ನಿಮ್ಮ ಸಹಕಾರ ಕೊಡಿ ಎಂದು ತಿಳಿಸಿದರು.
ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಾತನಾಡಿ, ರಸಗೊಬ್ಬರ ವಿತರಿಸುವಲ್ಲಿ ಅನಗತ್ಯ ಗೊಂದಲ ಬೇಡ, ಫೆಡರೇಶನ್ನಲ್ಲಿ ರಸಗೊಬ್ಬರ ಬೇಕಾದಷ್ಟು ದಾಸ್ತಾನು ಇದೆ. ನಿಮ್ಮಲ್ಲಿರುವ ರಸಗೊಬ್ಬರದ ದಾಸ್ತಾನನ್ನು ಪ್ರಕಟಿಸಿ, ಹೋಬಳಿವಾರು ರಸಗೊಬ್ಬರದ ದಾಸ್ತಾನು ಕೊಡಿ ಹಾಗೂ ದಾಸ್ತಾನು ಮತ್ತು ಗೊಬ್ಬರದ ದರವನ್ನು ಪ್ರಕಟಿಸಿ ಎಂದು ತಿಳಿಸಿದರು. ಗೊಬ್ಬರ ವಿತರಕರು ಸಭೆಯಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

