ಚಿಕ್ಕಮಗಳೂರು

ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ರೈತರ ಪ್ರತಿಭಟನೆ

Published On :

ಕ.ಪ್ರ. ವಾರ್ತೆ  ಚಿಕ್ಕಮಗಳೂರು  ಜೂ.7
ಸುಮಾರು 30 ವರ್ಷಗಳಿಂದ ಸಾಗುವಳಿ ಮಾಡಿಕೊಂಡು ಬದುಕು ಕಂಡುಕೊಂಡಿದ್ದ ದಲಿತ ಕುಟುಂಬಗಳ ವಿರುದ್ಧ ಅರಣ್ಯ ಇಲಾಖೆ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ತರೀಕೆರೆ ತಾಲೂಕಿನ ಸಂತವೇರಿಯ ಕಾಮನದುರ್ಗ ಗ್ರಾಮ ಶಾಖೆಯ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಪ್ರತಿಭಟನೆ ನಡೆಸಿದರು.
ಹಲವಾರು ವರ್ಷಗಳಿಂದ ನಾವು ಉಳುಮೆ ಮಾಡಿಕೊಂಡು ಬರುತ್ತಿದ್ದೇವೆ. ಜಮೀನಿಗೆ ಅರಣ್ಯ ಇಲಾಖೆಯವರು ದಿನಗೂಲಿ ನೌಕರರನ್ನು ಕಳಿಸಿ ಜಮೀನು ಉಳುಮೆ ಮಾಡದಂತೆ ತಡೆ ಬೇಲಿ ನಿರ್ಮಿಸಿದ್ದು, ಈ ವಿಷಯ ರೈತರ ಗಮನಕ್ಕೆ ಬಂದಾಗ ಆ ಪ್ರದೇಶದಲ್ಲಿ ಬಹಳ ವರ್ಷಗಳಿಂದ ಉಳುಮೆ ಮಾಡಿಕೊಂಡು ಬರುತ್ತಿದ್ದ ರೈತರು ಗುಂಪಾಗಿ ಬಂದು ಜಮೀನುಗಳಿಗೆ ತಡೆಬೇಲಿ ಹಾಕದಂತೆ ದಿನಗೂಲಿ ನೌಕರರನ್ನು ತಡೆದು ವಾಪಸ್ಸು ಕಳುಹಿಸಿದರು.
ಇಲಾಖೆ ವಿರುದ್ಧ ಆಕ್ರೋಶ: ಆಗ ರೈತ ಮುಖಂಡರು ದಿನವಿಡೀ ಅಧಿಕಾರಿಗಳ ಬರುವಿಕೆ ಕಾದು ಕುಳಿತರು ಆದರೆ, ಅರಣ್ಯ ಇಲಾಖೆಯವರು ಸ್ಥಳಕ್ಕೆ ಆಗಮಿಸಲಿಲ್ಲ. ಆಗ ರೈತರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಸೂಕ್ತವಾದ ನ್ಯಾಯ ದೊರಕಿಸಿಕೊಡದಿದ್ದಲ್ಲಿ ಮುಂದಿನ ಅನಾಹುತಕ್ಕೆ ಸರ್ಕಾರ ಮತ್ತು ಅರಣ್ಯ ಇಲಾಖೆ ಜವಾಬ್ದಾರಿ ಎಂದು ರೈತ ಮುಖಂಡರು ಎಚ್ಚರಿಸಿದ್ದಾರೆ.
 ರೈತ ಸಂಘದ ಮುಖಂಡರಾದ ಕೆಂಪರಾಜ್, ಸುರೇಶ್ ಮತ್ತು ಗಣೇಶ್ ಹಾಗೂ ಸ್ಥಳೀಯ ಸಾಗುವಳಿದಾರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.