ಚಿಕ್ಕಮಗಳೂರು

ಸರ್ಕಾರಿ ವಾಹನ ದುರ್ಬಳಕೆ: ಕಿಸಾನ್ ಕಾಂಗ್ರೆಸ್ ಆರೋಪ

Published On :

ಕೊಪ್ಪ: ಪಟ್ಟಣದ ಮುಖ್ಯರಸ್ತೆಯಲ್ಲಿ ಸರ್ಕಾರಿ ವಾಹನವೊಂದರಲ್ಲಿ ಕುಟುಂಬ ಸಮೇತ ಪ್ರಯಾಣಿಸುತ್ತಿದ್ದ ಅಧಿಕಾರಿಯನ್ನು ಕಿಸಾನ್ ಕಾಂಗ್ರೆಸ್ ಕಾರ್ಯಕರ್ತರು ತಡೆದು ತರಾಟೆಗೆ ತೆಗೆದುಕೊಂಡ ಘಟನೆ ಶನಿವಾರನಡೆದಿದೆ.
  ಬೆಂಗಳೂರಿನ ಕೃಷಿ ಇಲಾಖೆ ಅಧಿಕಾರಿಯೊಬ್ಬರು ತಮ್ಮ ಸರ್ಕಾರಿ ವಾಹನದಲ್ಲಿ ಕುಟುಂಬ ಸಮೇತ ಕೊಪ್ಪಕ್ಕೆ ಬಂದು ರಸ್ತೆ ನಿಯಮ ಉಲ್ಲಂಘಿಸಿ ಪಾರ್ಕಿಂಗ್ ಮಾಡಿದ್ದಲ್ಲದೆ, ಹೆಂಗಸರು ಮಕ್ಕಳನ್ನು ಕಾರಲ್ಲಿ ಕೂರಿಸಿ, ಇಲ್ಲಿನ ಬಾರ್ ಒಂದರಲ್ಲಿ ಮದ್ಯ ಸೇವಿಸುತ್ತಿದ್ದ ವಿಚಾರ ತಿಳಿದ್ದು, ಸ್ಥಳಕ್ಕಾಗಮಿಸಿದ ಬ್ಲಾಕ್ ಕಿಸಾನ್ ್ಕಾಂಗ್ರೆಸ್ ಅಧ್ಯಕ್ಷ ನಾರ್ವೆ ಅಶೋಕ್, ಎಚ್.ಎಲ್. ದೀಪಕ್, ಈವನ್ ಜಾಯೆಲ್, ಮಹ್ಮದ್ ತಯೀಬ್ ನೇತೃತ್ವದ ತಂಡ ಸರ್ಕಾರಿ ಸಮವಸ್ತ್ರದಲ್ಲಿದ್ದ ಚಾಲಕನನ್ನು ಸರ್ಕಾರಿ ವಾಹನ ದುರ್ಬಳಕೆ ಮಾಡಿರುವ ಬಗ್ಗೆ ವಿಚಾರಿಸಿದಾಗ ಆತ ಹಾರಿಕೆ ಉತ್ತರ ನೀಡಿದ.
   ಸ್ಥಳದಲ್ಲಿ ಅಧಿಕ ಸಂಖ್ಯೆಯಲ್ಲಿ ಜನ ಜಮಾಯಿಸತೊಡಗಿ ಪರಿಸ್ಥಿತಿ ಕೈಮೀರುವ ಸೂಚನೆ ಸಿಗುತ್ತಿದ್ದಂತೆ ಅಧಿಕಾರಿ ಮತ್ತು ಚಾಲಕ ಕಾರು ಹತ್ತಿ ಜಾಗ ಖಾಲಿ ಮಾಡಿದರು.
   ಸರ್ಕಾರಿ ಅಧಿಕಾರಿಗಳು ಈ ರೀತಿ ಇಲಾಖೆ ವಾಹನ ದುರ್ಬಳಕೆ ಮಾಡುತ್ತಿರುವುದರ ಬಗ್ಗೆ ಕಿಸಾನ್ ಸೆಲ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಮುಂದೆ ಇಂತಹ ಪ್ರಕರಣಗಳು ಕಂಡುಬಂದಲ್ಲಿ ತಕ್ಕ ಶಾಸ್ತಿ ಮಾಡಲಾಗುವುದುಎಂದು ಎಚ್ಚರಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.