ಗುಟ್ಕಾ ನಿಷೇಧ, ಭೂ ಒತ್ತುವರಿಗೆ ವಿರೋಧ
ಕ.ಪ್ರ.ವಾರ್ತೆ, ತರೀಕೆರೆ, ಜೂ.14
ಗುಟ್ಕಾ ನಿಷೇಧ ಹಾಗೂ ಅಕ್ರಮ ಭೂ ಒತ್ತುವರಿ ನೀತಿ ವಿರುದ್ಧ ತರೀಕೆರೆ ತಾಲೂಕು ಬಿಜೆಪಿಯಿಂದ ಶುಕ್ರವಾರ ಪಟ್ಟಣದಲ್ಲಿ ಪ್ರತಿಭಟನೆ ಮೆರವಣಿಗೆ ಏರ್ಪಡಿಸಲಾಗಿತ್ತು.
ಸಾಲು ಮರದಮ್ಮನವರ ದೇವಸ್ಥಾನದಿಂದ ಮಿನಿ ವಿಧಾನ ಸೌಧದ ವರೆಗೆ ಪ್ರತಿಭಟನಾ ಮೆರವಣಿಗೆ ಏರ್ಪಡಿಸಲಾಗಿತ್ತು. ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್, ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್, ಎಂ.ಆರ್. ಲೋಹಿತ್, ಟಿ.ಜಿ. ಸದಾನಂದ್, ಪಕ್ಷದ ಕಾರ್ಯಕರ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.
ನಂತರ ನೆಡೆದ ಸಭೆಯಲ್ಲಿ ಮಾತನಾಡಿದ ಮಲೆನಾಡು ಪ್ರದೇಶ ಅಭಿವೃದ್ಧಿ ಮಂಡಳಿ ನಿಕಟಪೂರ್ವ ಅಧ್ಯಕ್ಷ ಎನ್. ಮಂಜುನಾಥ್ ಅಡಕೆ ರೈತರ ವಾಣಿಜ್ಯ ಬೆಳೆಯಾಗಿದೆ. ಅರಣ್ಯ ಭೂಮಿ ಒತ್ತುವರಿಯಾಗಿದೆ ಎಂದು ಅಧಿಕಾರಿಗಳು ಅಮಾನವೀಯವಾಗಿ ಕಾಫಿ ಗಿಡಗಳನ್ನು ಕಡಿದಿದ್ದಾರೆ ಎಂದು ಆರೋಪಿಸಿದರು.
ತಾಲೂಕು ಬಿಜೆಪಿ ಅಧ್ಯಕ್ಷ ಆರ್. ದೇವಾನಂದ್, ಅಮಾನವೀಯವಾಗಿ ಬಡ ರೈತರು ಬೆಳೆಸಿದ್ದ ಕಾಫಿಗಿಡ ಏಕೆ ಕಡಿದು ಹಾಕಿದಿರಿ ಎಂದು ಪ್ರಶ್ನಿಸಿದರು.
ಗಟ್ಕಾದಲ್ಲಿರುವ ಹಾನಿಕಾರಕ ರಾಸಾಯನಿಕವನ್ನು ಉತ್ಪಾದನಾ ಹಂತದಲ್ಲಿಯೇ ಬೇರ್ಪಡಿಸಿ, ಇಡೀ ಗುಟ್ಕಾವನ್ನಲ್ಲ, ಈ ಅವೈಜ್ಞಾನಿಕ ಕ್ರಮದಿಂದ ರಾಜ್ಯದ ಅನೇಕರು ತೊಂದರೆಗೊಳಗಾಗುತ್ತಾರೆ ಎಂಬುದನ್ನು ಅರಿಯಿರಿ. ಆದ್ದರಿಂದ ಈ ಆದೇಶವನ್ನು ರದ್ದು ಮಾಡಿ ಪುನರ್ ವಿಮರ್ಶೆ ಮಾಡಲು ಆಗ್ರಹಪೂರ್ವಕವಾಗಿ ಒತ್ತಾಯಿಸುತ್ತೇವೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ತರೀಕೆರೆ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

