ಬಿಪಿಎಲ್ ಕಾರ್ಡ್ ಗೊಂದಲ ಸರಿಪಡಿಸಲು ಆಗ್ರಹ
ಶೃಂಗೇರಿ: ಬಿಪಿಎಲ್ ಕಾರ್ಡ್ ವ್ಯವಸ್ಥೆಯಲ್ಲಿ ಉಂಟಾಗಿರುವ ಗೊಂದಲವನ್ನು ಸರ್ಕಾರ ಪರಿಶೀಲಿಸಿ ಕೂಡಲೇ ಸರಿಪಡಿಸಬೇಕು ಎಂದು ತಾಲೂಕು ಜಯಕರ್ನಾಟಕ ಸಂಘಟನೆ ಅಧ್ಯಕ್ಷ ಕೆ.ಎಸ್. ವಿಠಲ್ ಆಗ್ರಹಿಸಿದ್ದಾರೆ.
ತಾಲೂಕಿನಲ್ಲಿ ಸುಮಾರು 267ಕ್ಕೂ ಹೆಚ್ಚು ಜನ ಬಿಪಿಎಲ್ ಕಾರ್ಡ್ ಗೊಂದಲದಲ್ಲಿದ್ದಾರೆ. ಕೈಯಲ್ಲಿ ಬಿಪಿಎಲ್ ಕಾರ್ಡ್, ಆದರೆ ನ್ಯಾಯಬೆಲೆ ಅಂಗಡಿಯಲ್ಲಿ ಎಪಿಎಲ್ ಕಾರ್ಡ್ ಆಗಿರುತ್ತದೆ. ಅದೂ ಬಡತನ ರೇಖೆಗಿಂತ ಕಡಮೆ ಆದಾಯ ಹೊಂದಿರುವ ಕೂಲಿ ಕಾರ್ಮಿಕರ ಕಾರ್ಡ್‌ಗಳಾಗಿವೆ.
ಸರಿಪಡಿಸಿ: ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಬಳಿ ಕೇಳಿದರೆ, ಅವರು ಗಣಕಯಂತ್ರದ ದೋಷ, ಅದನ್ನು ಎಂಜಿನಿಯರ್ ಸರಿಪಡಿಸಬೇಕು ಎನ್ನುತ್ತಾರೆ. ಆಹಾರ ಮತ್ತು ನಾಗರಿಕ ಇಲಾಖೆಯ ಇಂತಹ ನಿರ್ಲಕ್ಷ, ಬೇಜವಾಬ್ದಾರಿತನದಿಂದ ತಿಂಗಳು ಸಿಗುವ ಪಡಿತರ ಆಹಾರಕ್ಕೂ ವಿಘ್ನವಾಗಿದೆ. ಸರ್ಕಾರ ಕೂಡಲೇ ಇಂತಹ ಬಿಪಿಎಲ್ ಕಾರ್ಡುಗಳನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಬಯೋವುಟ್ರಿಕ್ ಪದ್ಧತಿಯಿಂದ ಗ್ರಾಹಕರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಕೂಲಿ ಕಾರ್ಮಿಕರು ತಮ್ಮ ಕೆಲಸ ಬಿಟ್ಟು ದಿನಗಟ್ಟಲೆ ನ್ಯಾಯಬೆಲೆ ಅಂಗಡಿ ಎದುರು ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅಲ್ಲದೇ ಈ ವ್ಯವಸ್ಥೆ ಕೆಲವೆಡೆ ಮಾತ್ರ ಅಳವಡಿಸಲಾಗಿದ್ದು, ಇನ್ನು ಕೆಲವೆಡೆ ಇಲ್ಲ. ಇದರಿಂದ ಯಾವುದೇ ರೀತಿಯ ಅವ್ಯವಹಾರ ತಡೆಗಟ್ಟಲು ಸಾಧ್ಯವಿಲ್ಲ. ಈ ವ್ಯವಸ್ಥೆಯಿಂದ ಗ್ರಾಹಕರಿಗೆ ತೊಂದರೆಯಾಗುತ್ತದೆಯೇ ವಿನಃ ಮೋಸ, ವಂಚನೆ,ಅವ್ಯವಹಾರ ತಡೆಗಟ್ಟುವುದುದ ಕಾಣಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

