ಗ್ರಾಮೀಣಾಭಿವೃದ್ಧಿಗೆ ಧ.ಗ್ರಾ. ಯೋಜನೆ ಸಹಕಾರಿ
ಕ.ಪ್ರ.ವಾರ್ತೆ , ನ.ರಾ.ಪುರ , ಜೂ.22
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸರ್ಕಾರ ಮಾಡದ ಎಷ್ಟೋ ಅಭಿವೃದ್ಧಿ ಕೆಲಸಗಳನ್ನು ಮಾಡಿ ಯಶಸ್ವಿಯಾಗುತ್ತಿದೆ ಎಂದು ಶಾಸಕ ಡಿ.ಎನ್. ಜೀವರಾಜ್ ಮೆಚ್ಚುಗೆ ವ್ಯಕ್ತಪಡಿಸಿದರು.
ಮಡಬೂರು ದಾನಿವಾಸಿ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ನಡೆದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶೆಟ್ಟಿಕೊಪ್ಪ ವಲಯ ಮಟ್ಟದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ಒಕ್ಕೂಟದ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಯೋಜನೆ ಸದಸ್ಯರಿಗೆ ಸಕಾಲದಲ್ಲಿ ಸಾಲ, ಆರೋಗ್ಯ, ಶಿಕ್ಷಣ ನೀಡುತ್ತಿದೆ. ವಿಪರ್ಯಾಸವೆಂದರೆ ಯೋಜನೆಯ ಕಾರ್ಯಕ್ರಮಗಳಿಗೆ ವಿರುದ್ಧವಾಗಿ ಈಗಿನ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ.
ಅಗ್ಗದ ಮದ್ಯ: ಯೋಜನೆ ಮದ್ಯವರ್ಜನ ಶಿಬಿರ ಮಾಡಿ ಮದ್ಯ ವ್ಯಸನಿಗಳನ್ನು ಮದ್ಯ ಮುಕ್ತರನ್ನಾಗಿ ಮಾಡುತ್ತಿದ್ದರೆ ಸರ್ಕಾರ ಅಗ್ಗದ ದರದಲ್ಲಿ ಮದ್ಯ ಪೂರೈಸುವ ಚಿಂತನೆ ಮಾಡುತ್ತಿದೆ. ರೈತರು ಬತ್ತ ಬೆಳೆಯಿರಿ ಎಂದು ಯೋಜನೆ ಪ್ರಯತ್ನ ನಡೆಸುತ್ತಿದ್ದರೆ ಸರ್ಕಾರ ರೈತರ ಭೂಮಿ ಕಿತ್ತುಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಸರ್ಕಾರದ ಹಲವು ನಿರ್ಧಾರಗಳು ಯೋಜನೆಗೆ ವಿರುದ್ಧವಾಗಿದ್ದು ಸಂಸ್ಥೆ ಅಗ್ನಿ ಪರೀಕ್ಷೆ ಎದುರಿಸಬೇಕಾಗಬಹುದು ಎಂದು ಅವರು ತಿಳಿಸಿದರು.
ಒತ್ತುವರಿ ಸಮಸ್ಯೆ: ಮುಂದೆ ಲೋಕಸಭಾ ಚುನಾವಣೆ ಬರುವುದರಿಂದ ರೈತರ ಒತ್ತುವರಿ ಸಮಸ್ಯೆಗೆ ತಾತ್ಕಾಲಿಕ ತಡೆ ಸಿಗಬಹುದು. ಚುನಾವಣೆ ನಂತರ ಮಲೆನಾಡು ಭಾಗದ ಎಲ್ಲಾ ಸಂಘ ಸಂಸ್ಥೆಗಳು, ರೈತರು, ರಾಜಕೀಯ ಪಕ್ಷಗಳು ಒಗ್ಗಟ್ಟಾಗಿ ಹೋರಾಟ ಮಾಡಬೇಕಾದ ಸನ್ನಿವೇಶ ಬರಲಿದೆ ಎಂದು ತಿಳಿಸಿದರು.
ಯೋಜನೆಯ ಕೊಪ್ಪ, ಶೃಂಗೇರಿ, ನ.ರಾ.ಪುರ ತಾಲೂಕುಗಳ ಯೋಜನಾಧಿಕಾರಿ ಉಮಾವತಿ ಮಾತನಾಡಿ, 1982 ರಲ್ಲಿ ಬೆಳ್ತಗಂಡಿಯಲ್ಲಿ ಪ್ರಾರಂಭಗೊಂಡ ಯೋಜನೆ ಇಂದು ರಾಜ್ಯದ 22 ಜಿಲ್ಲೆಗಳಿಗೆ ವ್ಯಾಪಿಸಿದೆ.ನಾಯಕತ್ವ ಬೆಳವಣಿಗೆ ಸೇರಿದಂತೆ ಹಲವು ಕಾರ್ಯಕ್ರಮ ರೂಪಿಸುತ್ತಿದೆ ಎಂದರು.
ಕಲ್ಪನಾ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಡಿ.ಸಿ. ದಿವಾಕರ ವಹಿಸಿದ್ದರು. ಉಪನ್ಯಾಸಕ ಜಲೇಂದ್ರ, ಎನ್.ಎಂ. ಕಾಂತರಾಜ್ ಇದ್ದರು. ಇದೇ ವೇಳೆ ಶೆಟ್ಟಿಕೊಪ್ಪ ವಲಯದ ಪ್ರಗತಿ ಬಂಧು, ಸ್ವಸಹಾಯ ಸಂಘಗಳ ನೂತನ ಪದಾಧಿಕಾರಿಗಳು ವೀಳ್ಯ ಸ್ವೀಕರಿಸುವುದರೊಂದಿಗೆ ಪದವಿ ಸ್ವೀಕಾರ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

