ನೈತಿಕ ಶಿಕ್ಷಣ ಪಡೆದು ಯೋಗ್ಯ ವ್ಯಕ್ತಿಗಳಾಗಿ
ಕ.ಪ್ರ.ವಾರ್ತೆ , ಬಾಳೆಹೊನ್ನೂರು , ಜೂ.22
ವಿದ್ಯಾರ್ಥಿಗಳು ಆಧುನಿಕತೆಯ ಕಡೆಗೆ ಮಾರುಹೋಗದೆ ನೈತಿಕ ಶಿಕ್ಷಣ ಪಡೆದು ಸಮಾಜದಲ್ಲಿ ಯೋಗ್ಯ ವ್ಯಕ್ತಿಗಳಾಗಬೇಕು ಎಂದು ಹರಿಹರಪುರದ ಅಭಿನವ ರಮಾನಂದ ಸರಸ್ವತಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಪಿ.ಡಿ. ನಾರಾಯಣಮೂರ್ತಿ ಹೇಳಿದ್ದಾರೆ.
ಧ್ಯಾನ, ಯೋಗ ಮುಖ್ಯ: ಇಲ್ಲಿನ ವಿದ್ಯಾಗಣಪತಿ ಸಮುದಾಯ ಭವನದಲ್ಲಿ ಬಿಜಿಎಸ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಅಯೋಜಿಸಿದ್ದ ಬಿಜಿಎಸ್ ವಾತ್ಸಲ್ಯ ಸ್ವಾಗತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದಲ್ಲಿ ನೆನಪಿನ ಶಕ್ತಿಯನ್ನು ವೃದ್ಧಿಸಲು ಧ್ಯಾನ, ಯೋಗ ಇತ್ಯಾದಿಗಳನ್ನು ದಿನಂಪ್ರತಿ ಅಳವಡಿಸಿಕೊಳ್ಳಬೇಕು. ವಿದ್ಯಾರ್ಥಿ ಜೀವನದಲ್ಲಿ ಕಷ್ಟ ಪಟ್ಟಾಗ ಮಾತ್ರ ಯಶಸ್ಸು ಸಿದ್ದಿಸುತ್ತದೆ. ಉತ್ತಮ ಕಾಲೇಜಿಗೆ ಸೇರಿದ ಮಾತ್ರಕ್ಕೆ ನಾನು ಪರೀಕ್ಷೆಯಲ್ಲಿ ಉತ್ತೀರ್ಣನಾಗುತ್ತೇನೆ ಎಂಬ ಭ್ರಮೆಯಲ್ಲಿ ಇರದೇ ತಮ್ಮ ಸಂಪೂರ್ಣ ಪರಿಶ್ರಮವನ್ನು ಯೋಜಿಸಿಕೊಳ್ಳಿ ಎಂದರು.
ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ: ಜಿಪಂ ಸದಸ್ಯ ಮೊಹಮ್ಮದ್ ಇಫ್ತೆಕಾರ್ ಆದಿಲ್ ಮಾತನಾಡಿ, ಆದಿಚುಂಚನಗಿರಿ ಸ್ವಾಮೀಜಿಯವರು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿದ್ದಲ್ಲದೆ, ಉತ್ತಮ ದೂರದೃಷ್ಟಿ ಉಳ್ಳವರಾಗಿದ್ದರು. ಆಧುನಿಕ ಶಿಕ್ಷಣವನ್ನು ನೀಡುವಲ್ಲಿ ಶ್ರೀಗಳದ್ದು ಮಹತ್ತರ ಪಾತ್ರವಾಗಿತ್ತು.
ಮಹಾ ನಗರಗಳಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಮಾತ್ರ ದೊರಕುವ ಶೈಕ್ಷಣಿಕ ಸವಲತ್ತುಗಳು ಸ್ಥಳೀಯ ಬಾಳೆಹೊನ್ನೂರಿನ ವಿದ್ಯಾರ್ಥಿಗಳಿಗೂ ದೊರಕಿರುವುದು ಅದೃಷ್ಟದಾಯಕ ಎಂದು ಹೇಳಿದರು.
ಪ್ರಾಚಾರ್ಯ ಡಾ.ವೈ.ಎ. ಸುರೇಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳಿಗೆ ಜೀವನ ಎಂದರೇನು ಎಂಬುದಾಗಿ ಮನದಟ್ಟಾಗುವಂತೆ ಸಂಸ್ಕಾರಯುತರನ್ನಾಗಿ ಮಾರ್ಪಡಿಸಿದಾಗ ಶಿಕ್ಷಣದೆಡೆಗೆ ಪ್ರೇರೇಪಿತನಾಗುತ್ತಾನೆ ಎಂದರು.
ಪ್ರಜ್ಞಾ ಭಟ್ ತಂಡದವರು ಪ್ರಾರ್ಥಿಸಿ, ಬಿ.ಎಂ. ಐಶ್ವರ್ಯ ಸ್ವಾಗತಿಸಿದರು. ಸೌಜನ್ಯ, ಅದಿತಿ ಕಾರ್ಯಕ್ರಮವನ್ನು ನಿರೂಪಿಸಿದರು, ಪಿ. ಪ್ರಜ್ವಲ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

