ಕ್ಷೇತ್ರದಲ್ಲಿ ಕೋಟಿ ಅಭಿವೃದ್ಧಿ ಕಾರ್ಯ
ಕ.ಪ್ರ.ವಾರ್ತೆ, ಕಡೂರು, ಜೂ.24
ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರಕ್ಕೆ ರು. 802 ಕೋಟಿ ಅಭಿವೃದ್ಧಿ ಕಾರ್ಯಗಳನ್ನು ತಂದ ಕಾರಣ ಜನರು ತನ್ನನ್ನು ಮರು ಆಯ್ಕೆ ಮಾಡಿದ್ದು, ಜನರ ನಿರೀಕ್ಷೆಗೆ ತಕ್ಕಂತೆ ಇನ್ನೂ ಹೆಚ್ಚಿನ ಅಭಿವೃದ್ಧಿ ಕೈಗೊಳ್ಳುವುದಾಗಿ ಶಾಸಕ ಸಿ.ಟಿ.ರವಿ ಹೇಳಿದರು.
ತಾಲೂಕಿನ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಗುಬ್ಬಿಹಳ್ಳಿ ತಾಂಡ್ಯದಲ್ಲಿ ರು. 30 ಲಕ್ಷ ಸಮುದಾಯಭವನ ಕಾಮಗಾರಿ ಮತ್ತು ಹಳೇಹಟ್ಟಿ ತಾಂಡ್ಯ ಮತ್ತಿತರ ತಾಂಡ್ಯಗಳಲ್ಲಿ 1 ಕೋಟಿ ವೆಚ್ಚದಲ್ಲಿ 10 ಸೇವಾಲಾಲ್ ಭವನಗಳ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ತಾವು ಅಭಿವೃದ್ಧಿ ವಿಚಾರದಲ್ಲಿ ಹಿಂದೆ ಬೀಳುವುದಿಲ್ಲ. ಗುಬ್ಬೀಹಳ್ಳಿ ತಾಂಡ್ಯದಲ್ಲಿ 30 ಲಕ್ಷರು.ನಲ್ಲಿ ಸಮುದಾಯ ಭವನದ ಶಂಕುಸ್ಥಾಪನೆ ಮತ್ತು ತಲಾ 10ಲಕ್ಷರು. ವೆಚ್ಚದಲ್ಲಿ 10 ತಾಂಡ್ಯಗಳಲ್ಲಿ 1 ಕೋಟಿ ರು. ವೆಚ್ಚದಲ್ಲಿ ಬಂಜಾರ ನಿಗಮದಿಂದ ಸೇವಾಲಾಲ್ ಭವನಗಳನ್ನು ನಿರ್ಮಾಣ ಮಾಡಲು ಚಾಲನೆ ನೀಡಲಾಗುತ್ತಿದೆ ಎಂದರು.
ವಿರೋಧಿಗಳಿಗೆ ಸವಾಲು: ಕ್ಷೇತ್ರದ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಸಲ್ಲ. ಜನಪರ ಕಾಳಜಿ ಇಲ್ಲದೆ ಕೇವಲ ವರ್ಗಾವಣೆ ಮಾಡಿಸುವುದೇ ರಾಜಕೀಯ ಎಂದು ಕೆಲವರು ಭಾವಿಸಿದ್ದಾರೆ. ಮತದಾರರು ನಾನು ಮಾಡಿರುವ ಅಭಿವೃದ್ಧಿ ನೋಡಿ ನನ್ನ ಪರ ತೀರ್ಪು ನೀಡಿದ್ದಾರೆ. ಕಾಲೆಳೆ. ುವವರಿಗೆ ಜನಪರ ಕಾಳಜಿ ಇದ್ದಲ್ಲಿ ಕ್ಷೇತ್ರಕ್ಕೆ ಸರ್ಕಾರದಿಂದ ಹೊಸ ಯೋಜನೆಗಳನ್ನು ತಂದು ಅಭಿವೃದ್ಧಿ ಮಾಡಲಿ ಎಂದು ರಾಜಕೀಯ ವಿರೋಧಿಗಳಿಗೆ ರವಿ ಸವಾಲು ಹಾಕಿದರು.
ಶಾಂತಿಯ ತೋಟ: ಸಖರಾಯಪಟ್ಟಣ ಜಿಪಂ ಸದಸ್ಯ ಕಲ್ಮರುಡಪ್ಪ ಮಾತನಾಡಿ, ಸಿ.ಟಿ. ರವಿಯವರು ಅಭಿವೃದ್ಧಿಗೆ ಆದ್ಯತೆ ನೀಡಿ, ಕ್ಷೇತ್ರವನ್ನು ಶಾಂತಿಯ ತೋಟ ಮಾಡುವ ಕನಸು ಹೊಂದಿದ್ದು, ಎಲ್ಲ ವರ್ಗದವರನ್ನು ಸಮಾನವಾಗಿ ಪರಿಗಣಿಸಿ ರಸ್ತೆ, ಸೇರಿದಂತೆ ಮೂಲ ಸವಲತ್ತುಗಳನ್ನು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದಾರೆ ಎಂದರು.
ಲಕ್ಷ್ಮಣನಾಯ್ಕ, ಶಾಮಾನಾಯ್ಕ, ಸರೋಜಿಬಾಯಿ,ನಿಂಗಣ್ಣ, ದಿನೇಶ್ ಪಾದಮನೆ, ಪ್ರಕಾಶ್ ಬಿಳೇಕಲ್ಲಹಳ್ಳಿ, ಪ್ರದೀಪನಾಯ್ಕ, ರಾಜಾನಾಯ್ಕ, ಪರಮೇಶ್ವರನಾಯ್ಕ, ಪ್ರಕಾಶ್, ಹರೀಶ್, ಗಿರೀಶ್, ಪ್ರತಾಪ್, ಹೇಮಂತ್, ಶಂಕ್ರಪ್ಪ ಇದ್ದರು.
ವೈಯುಕ್ತಿಕ ನಡವಳಿಕೆಯಿಂದ ರವಿ ಗೆಲವು
ಚಿಕ್ಕಮಗಳೂರು: ರಾಜ್ಯದ ಪ್ರತಿಕೂಲ ವಾತಾವರಣದ ನಡುವೆಯು ನಿಮ್ಮ ಗೆಲುವು ಸಾಧ್ಯವಾಗಿದೆ ಎಂದರೆ ಕ್ಷೇತ್ರದಲ್ಲಿ ಆಗಿರುವ ಅಭಿವೃದ್ಧಿ ಮತ್ತು ವೈಯುಕ್ತಿಕ ನಡವಳಿಕೆಯೇ ಕಾರಣ ಎಂದು ಕ್ರೈಸ್ತ ದೇವಾಲಯಗಳ ಧರ್ಮಾಧ್ಯಕ್ಷ ಡಾ. ಅಂತೋಣಿ ಸ್ವಾಮಿ ಹೇಳಿದ್ದಾರೆ. ಶಾಸಕ ಸಿ.ಟಿ. ರವಿ ಇಲ್ಲಿನ ಜ್ಯೋತಿನಗರದ ಬಿಷಪ್ ಹೌಸ್‌ಗೆ ತೆರಳಿ ಕೃತಜ್ಞತೆ ಸಲ್ಲಿಸಿದ ಬಳಿಕ ಅಂತೋಣಿಸ್ವಾಮಿಯವರು ಆಶೀರ್ವದಿಸಿ ಮಾತನಾಡಿ, ನೀವು ಸಚಿವರಾಗಿದ್ದಾಗ ಮಂಜೂರಾಗಿದ್ದ ಮೆಡಿಕಲ್ ಕಾಲೇಜು ಮತ್ತು ಎಂಜಿನಿಯರಿಂಗ್ ಕಾಲೇಜು ಸ್ಥಾಪನೆಯು ಶೀಘ್ರಗತಿಯಲ್ಲಾಗಿ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ ಎಂದ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

