ಚಿಕ್ಕಮಗಳೂರು

ಪರಿಸರ ಸಂರಕ್ಷಣೆ: ಸೈಕಲ್ ಜಾಥಾಕ್ಕೆ ಚಾಲನೆ

Published On :

ಕ.ಪ್ರ.ವಾರ್ತೆ, ಬೀರೂರು, ಜೂ.26
ಮಕ್ಕಳಿಗೆ ಪರಿಸರ ಸಂರಕ್ಷಣೆ ಹಾಗು ಆರೋಗ್ಯ ರಕ್ಷಣೆ ಜಾಗೃತಿ ಮೂಡಿಸುವ ದಿಸೆಯಲ್ಲಿ ಸೈಕಲಿನಲ್ಲಿ ದೇಶ ಸುತ್ತಿ ಜಾಗೃತಿ ಮೂಡಿಸಿದ ಉಮಾಪತಿ ಮೊದಲಿಯಾರ್ ಅವರಿಂದ ಬೀರೂರು ಪಟ್ಟಣದಲ್ಲಿ ಸೈಕಲ್ ಜಾಥಾಕ್ಕೆ ಚಾಲನೆ ನೀಡಲಾಯಿ.
ಪಟ್ಟಣದ ವಿವಿಧ ಫ್ರೌಢಶಾಲೆಗಳ ವಿದ್ಯಾರ್ಥಿಗಳು, ಕೆ.ಎಲ್.ಕೆ. ಕಾಲೇಜು ಮೈದಾನದಲ್ಲಿ ಸೇರಿ ಈ ಹಿರಿಯ ಚೇತನದ ಕಾಳಜಿಗೆ ಸಾಥ್ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ಬಿ.ಪಿ. ನಾಗರಾಜು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ವಿದ್ಯಾರ್ಥಿ ದಿಸೆಯಲ್ಲಿ ಮಕ್ಕಳಲ್ಲಿ ಪರಿಸರ ಸಂರಕ್ಷಣೆ ಸೇರಿದಂತೆ ಸಾಮಾಜಿಕ ಸೇವೆಯ ಕಾಳಜಿ ಮೂಡಿಸಲು ಇಂತಹ ಕಾರ್ಯಕ್ರಮಗಳ ಅಗತ್ಯವಿದೆ. ಅರಣ್ಯ ಇಲಾಖೆ ಈ ಕುರಿತು ಹೆಚ್ಚು ಕಾಳಜಿ ವಹಿಸಿ ಕಾರ್ಯನಿರ್ವಹಿಸಬೇಕು ಎಂದರು.
ಸಾವಯವ ಕೃಷಿಗೆ ಒತ್ತು ನೀಡುವುದಕ್ಕೆ ಘನತ್ಯಾಜ್ಯ ವಿಲೇವಾರಿಗೆ ನಿಗಧಿತ ಸ್ಥಳದಲ್ಲಿಯೇ ಮಾಡಬೇಕೆಂಬ ನಿಯಮ ಪಾಲನೆ ಕಡ್ಡಾವಾಗಬೇಕು ಎಂದು ಹೇಳಿದರು.
ಅರಣ್ಯಾಧಿಕಾರಿ ಗಂಗಾಧರ್ ಮಕ್ಕಳಿಗೆ ಪರಿಸರ ಸಂರಕ್ಷಣೆ ಕಾಳಜಿ ಕುರಿತ ಮಾಹಿತಿ ನೀಡಿದರು. ಶಿಕ್ಷಣ ಇಲಾಖೆಯ ಕ್ಷೇತ ಸಂಪನ್ಮೂಲಾಧಿಕಾರಿ ಪ್ರಕಾಶ್, ಶಿಕ್ಷಣ ಸಂಯೋಜಕ ಮಹೇಂದ್ರ ಮಲ್ಲಪ್ಪ, ಸುಬ್ಬಣ್ಣ, ಕಾಲೇಜಿನ ಪ್ರಾಚಾರ್ಯ ಯಶೋಧಾ, ಮುಖ್ಯೋಪಾಧ್ಯಾಯ ರಾಮಪ್ಪ, ಪುರಸಭೆಯ ಅಭಿಯಂತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.