ಮಳೆಗೆ ಬಿಡುವು
ನರಸಿಂಹರಾಜಪುರ: ಕಳೆದ ಒಂದು ವಾರದಿಂದ ಎಡೆ ಬಿಡದೆ ಸುರಿಯುತ್ತಿದ್ದ ಮಳೆ ಶುಕ್ರವಾರ ಕ್ಷೀಣಿಸಿದ್ದು, ಕೆಲ ಸಮಯ ಎಳೆ ಬಿಸಿಲು ಕಾಣಿಸಿಕೊಂಡಿದೆ. ಈ ವರ್ಷ ವಾಡಿಕೆಯ ಮಳೆಗಿಂತ ಜಾಸ್ತಿ ಮಳೆ ಬಿದ್ದಿದೆ. ಇಲ್ಲಿವರೆಗೆ ಕಸಬಾ ಹೋಬಳಿ ವ್ಯಾಪ್ತಿಯಲ್ಲಿ 602 ಮಿ.ಮೀ ಬಿದ್ದಿದೆ. ಬಾಳೆಹೊನ್ನೂರು ಹೋಬಳಿಯಲ್ಲಿ 563 ಮಿ.ಮೀ.ಮಳೆ ಬಿದ್ದಿದೆ. ಜೂ. 1 ರಿಂದ 27 ರ ವರೆಗೆ ಕಸಬಾ ಹೋಬಳಿಯಲ್ಲಿ 310.2 ಮಿ.ಮೀ ಮಳೆ ಬಿದ್ದಿದೆ. ಬಾಳೆಹೊನ್ನೂರು ಹೋಬಳಿಯಲ್ಲಿ 345.4 ಮಿ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಬಾಳೆಹೊನ್ನೂರು ಹೋಬಳಿಯಲ್ಲಿ ಕಸಬಾ ಹೋಬಳಿಗಿಂತ ಮಳೆ ಜಾಸ್ತಿ ಬೀಳಲಿದೆ. ಆಶ್ಚರ್ಯವೆಂದರೆ ಈ ವರ್ಷ ಇಲ್ಲಿಯವರೆಗೆ ಬಾಳೆಹೊನ್ನೂರು ಹೋಬಳಿಗಿಂತ ಕಸಬಾ ಹೋಬಳಿಯಲ್ಲೇ 39 ಮಿ.ಮೀ.ಮಳೆ ಜಾಸ್ತಿ ಬಿದ್ದಿದೆ.
ಕಳೆದ ವರ್ಷ ನವಂಬರ್ನಲ್ಲಿ ನಿಂತು ಹೋದ ಮಳೆ ಈ ವರ್ಷ ಎಪ್ರಿಲ್ 10ರ ವರೆಗೂ ಬಂದಿರಲಿಲ್ಲ. ಎಪ್ರಿಲ್, ಮೇ ತಿಂಗಳಲ್ಲಿ ಗುಡುಗು, ಮಿಂಚು, ಮೋಡ ಇದ್ದರೂ ಸರಿಯಾಗಿ ಮಳೆ ಬಾರದೆ ತಾಲೂಕಿನ ಎಲ್ಲಾ ಹಳ್ಳಗಳು ಒಣಗಿ ನಿಂತಿದ್ದವು. ಮೇ 28ರ ವರೆಗೂ ಬರಗಾಲದ ವಾತಾವರಣ ಇತ್ತು. ಭದ್ರಾ ಹಿನ್ನೀರು ಕೂಡಾ ಕಡಿಮೆಯಾಗಿ ಇತಿಹಾಸ ಪ್ರಸಿದ್ಧ ತಡಸಾ ಸೇತುವೆ, ಲಿಂಗಾಪುರ ಸೇತುವೆ ಪ್ರತ್ಯಕ್ಷವಾಗಿದ್ದವು. ಜೂನ್ 1 ರ ನಂತರ ಪ್ರಾರಂಭಗೊಂಡ ಮಳೆರಾಯ ಜನರಿಗೆ ಸಾಕಪ್ಪ ಮಳೆ, ಸ್ವಲ್ಪ ಬಿಸಿಲು ಬರಲಿ ಎನ್ನುವಂತಹ ವಾತಾವರಣ ನಿರ್ಮಾಣವಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

