ಚಿಕ್ಕಮಗಳೂರು

ಉತ್ತಮ ದಾರಿ ತೋರಲು ಧರ್ಮ ಅಗತ್ಯ: ರಂಭಾಪುರಿ ಶ್ರೀ

Published On :

.ಪ್ರ.ವಾರ್ತೆ, ತರೀಕೆರೆ, ಜೂ. 29 ಉತ್ತಮ ದಾರಿ ತೋರಲು ಧರ್ಮ ಅಗತ್ಯವಾಗಿದೆ ಎಂದು ಬಾಳೆಹೊನ್ನೂರು   ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕಾ ವೀರ ಸೋಮೇಶ್ವರ ಶಿವಾಚಾರ್ಯ ಶ್ರೀ ತಿಳಿಸಿದ್ದಾರೆ.
ಅವರು ಶನಿವಾರ ಪಟ್ಟಣದ ಮಲ್ಲಿಕಾರ್ಜುನ ಶಾಸ್ತ್ರಿಗಳ ನಿವಾಸ ಪಂಡಿತ್ ಕೃಪಾ ಅವರಣದಲ್ಲಿ ಏರ್ಪಡಿಸಲಾಗಿದ್ದ ಜನ ಜಾಗೃತಿ ಧಾರ್ಮಿಕ ಸಮಾವೇಶದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಕೀಳರಿಮೆ ಬೇಡ: ಮಾತು ಕೃತಿ ಎರಡೂ ಒಂದೇ ಆಗಬೇಕು. ಶ್ರಮವಿಲ್ಲದ ಸಂಪತ್ತು ಬಹಳ ದಿನ ಉಳಿಯುವುದಿಲ್ಲ,  ದುಡಿಮೆ ಮತ್ತು ಕಾಯಕದ ಬಗ್ಗೆ ಕೀಳರಿಮೆ ಬೇಡ, ಮೈಮುರಿದು ಕೆಲಸ ಮಾಡಿದರೆ ಯಶಸ್ಸು ಸಾಧ್ಯವಾಗುತ್ತದೆ ಎಂದವರು ಹೇಳಿದರು.
ಇಂದು ಧಾರ್ಮಿಕ ಪ್ರಜ್ಞೆ, ಸಂಸ್ಕಾರದ ಕೊರತೆ ಇದೆ,  ಆದರ್ಶ ವ್ಯಕ್ತಿಗಳ ನಿರ್ಮಾಣ ಅಗತ್ಯವಾಗಿದೆ ಎಂದು ತಿಳಿಸಿದ ಅವರು, ಸಾಂಘಿಕ ಜೀವನವನ್ನು ಮರೆಯಬಾರದು. ಹಾಗಾಗಿ ಆದರ್ಶದ ದಾರಿ ತೋರಲು ಧರ್ಮ ಅಗತ್ಯವಾಗಿದೆ ಎಂದರು.
ಮದ್ಯ ನಿಷೇಧವಾಗಲಿ: ಸಾಧನೆ ಮಾತಾಗಬೇಕೇ ಹೊರತು, ಮಾತೇ ಸಾಧನೆಯಾಗಬಾರದು,  ಸರ್ಕಾರದ ಸವಲತ್ತುಗಳನ್ನು ನಂಬಿ ಕೂರದೆ, ಶ್ರಮದಿಂದ ಬದುಕಬೇಕು. ಸರ್ಕಾರ ಶಾಶ್ವತ ಯೋಜನೆಗಳನ್ನು ರೂಪಿಸಬೇಕು.  ಮದ್ಯ ನಿಷೇಧಿಸಿದರೆ ಬಹಳ ಒಳ್ಳೆಯದು, ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಕೊಡಿ, ಮದ್ಯದಂಗಡಿ ಬೇಡ ಎಂದು ಅವರು ತಿಳಿಸಿದರು.
ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಶ್ರೀ, ಕೆಪಿಸಿಸಿ ಸದಸ್ಯ ಟಿ.ವಿ. ಶಿವಶಂಕರಪ್ಪ ಮಾತನಾಡಿದರು. ಮಾಜಿ ಸಚಿವ ಡಾ.ಎಚ್.ಆರ್. ರಾಜು ಧಾರ್ಮಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
ಅಖಿಲ ಭಾರತ ವೀರಶೈವ ಸಮಾಜ ಅಧ್ಯಕ್ಷರು, ಯಡೆಯೂರು ರೇಣುಕಾ ಶಿವಾಚಾರ್ಯ ಶ್ರೀ, ಶಿಲಾಮಠ ಶಿವಾಚಾರ್ಯ ಶ್ರೀ, ಮಲ್ಲಿಕಾರ್ಜುನ ಶಾಸ್ತ್ರಿಗಳು, ವಕೀಲ ಕೆ.ಆರ್. ರೇವಣಸಿದ್ದಪ್ಪ ಮೊದಲಾದವರು ಮಾತನಾಡಿದರು.
ತರೀಕೆರೆ ಜಗದೀಶ ಶಿವಾಚಾರ್ಯ ಶ್ರೀ, ಮಲ್ಲಿಕಾರ್ಜುನ್, ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಹಾದಿಕೆರೆ ಮಲ್ಲಯ್ಯ ಕವನ ವಾಚಿಸಿದರು. ಉಮಾ ಹಾಲುಸ್ವಾಮಿ ಸ್ವಾಗತಿಸಿದರು. ಶಿಲಾಮಠ ಶಿವಾಚಾರ್ಯ ಶ್ರೀ ಕಾರ್ಯಕ್ರಮ ನಿರೂಪಿಸಿದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.