ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ: ಶಾಸಕ ದತ್ತ
ಕ.ಪ್ರ.ವಾರ್ತೆ ಟಿ ಕಡೂರು ಟಿ ಜೂ.29
ಬಡಮಕ್ಕಳ ಜ್ಞಾನ ದಾಸೋಹದ ಜೊತೆ ಅನ್ನ ದಾಸೋಹವನ್ನು ಅನುದಾನಿತ ಶಾಲೆಗಳಿಗೂ ಬಿಡುಗಡೆ ಮಾಡಿರುವುದರಿಂದ ಎಲ್ಲ ಮಕ್ಕಳೂ ಈ ಸವಲತ್ತು ಹೊಂದಿ ಸಾಮಾಜಿಕ ನ್ಯಾಯ ಸಿಕ್ಕಂತಾಗಿದೆ ಎಂದು ಶಾಸಕ ವೈಎಸ್ವಿ ದತ್ತ ಹೇಳಿದರು.
ಪಟ್ಟಣದ ಪ್ರೇಮಜ್ಯೋತಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ 4.81 ಲಕ್ಷ ದಾಸೋಹ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಸರ್ಕಾರ ನೀಡುವ ಅನುದಾನವು ದುರ್ಬಳಕೆಯಾಗದೆ ಮಕ್ಕಳ ಶಿಕ್ಷಣ ಮತ್ತಿತರ ಉಪಯೋಗಕ್ಕಾಗಿ ಸದ್ಬಳಕೆಯಾಗಬೇಕು. ಸರ್ಕಾರಿ ಶಾಲೆಗಳಲ್ಲದೆ ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಸಲು ಅನುದಾನ ಬಿಡಗಡೆಯಾಗಿದೆ.
ಮಾನವತ್ವ ಮತ್ತು ಪ್ರೇಮವನ್ನು ಜಗತ್ತಿಗೆ ಸಾರುವ ಏಸುವಿನ ತತ್ವಗಳನ್ನು ಅಳವಡಿಸಿಕೊಂಡು ಹಲವು ವರ್ಷಗಳಿಂದ ದಶಕದಿಂದ ಸಾವಿರಾರು ವಿದ್ಯಾರ್ಥಿಗಳಿಗಾಗಿ ಶಿಕ್ಷಣ ಉಣಬಡಿಸುತ್ತಿರುವ ಪ್ರೇಮಜ್ಯೋತಿ ಶಾಲೆಯಿಂದ ಈ ಅಕ್ಷರ ದಾಸೋಹ ಕಟ್ಟಡದ ಕಾಮಗಾರಿ ಚಾಲನೆ ನೀಡುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು.
ಶ್ಲಾಘನೀಯ: ಇದು ಸರ್ಕಾರದ ಮಹತ್ವದ ಯೋಜನೆಯಾಗಿದ್ದು ಬಿಸಿಯೂಟ ಯೋಜನೆಯು ಯಶಸ್ವಿಯಾಗಿದೆ. ಹಸಿದ ಬಡ ಮಕ್ಕಳಿಗೆ ಬಿಸಿಯೂಟ ತಲಪುಬೇಕೆಂಬ ಉದ್ದೇಶದಿಂದ ಸರ್ಕಾರಿ ಅನುದಾನಿತ ಶಾಲೆಗಳಿಗೂ ಅಡುಗೆ ಮನೆ ನಿರ್ಮಾಣಕ್ಕೆ ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.
ಕಡೂರು ಶೈಕ್ಷಣಿಕ ವಲಯದ 26 ಅನುದಾನಿತ ಶಾಲೆಗೆಳ ಅಡುಗೆ ಮನಗಳ ನಿರ್ಮಾಣಕ್ಕೆ ಅನುದಾನ ಬಿಡುಗಡೆಯಾಗಿದ್ದು, ಕಟ್ಟಡದ ಕಾಮಗಾರಿ ಶೀಘ್ರದಲ್ಲಿಯೇ ಎಲ್ಲೆಡೆ ಪ್ರಾರಂಭವಾಗಲಿದೆ. ಉತ್ತಮ ಗುಣಮಟ್ಟದ ಕಾಮಗಾರಿ ಕೆಲಸ ನಡೆಯಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜೆಡಿಎಸ್ ನಗರ ಘಟಕದ ಅಧ್ಯಕ್ಷ ಭಂಡಾರಿ ಶ್ರೀನಿವಾಸ್ ಮಾತನಾಡಿ, ಸರ್ಕಾರದ ಸದುಪಯೋಗಿ ಯೋಜನೆಗಳನ್ನು ಸರಿಯಾಗಿ ಬಳಸಿಕೊಂಡು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಸರ್ಕಾರದ ಯೋಜನೆಗಳು ಉತ್ತಮ ಸದ್ಬಳಕೆಯಾಗುವುದರಿಂದ ಉಪಯೋಗವಾಗುತ್ತದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ನಿತ್ಯಾಧಾರಾ ಧರ್ಮಕೇಂದ್ರದ ಗುರುಗಳಾದ ಫಾದರ್ ಪ್ಯಾಟ್ರಿಕ್ ಮತ್ತು ವಿಶೇಷ ಆಹ್ವಾನಿತರಾದ ಫಾದರ್ ದೀಪಕ್ ಅವರಿಂದ ಆಶೀರ್ವಚನ ನೀಡಿದರು.
ಶಾಲೆಯ ಮುಖ್ಯ ಶಿಕ್ಷಣಿ ಎಲ್. ಅಂತೋಣಿಯಮ್ಮ, ದ್ರುವತಾರೆ ಶಾಲೆಯ ಮುಖ್ಯ ಶಿಕ್ಷಕ ಲಕ್ಕಪ್ಪ, ಪ್ರೇಮಜ್ಯೋತಿ ಶಾಲೆಯ ವ್ಯವಸ್ಥಾಪಕ ಜೋಸೆಫ್, ಶಿಕ್ಷಕ ವರ್ಗ, ಪುರಸಭಾ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ಕೆ.ಎಚ್.ಲಕ್ಕಣ್ಣ, ಲೋಕೇಶ್, ಕಾಂತರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ರಾಮು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

