ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ, ಕೊಪ್ಪ, ಮಾ.2: ತಾಲೂಕಿನಾದ್ಯಂತ ಅನಿಯಮಿತ ವಿದ್ಯುತ್ ಕಡಿತ ವಿರೋಧಿಸಿ ಬ್ಲಾಕ್ ಕಾಂಗ್ರೆಸ್, ಕಿಸಾನ್ ಕಾಂಗ್ರೆಸ್ ಸಮಿತಿ ಮತ್ತು ಕ್ಷೇತ್ರ ಯುವ ಕಾಂಗ್ರೆಸ್ನಿಂದ ಕೊಪ್ಪ ಮೆಸ್ಕಾಂ ಇಲಾಖೆ ಮುಂದೆ ಪ್ರತಿಭಟನೆ ನೆಡೆಸಿದರು.
ಫೆಬ್ರವರಿಯಿಂದ ಏಪ್ರಿಲ್ ವರೆಗೆ ಜಮೀನುಗಳಿಗೆ ನೀರೊದಗಿಸಲು 20 ಗಂಟೆ ವಿದ್ಯುತ್ ಅಗತ್ಯವಿದ್ದರೂ ಮೆಸ್ಕಾಂ ಇಲಾಖೆ ಕೇವಲ 5 ರಿಂದ 6 ಗಂಟೆ ವಿದ್ಯುತ್ ನೀಡುತ್ತಿದೆ. ಪರೀಕ್ಷಾ ಸಮಯದಲ್ಲಾಗುತ್ತಿರುವ ಅನಿಮಿತ ವಿದ್ಯುತ್ ಕಡಿತದಿಂದಾಗಿ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಿದೆ. ತಾಲೂಕಿನಾದ್ಯಂತ ಇರುವ ಕೃಷಿಗೆ ಪೂರಕವಾದ ಹಲವಾರು ಸಣ್ಣ ಉದ್ದಿಮೆಗಳು ನಷ್ಟ ಅನುಭಮಿಸುತ್ತಿದೆ. ಗ್ರಾಪಂ ವ್ಯಾಪ್ತಿಯ ಕುಡಿಯುವ ನೀರಿನ ಪೂರೈಕೆಗೆ ವಿದ್ಯುತ್ ಅಗತ್ಯವಿದೆ. ಸಮಸ್ಯೆಗಳ ಪರಿಹಾರಕ್ಕೆ ಸೂಕ್ತ ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಎಚ್.ಜಿ. ವೆಂಕಟೇಶ್ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರುವುದಕ್ಕೆ ಮುನ್ನಾ ರೈತರಿಗೆ ಉಚಿತ ವಿದ್ಯುತ್ ನೀಡುವುದಾಗಿ ಘೋಷಿಸಿ ಕೊಡುವ ವಿದ್ಯುತ್ ಕೊಡದೆ ರೈತರ ಕೃಷಿಗೆ ಅಡ್ಡಿಯಾಗುತ್ತಿದೆ ಎಂದರು. ಕೆ.ಜಿ. ಶೋಭಿಂತ್, ನಾರ್ವೆ ಅಶೋಕ್, ನವೀನ್, ವೆಂಕಟೇಶ್, ಸತೀಶ್, ನಾಗೇಶ್, ಮೀಗ ಚಂದ್ರಶೇಖರ್, ಕಳಸಪ್ಪ, ನುಗ್ಗಿ ಮಂಜು, ಸಂಜಯ್, ಓಣಿ ತೋಟರತ್ನಾಕರ್, ಎಚ್.ಎಸ್. ಇನೇಶ್, ಶಶಿಕುಮಾರ್, ಎಂ.ಸಿ. ಅಶೋಕ್, ಸಚಿನ್ ಮೀಗಾ, ಟಿ.ಡಿ. ರಾಜೇಗೌಡ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

