ಚಿಕ್ಕಮಗಳೂರು

ಕೇಂದ್ರದ ಕ್ರಮಕ್ಕೆ ಖಂಡನೆ; ಮುಸ್ಲಿಯಾರ್

Published On :

ಮೂಡಿಗೆರೆ: ಮಣಿಪುರ ರಾಜ್ಯದಲ್ಲಿ ಶಸ್ತ್ರ ಸಜ್ಜಿತ ಸೇನೆಯ ನಿಯೋಜನೆಯನ್ನು ವಿರೋಧಿಸಿ ಇರೋಮ್ ಶರ್ಮಿಳಾ ಅವರು ಕಳೆದ 13 ವರ್ಷಗಳಿಂದ ನಿರಂತರ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರೂ ಕೇಂದ್ರ ಸರಕಾರ ಪರಿಹಾರ ಕಂಡುಕೊಳ್ಳಲು ಪ್ರಯುತ್ನಿಸದಿರುವುದು ಖಂಡನಾರ್ಹ ಕ್ರಮವಾಗಿದೆ ಎಂದು ಜಿಲ್ಲೆಯ ಸಾಮಾಜಿಕ ಕಾರ್ಯಕರ್ತ ಕೆ.ಎಚ್. ಮುಸ್ಲಿಯಾರ್ ಆರೋಪಿಸಿದ್ದಾರೆ.
 ಈ ಕುರಿತು ಬುಧವಾರ ಹೇಳಿಕೆ ನೀಡಿದ್ದು, ಮಣಿಪುರದಲ್ಲಿ ಭೋಟೋ ಉಗ್ರಗಾಮಿಗಳನ್ನು ಮಟ್ಟ ಹಾಕುವ ನೆಪದಲ್ಲಿ ರಾಜ್ಯದ ಮುಗ್ದ, ಅಮಾಯಕ ಮತ್ತು ಬಡವರ ಮೇಲೆ ವಿಶೇಷ ಸೇನಾ ಕಾಯ್ದೆಯನ್ನು ಜಾರಿಗೊಳಿಸಿರುವ ಸರಕಾರದ ಕ್ರಮವು ಅತ್ಯಂತ ಹೇಯವಾಗಿದೆ. ಸರಕಾರದ ಈ ಪೈಶಾಚಿಕ ಕೃತ್ಯವನ್ನು ವಿರೋಧಿಸಿ ಕಳೆದ 13 ವರ್ಷಗಳಿಂದ ಉಪವಾಸ ಉಪವಾಸ ನಡೆಸುತ್ತಿರುವ ಶರ್ಮಿಳಾರ ಮೇಲೆ ಆತ್ಮಹತ್ಯೆಗೆ ಪ್ರಯತ್ನ ಪ್ರಕರಣ ದಾಖಲಿಸಿ ಕ್ರೋರವಾಗಿ ನಡೆದುಕೊಳ್ಳುತ್ತಿರುವುದು ಸರಿಯಲ್ಲ.
ಕಾನೂನು ವ್ಯವಸ್ಥೆ ಕೆಟ್ಟಿದೆ: ಆದ್ದರಿಂದ ಕೇಂದ್ರ ಸರಕಾರವು ಮಣಿಪುರ ರಾಜ್ಯದಲ್ಲಿ ಸೇನೆಗೆ ನೀಡಿರುವ ಪರಮಾಧಿಕಾರವನ್ನು ತಕ್ಷಣ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ. ಅಲ್ಲದೇ ಕರ್ನಾಟಕ ಸೇರಿದಂತೆ ದೇಶದ ವಿವಿಧೆಡೆ ಮಹಿಳೆಯರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿರಲು ಆಳುವ ಸರಕಾರದ ದುರಾಡಳಿವೇ ಕಾರಣವಾಗಿದೆ. ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ, ಅತ್ಯಾಚಾರ, ಹಿಂಸಾತ್ಮಕ ಚಟುವಟಿಕೆಗಳು ನಡೆಯಲು ಇಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದರ ಧ್ಯೋತಕವಾಗಿದೆ.
ದೌರ್ಜನ್ಯಗೊಳಗಾಗುವ ಮಹಿಳೆಯರಿಗೆ ಪರಿಹಾರ ನೀಡುವಾಗ ತಾರತಮ್ಯ ಎಸಗಬಾರದು ಹಾಗೂ ಕೃತ್ಯ ಎಸಗುವವರು ಎಷ್ಟೇ ಬಲಿಷ್ಟರಾದರೂ ಅಂಥಹವರನ್ನು ನಿರ್ದಾಕ್ಷಿಣ್ಯ ರೀತಿಯಲ್ಲಿ ಉಗ್ರ ಶಿಕ್ಷೆಗೆ ಗುರಿಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.