ಶಾಂತಿಯುತ ಮತದಾನ: ಶೇ.75 ಮತ ಚಲಾವಣೆ
ಕಡೂರು: ಪಟ್ಟಣದಲ್ಲಿ ಗುರುವಾರ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಬಿಗಿ ಬಂದೋಬಸ್ತಿನಿಂದ ಕೂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಶಾಂತಿಯುತ ಮತದಾನ ನಡೆದು ಜನರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಮೂಲಕ ಶೇ 75.04ರಷ್ಟು ಮತ ಚಲಾವಣೆ ಆಯಿತು.
ಕಡೂರು ಪಟ್ಟಣದಲ್ಲಿರುವ 23 ವಾರ್ಡುಗಳಲ್ಲಿ 22,651 ಮತದಾರರಿದ್ದು ಬೆಳಗ್ಗೆಯಿಂದಲೇ ಬಿರುಸಿನ ಮತದಾನ ಆರಂಭವಾಗಿ ಉತ್ತಮ ಬಂದೋಬಸ್ತಿನಿಂದ ಆಯೋಜಿಸಲಾಗಿದ್ದ ಪುರಸಭಾ ಚುನಾವಣೆಯಲ್ಲಿ ಕಡೂರು ಪಟ್ಟಣದ ಮತದಾರರು ಮತದಾನ ಮಾಡುವ ಕಾರ್ಯದಲ್ಲಿ ಭಾಗವಹಿಸಿದರು.
ಪಟ್ಟಣದ ಕೋಟೆಯ 16ನೇ ವಾರ್ಡಿನಲ್ಲಿ ಶೇ. 92 ಮತ ಚಲಾವಣೆಯಾಗಿ ಹೆಚ್ಚು ಮತದಾನ ನಡೆದ ಕೇಂದ್ರ ಎನಿಸಿಕೊಂಡರೆ, ಮುದಿಯಪ್ಪ ಬಡಾವಣೆಯ 23ನೇ ಮತಗಟ್ಟೆಯಲ್ಲಿ ಶೇ.47 ರಷ್ಟು ಮಾತ್ರ ಮತದಾನ ನಡೆದು ಅತಿ ಕಡಿಮೆ ಮತದಾನ ನಡೆ ಕೇಂದ್ರವೆನಿಸಿಕೊಂಡಿತು.
ಬಿರುಸಿನ ಮತದಾನ: ಬೆಳಗ್ಗೆಯಿಂದಲೇ ಮತದಾನ ಬಿರುಸಿನಿಂದ ಆರಂಭವಾಗಿದ್ದು, ಬಿಸಿಲು ಹೆಚ್ಚಾದ್ದರಿಂದ 1.30 ರ ಮೇಲೆ ಸ್ಪಲ್ಪಮಟ್ಟಿಗೆ ಮತದಾರರು ಮತಗಟ್ಟೆಗಳಿಗೆ ಬರುವುದು ಕಡಿಮೆಯಾದರೂ 4 ಗಂಟೆ ನಂತರ ಚುರುಕಿನಿಂದ ಸಾಗಿದ ಮತದಾನದಲ್ಲಿ ಜನರು ಭಾಗವಹಿಸಿದ್ದರು.
14 ನೇ ವಾರ್ಡಿನಲ್ಲಿ ಮತದಾನ ನಡೆಯುವಾಗ ಚುನಾವಣಾ ಆರ್ ಒಗಳು ಮತದಾರರು ಆಧಾರ್ ಕಾರ್ಡ್ ನೀಡಿ ಮತದಾನದ ಮಾಡಲು ತೆರಳಿದಾಗ ಅಧಿಕಾರಿಗಳು ಮಧ್ಯಾಹ್ನ 12 ಗಂಟೆಗೆ ಈ ಆಧಾರ್ ಕಾರ್ಡ್ಗಳನ್ನು ನಿರಾಕರಿಸಿ ಮತದಾನಕ್ಕೆ ಅವಕಾಶ ನೀಡಲಿಲ್ಲ ಎಂದು ಬಿಜೆಪಿ ಅಭ್ಯರ್ಥಿ ಆರೋಪಿಸಿದ ನಂತರ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನಂತರ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ ಎಂದು ಚುನಾವಣಾ ಆರ್ ಒ ಗಳು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

