ಚಿಕ್ಕಮಗಳೂರು

ಶೃಂಗೇರಿ 11 ವಾರ್ಡ್‌ಗಳಲ್ಲಿ ಶೇ. 77.08 ಮತದಾನ

Published On :

ಶೃಂಗೇರಿ: ಪಟ್ಟಣದ 11 ವಾರ್ಡ್‌ಗಳಲ್ಲಿ ಗುರುವಾರ ಶಾಂತಿಯುತವಾಗಿ ಮತದಾನ ನಡೆಯುವುದರೊಂದಿಗೆ ಶೇ 77.08 ಮಂದಿ ಮತದಾರರು ತಮ್ಮ ಹಕ್ಕು ಚಲಾಯಿಸಿದರು.
1 ನೇ ವಾರ್ಡ್ ಶೇ. 76.38, 2 ನೇ ವಾರ್ಡ್ ಶೇ. 71.10, 3ನೇ ವಾರ್ಡ್ ಶೇ. 76.86, 4 ನೇ ವಾರ್ಡ್ ಶೇ 82.13, 5 ನೇ ವಾರ್ಡ್ ಶೇ 84.21, 6 ನೇ ವಾರ್ಡ್ 73.48,7 ನೇ ವಾರ್ಡ್ 72.64, 8 ನೇ ವಾರ್ಡ್ 75.01, 9 ನೇ ವಾರ್ಡ್ 76.92, 10 ನೇ ವಾರ್ಡ್ 80.79, 11 ನೇ ವಾರ್ಡ್ 82.15 ಶೇಕಡಾವಾರು ಮತದಾನ ನಡೆಯಿತು.
ಬೆಳಗ್ಗೆಯಿಂದ ಎಲ್ಲಾ ಮತಗಟ್ಟೆಗಳಲ್ಲಿ ಮಂದಗತಿಯಲ್ಲಿ ಆರಂಭವಾದ ಮತದಾನ ಪ್ರಕಿಯೆ ಮದ್ಯಾಹ್ನದವರೆಗೂ ನಿಧಾನಗತಿಯಲ್ಲಿ ಸಾಗಿತು. ಅಭ್ಯರ್ಥಿಗಳು, ಕಾರ್ಯಕರ್ತರು ಉತ್ಸಾಹದಿಂದ ಕರ್ತವ್ಯ ನಿರ್ವಹಿಸುತ್ತಿದರು. ಸಂಜೆಯ ವೇಳೆಗೆ ಮತದಾನ ಚುರುಕುಗೊಂಡಿತು. ಮಧ್ಯಾಹ್ನ ಮೋಡಕವಿದ ವಾತಾವರಣದ ನಡುವೆ ಮತದಾನ ಮಂದಗತಿಯಲ್ಲಿ ಸಾಗಿತು.
ಸಂಜೆ ಸಾಧಾರಣ ಮಳೆಯ ಆರ್ಭಟದ ನಡುವೆ ಮತದಾನ ಪ್ರಕಿಯೆಯೂ ಚುರುಕುಗೊಂಡಿತು. ಪಟ್ಟಣದ ಎಲ್ಲಾ ವಾರ್ಡ್‌ಗಳ ಬಳಿ ಮುಂಜಾಗ್ರತಾ ಕ್ರಮವಾಗಿ ಬಿಗು ಬಂದೋಬಸ್ತ್ ಏರ್ಪಡಿಸಲಾಗಿತ್ತು. ಅಹಿತಕರ ಘಟನೆ ನಡೆಯದೇ ಮತದಾನ ಶಾಂತಿಯುತವಾಗಿ ನಡೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.