ಚಿಕ್ಕಮಗಳೂರು

ದೌರ್ಜನ್ಯಕ್ಕೆ ನೈತಿಕ ಕುಸಿತ ಕಾರಣ

Published On :

ನರಸಿಂಹರಾಜಪುರ: ಸಮಾಜದಲ್ಲಿ ನೈತಿಕತೆಯ ಕುಸಿತವೇ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗಲು ಕಾರಣ ಎಂದು ವಕೀಲೆ ಎಂ.ಸಿ. ಸುಮ ಅಭಿಪ್ರಾಯಪಟ್ಟರು.
 ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ಮಹಿಳೆ ಸುಶಿಕ್ಷತೆಯಾಗಿ, ಆರ್ಥಿಕವಾಗಿ ಸದೃಢವಾಗಿ, ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡುತ್ತಿದ್ದರೂ ಲೈಂಗಿಕ ಕಿರುಕುಳ ಹಾಗೂ ಕೌಟಂಬಿಕ ಸಮಸ್ಯೆಗಳು ಮಹಿಳೆಯನ್ನು ಜೀವಂತವಾಗಿ ಕಾಡುತ್ತಿವೆ ಎಂದರು.
 ಮಹಿಳೆಗೆ ಜೀವನದಲ್ಲಿ ಎಲ್ಲಾ ಸ್ವಾತಂತ್ರ್ಯ ಇದ್ದರೂ ಕುಟಂಬದ ವ್ಯವಸ್ಥೆಯಲ್ಲಿ ಕೆಲವು ಹೊಂದಾಣಿಕೆ ಬಾಳ್ವೆಯೂ ಅಗತ್ಯ. ಹೊಂದಾಣಿಕೆ ಕೊರತೆಯಿಂದಾಗಿ ಇತ್ತೀಚಿಗೆ ಹಲವು ದಂಪತಿಗಳಲ್ಲಿ ವಿವಾಹ ವಿಚ್ಛೇದನ ಪ್ರಕರಣಗಳು ಜಾಸ್ತಿಯಾಗುತ್ತಿವೆ ಎಂದರು.
 ಅವಿಭಕ್ತ ಕುಟಂಬಗಳು ಮರೆಯಾಗುತ್ತಿದ್ದು, ಎಲ್ಲಾ ಕಡೆ ಸಣ್ಣ ಕುಟಂಬಗಳೇ ಜಾಸ್ತಿಯಾಗುತ್ತಿವೆ. ಇದರಿಂದ ಮಕ್ಕಳು ಪ್ರೀತಿಯಿಂದ ವಂಚಿತರಾಗುತ್ತಿದ್ದಾರೆ. ಮಹಿಳೆಯಲ್ಲಿ ತಾಯ್ತನ ಕಂಡಾಗ ಮಾತ್ರ ಲೈಂಗಿಕ ಕಿರುಕುಳ ಕಡಿಮೆಯಾಗಬಹುದು ಎಂದು ಅವರು ತಿಳಿಸಿದರು.
 ಸಭೆಯ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಕೆ. ಪೂರ್ಣೇಶ್ ವಹಿಸಿದ್ದರು. ಉಪನ್ಯಾಸಕರಾದ ರತ್ನ, ಆರಾಧನ, ಪಂದನ, ವಿಭಾ, ಸಂದ್ಯಾ, ಮಂಜುಳಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.