ಚಿಕ್ಕಮಗಳೂರು

ಸಹಕಾರದೊಂದಿಗೆ ಗುಣಮಟ್ಟ ಪರಿಶೀಲಿಸಿ

Published On :

ಚಿಕ್ಕಮಗಳೂರು:  ಅಭಿವೃದ್ಧಿ ಕೆಲಸಗಳಿಗೆ ಗ್ರಾಮಸ್ಥರು ಸಹಕಾರ ನೀಡುವುದರ ಜೊತೆಗೆ ಕಾಮಗಾರಿ ಗುಣಮಟ್ಟವನ್ನೂ  ಗಮನಿಸಬೇಕು. ಮಲೆನಾಡು ಭಾಗದಲ್ಲಿ ಎಷ್ಟೇ ಅಭಿವೃದ್ಧಿ ಕೆಲಸ ಮಾಡಿದರೂ ಕಾಣುವುದಿಲ್ಲ. ವಿಶೇಷ ಅನುದಾನ ತಂದು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಲಾಗಿದೆ ಎಂದ ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಹೇಳಿದರು.
ತಾಲೂಕಿನ ತಳಿಹಳ್ಳ ಗ್ರಾಪಂನ ವಿವಿಧ ಕಾಮಗಾರಿಗಳನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್, ಜೆಡಿಎಸ್‌ಗಳು ಚುನಾವಣಾ ಸಂದರ್ಭದಲ್ಲಿ ಮಾತ್ರ ಗ್ರಾಮ ಮತ್ತು ಕಾಲೊನಿಗಳಿಗೆ ಬಂದು ಮತ ಪಡೆದು ಹೋದವರು ಮತ್ತೆ ಚುನಾವಣಾ ಸಂದಭಂದಲ್ಲಿ ಕಾಣಸಿಗುತ್ತಾರೆ ಎಂದು ಆರೋಪಿಸಿದರು.
ಮಾದರಿ ಕ್ಷೇತ್ರ: ಬಿಜೆಪಿ  ಅಧಿಕಾರಕ್ಕೆ ಬಂದು ಎಲ್ಲಾ ಗ್ರಾಮ ಮತ್ತು ಕಾಲೊನಿಗಳಲ್ಲಿ ಕಾಂಕ್ರಿಟ್ ರಸ್ತೆ ನಿರ್ಮಿಸಿ ಅಭಿವೃದ್ಧಿಯಲ್ಲಿ ಮಾದರಿ ಕ್ಷೇತ್ರವನ್ನಾಗಿ ಮಾಡಿದ್ದೇವೆ. ಸಮಾಜದ ಎಲ್ಲಾ ವರ್ಗದವರಿಗೂ ವಿವಿಧ ಯೋಜನೆ  ಮೂಲಕ ಸಾಕಷ್ಟು ಸೌಲಭ್ಯ ಒದಗಿಸಿದ್ದೇವೆ. ರೈತರಿಗೆ ಸುವರ್ಣ ಭೂಮಿ ಯೋಜನೆಯಡಿ ಅವರ ಖಾತೆಗೆ ನೇರವಾಗಿ ಹಣ ಜಮಾ ಮಾಡಿ ಅವರ ಕಷ್ಟಕ್ಕೆ ನೆರವಾಗಿದ್ದೇವೆ ಎಂದರು.
ಮನುಷ್ಯನ ಹುಟ್ಟಿನಿಂದ ಸಾವಿನವರೆಗೂ ಸರ್ಕಾರ ಒಂದಿಲ್ಲೊಂದು ಯೋಜನೆ ರೂಪಿಸುವ ಮೂಲಕ ಜನರ ಸಮಸ್ಯೆಗೆ ಸ್ಪಂದಿಸಿದೆ. ಆಶ್ರಯ ಮನೆ ನಿರ್ಮಾಣಕ್ಕೆ ರು. 75,000, ಬಡವರಿಗೆ ಬಿಪಿಎಲ್ ಕಾರ್ಡ್ ಮೂಲಕ ರು. 2ಕ್ಕೆ ಅಕ್ಕಿ ನೀಡಲಾಗುತ್ತಿದೆ ಎಂದರು.
ಅಭಿವೃದ್ಧಿಗೆ ಶ್ರಮ: ಈ ಗ್ರಾಪಂಗೆ  ರು. 3 ಕೋಟಿಗೂ ಹೆಚ್ಚು ಅನುದಾನ ನೀಡಿ ಗ್ರಾಮದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗಿದೆ. ಜಕ್ಕನಹಳ್ಳಿಯ 10ನೇ ಮೈಲಿಗಲ್ಲಿನ ಅಶೋಕ ನಗರದ ಕಾಂಕ್ರಿಟ್ ರಸ್ತೆಗೆ ರು. 10 ಲಕ್ಷ, ಸಮುದಾಯ ಭವನಕ್ಕೆ ರು. 10 ಲಕ್ಷ, ಗಂಗೆ ಕಾಲೋನಿಯ ಕುಡಿಯುವ ನೀರಿನ ಕಾಮಗಾರಿಗೆ ರು. 24 ಲಕ್ಷ, ಕಾಲೋನಿಯ ಕಾಂಕ್ರೀಟ್ ರಸ್ತೆ ರು. 10 ಲಕ್ಷ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಶೀಘ್ರ ಕಾಮಗಾರಿ  ಮುಗಿಸಲಾಗುವುದು ಎಂದರು.
ಬಿಜೆಪಿ ನಗರಾಧ್ಯಕ್ಷ ಕೋಟೆ ರಂಗನಾಥ್ ಮಾತನಾಡಿ, ಕ್ಷೇತ್ರದ ಶಾಸಕರು ಸರಳ ಸಜ್ಜನಿಕೆ ಸ್ವಾಭಾವದವರಾಗಿದ್ದು, ಜನತೆಯೊಂದಿಗೆ ನಿತ್ಯವೂ ಸಂಪರ್ಕದಲ್ಲಿದ್ದು, ಜನರ ಕಷ್ಟಸುಖಗಳಲ್ಲಿ ಭಾಗಿಯಾಗಿದ್ದೇವೆ ಎಂದರು.
ನಾವುಗಳು ಯಾವುದೇ ಚುನಾವಣಾ ಗಿಮಿಕ್ ಮಾಡದೇ ಅಭಿವೃದ್ಧಿ ಕೆಲಸಗವನ್ನು ಎಲ್ಲಾ ಗ್ರಾಮಗಳಲ್ಲೂ ಕೈಗೊಂಡು ಜನರ ವಿಶ್ವಾಸ ಗಳಿಸಿದ್ದೇವೆ ಎಂದು ಹೇಳಿದರು.
ಜಿಪಂ ಸದಸ್ಯೆ ಭಾಗ್ಯ ರಂಗನಾಥ್, ಗ್ರಾಪಂ ಅಧ್ಯಕ್ಷೆ ಲಕ್ಷ್ಮಮ್ಮ, ಮಾಜಿ ಅಧ್ಯಕ್ಷ ಸದಾಶಿವ, ಸದಸ್ಯ ಮಂಜುನಾಥ್, ಗೌರಮ್ಮ, ಸಿದ್ದರಾಜು ಮುಖಂಡ ಗಿರೀಶ್, ದೇವರಾಜ್, ಕೃಷ್ಣಪ್ಪ, ಸುರೇಶ್, ಮಹೇಶ್‌ಗೌಡ, ಬಸವರಾಜ್, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು. ಅರುಣಾಕ್ಷಿ ಸ್ವಾಗತಿಸಿದರು. ವೇದ ಕಾರ್ಯಕ್ರಮ ನಿರೂಪಿಸಿದರು. ಗೀತಾ ವಂದಿಸಿದರು.

ವಿವಿ ವಿದ್ಯಾಭ್ಯಾಸದ ಗುಣಮಟ್ಟ ಕಟ್ಟಡದಿಂದ ಅಳೆಯಬೇಡಿ
ಕ.ಪ್ರ.ವಾರ್ತೆ ಟಿ ಕೊಪ್ಪ ಟಿ  ಮಾ.10
ವಿದ್ಯಾಲಯಗಳಲ್ಲಿನ ವಿದ್ಯಾಭ್ಯಾಸದ ಗುಣಮಟ್ಟವನ್ನು ಕಟ್ಟಡಗಳಿಂದ ಅಳೆಯುವ ಬದಲು ಉಪಾನ್ಯಾಸಕರು ಬೋಧಿಸುವ ಪಾಠ, ಪ್ರವಚನಗಳಿಂದ ವಿದ್ಯಾರ್ಥಿಗಳು ಎಷ್ಟರ ಮಟ್ಟಿಗೆ ವಿದ್ಯಾರ್ಜನೆ ಮಾಡಿಕೊಂಡಿದ್ದಾರೆ ಎಂಬುದರ ಮೇಲೆ  ವಿದ್ಯಾಲಯಗಳ ಗುಣಮಟ್ಟವನ್ನು ಅಳೆಯಬೇಕಾಗಿದೆ ಎಂದು ಕುವೆಂಪು ವಿವಿ ಭೌತವಿಜ್ಞಾನ ವಿಭಾಗದ ನಿರ್ದೇಶಕ ಸಿ.ಎಸ್. ಬಾಗೇವಾಡಿ ಹೇಳಿದರು.
ಇಲ್ಲಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಅನ್ವಯಿಕ ಗಣಿತ ವಿಜ್ಞಾನ ರಾಷ್ಟ್ರೀಯ ವಿಚಾರ ಸಂಕೀರ್ಣ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಪರೀಕ್ಷೇಯಲ್ಲಿ ಅಂಕಗಳಿಸುವ ಉದ್ದೇಶಕ್ಕಾಗಿ ಕಂಠಪಾಠದ ಮೊರೆ ಹೋಗಿದ್ದಾರೆ. ಅಂಕಗಳಿಸುವ ಉದ್ದೇಶದ ಕಲಿಕೆಗಿಂತ ಜ್ಞಾನಾರ್ಜನೆಗಾಗಿ ವ್ಯಾಸಂಗ ಮಾಡಬೇಕು ಎಂದರು.
ಶಾಶ್ವತ ಉಳಿವು: ಅಂಕಗಳಿಕೆಯ ವಿದ್ಯೆ ಪರೀಕ್ಷೆ ಮುಗಿಯುವವರೆಗೆ ಮಾತ್ರ ನೆನಪಲ್ಲಿರುತ್ತದೆ. ವಿಷಯಾಸಕ್ತಿ ಬೆಳೆಸಿಕೊಂಡು ವಿದ್ಯಾರ್ಜನೆ ಮಾಡಿದರೆ ಅದು ಶಾಶ್ವತವಾಗಿ ಉಳಿಯುತ್ತದೆ. ರಾಮಾನುಜಂ ಗಣಿತ ವಿಷಯದಲ್ಲಿ, ಐನ್‌ಸ್ಟೀನ್, ನ್ಯೂಟನ್ ಅಂತವರು ವಿಜ್ಞಾನ ವಿಷಯದಲ್ಲಿ ಆಸಕ್ತಿ ಇಟ್ಟುಕೊಂಡು ಸ್ವತಃ ಪ್ರಯೋಗ ನಡೆಸಿರುವುದರಿಂದ ತಮ್ಮ ಕ್ಷೇತ್ರದಲ್ಲಿ ಮೇರು ವ್ಯಕ್ತಿಗಳಾಗಿ ನಿಂತಿದ್ದಾರೆ. ಸತತ ಓದು ಹೆಚ್ಚಿನ ಜ್ಞಾನಾರ್ಜನೆಗೆ ಕಾರಣವಾಗುತ್ತದೆ ಎಂದರು.
ಶಿಕ್ಷಣ ಪ್ರಯೋಜನ ಗ್ರಾಮೀಣ ಭಾಗಕ್ಕೆ ಹೆಚ್ಚು ಸಿಗಬೇಕು ಎಂದರು. ಪ್ರೊ.ಸಿ.ಎಸ್. ಬಾಗೇವಾಡಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಅದ್ದಡ ಸತೀಶ್ ವಿಚಾರ ಸಂಕಿರ್ಣ ಉದ್ಘಾಟಿಸಿದರು. ಕಾಲೇಜು ಪ್ರಾಚಾರ್ಯ  ಕೆ.ಸಿ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ. ಎಸ್.ಕೆ. ನರಸಿಂಹಮೂರ್ತಿ, ಪ್ರೊ. ಎನ್. ಭಾಸ್ಕರ್ ರೆಡ್ಡಿ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.