ಚಿಕ್ಕಮಗಳೂರು

ಕಾಲುವೆಗೆ ಬೈಕ್ ಬಿದ್ದು ಯುವಕ ಸಾವು

Published On :

ಚಿಕ್ಕಮಗಳೂರು: ರಸ್ತೆ ಡುಬ್ಬುವಿನಲ್ಲಿ ಬೈಕ್ ಸಮತೋಲನ ತಪ್ಪಿ ಸುಮಾರು 15 ಅಡಿ ಆಳದ ಕಾಲುವೆಗೆ ಬಿದ್ದು ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಮಂಗಳವಾರ ರಾತ್ರಿ ಇಲ್ಲಿನ ದಂಡರಮಕ್ಕಿ ಕೆರೆ ಏರಿ ಮೇಲೆ ನಡೆದಿದೆ.
ನವನೀತ್ ಪೈ (22) ಮೃತಪಟ್ಟ ದುರ್ದೈವಿ. ಇದೇ ಬೈಕಿನಲ್ಲಿ ಕುಳಿತಿದ್ದ ಸುಮುಖ್ ಹಾಗೂ ಸಮರ್ಥ್ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ನಗರದ ಎಐಟಿ ಕಾಲೇಜಿನಲ್ಲಿ ಮಂಗಳವಾರ ಆರಂಭಗೊಂಡ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾನಿಲಯದ ಅಂತರ ಕಾಲೇಜು ಮಟ್ಟದ ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಶಿವಮೊಗ್ಗದ ಜವಹರಲಾಲ್ ನೆಹರು ನ್ಯಾಷನಲ್ ಕಾಲೇಜಿ (ಜೆಎನ್‌ಸಿಸಿ)ನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ತೀರ್ಥಹಳ್ಳಿಯ ನವನೀತ್ ಪೈ ಆಗಮಿಸಿದ್ದರು.
ಮಂಗಳವಾರ ರಾತ್ರಿ ಊಟಕ್ಕಾಗಿ ಪಲ್ಸರ್ ಬೈಕಿನಲ್ಲಿ ನವನೀತ್ ಪೈ, ಸುಮುಖ್, ಸಮರ್ಥ್ ಬರುತ್ತಿದ್ದರು. ಇಲ್ಲಿನ ದಂಟರಮಕ್ಕಿ ಕೆರೆ ಏರಿಯ ಮೇಲೆ ರಸ್ತೆಗೆ ಹಾಕಿರುವ  ಹಪ್ಸ್ ಕಾಣದೆ, ವೇಗವಾಗಿ ಬಂದ ಬೈಕ್ ಸಮತೋಲನ ತಪ್ಪಿದ್ದು, ಆಗ ಹಿಂಬದಿಯಲ್ಲಿ ಕುಳಿತುಕೊಂಡಿದ್ದ ಸುಮುಖ್, ಸಮರ್ಥ್ ಕೆಳಗೆ ಬಿದ್ದಿದ್ದಾರೆ. ವೇಗವಾಗಿ ಚಲಿಸುತ್ತಿದ್ದ ಬೈಕ್ ಕಾಲುವೆಗೆ ಹೋಗಿ ಬಿದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದ ನವನೀತ್ ಪೈ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಬುಧವಾರ ಬೆಳಿಗ್ಗೆ ಘಟನೆ ನಡೆದ ಸ್ಥಳದಲ್ಲಿ ನೂರಾರು ಜನ ಸೇರಿದ್ದರು.
ದಂಟರಮಕ್ಕಿ ಕೆರೆ ಏರಿಯನ್ನು ಅಗಲ ಮಾಡಿ ಡಾಂಬರೀಕರಣ ಮಾಡಿ ಒಂದು ಕಡೆಯಲ್ಲಿ ಹಂಪ್ಸ್ ಹಾಕಲಾಗಿದೆ. ಆದರೆ, ಇಲ್ಲಿರುವ ಸೇತುವೆ ಮಾತ್ರ ಅಗಲ ಮಾಡಿಲ್ಲ. ಬೇರೆ ಊರುಗಳಿಂದ ಬರುವ ಬಹಳಷ್ಟು ವಾಹನ ಚಾಲಕರಿಗೆ ಇದು ತಕ್ಷಣಕ್ಕೆ ತಿಳಿಯುವುದಿಲ್ಲ. ಈ ಸೇತುವೆ ಅಗಲ ಪಡಿಸುವ ಜತೆಗೆ ಇಲ್ಲಿ ಎಚ್ಚರಿಕೆಯ ನಾಮಫಲಕ ಹಾಕುವ ಅಗತ್ಯತೆ ಇದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.