ಚಿಕ್ಕಮಗಳೂರು

ಕರಕುಚ್ಚಿ ಪ್ರಕರಣ: ಪ್ರೇಮಿಯ ಶವ ಪತ್ತೆ

Published On :

ಕ.ಪ್ರ.ವಾರ್ತೆ, ತರೀಕೆರೆ, ಮಾ.15
ಕರಕುಚ್ಚಿಯ ಯುವತಿಯ ಪ್ರೇಮ ಪ್ರಕರಣದ ಘರ್ಷಣೆಯಲ್ಲಿ  ಚಾನಲ್ ಪಾಲಾಗಿದ್ದ ಪ್ರೇಮಿ ಜಗದೀಶ್ ಶವ ಶುಕ್ರವಾರ ಕಾಲುವೆಯ ಎರಡು ಕಿ.ಮೀ. ದೂರದಲ್ಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಪ್ರಕರಣದ ವಿವರ: ಸಮೀಪದ ಕರಕುಚ್ಚಿಯ ಯುವತಿಯೊಬ್ಬಳಿಗೆ ಸಂಬಂಧಿಸಿದಂತೆ ಪ್ರೀತಿ ವಿಷಯಕ್ಕೆ ಪರಸ್ಪರ ವಾಗ್ವಾದ ನಡೆದು, ಹುಡುಗಿಯ ಅಣ್ಣ ದೇವೇಂದ್ರ, ಪ್ರೇಮಿ ಜಗದೀಶ್ ಮತ್ತು ಹುಡುಗಿಯನ್ನು ಬುಧವಾರ ತಡರಾತ್ರಿ ಬಾವಿಕೆರೆ ಬಳಿಯ ಚಾನಲ್‌ಗೆ ತಳ್ಳಿದ್ದು, ಹುಡುಗಿ ಪ್ರಾಣಾಪಾಯದಿಂದ ಪಾರಾಗಿದ್ದು, ಹುಡುಗಿಯ ಅಣ್ಣ ಮತ್ತು ಪ್ರೇಮಿ ಜಗದೀಶ್ ನಾಪತ್ತೆಯಾಗಿದ್ದರು.
ಇದೀಗ  ಶುಕ್ರವಾರ ಸಂಜೆ 6 ಗಂಟೆಯಲ್ಲಿ  ಪ್ರೇಮಿ ಜಗದೀಶ್ ಅವರ ಶವ ಕಾಲುವೆಯಿಂದ ಎರಡು ಕೀ.ಮೀ.ದೂರದಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗಿಯ ಅಣ್ಣ ದೇವೇಂದ್ರ ನಾಪತ್ತೆಯಾಗಿದ್ದು ಪೊಲೀಸರು ಆತನ ಪತ್ತೆಗಾಗಿ ಜಾಲ ಬೀಸಿದ್ದಾರೆ.
ಶನಿವಾರ ಪ್ರೇಮಿ ಜಗದೀಶ್ ಶವದ ಮರಣೋತ್ತರ ಪರೀಕ್ಷೆಯನ್ನು ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.