ಚಿಕ್ಕಮಗಳೂರು

ಇಂದು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ

Published On :

ಕ.ಪ್ರ.ವಾರ್ತೆ, ನರಸಿಂಹರಾಜಪುರ.ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಆಶ್ರಯದಲ್ಲಿ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾ.16 ಶನಿವಾರ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಲಿದೆ.
 ಬೆಳಗ್ಗೆ 8 ಗಂಟೆಗೆ ರಾಜ್ಯ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಡಿ.ಎನ್. ಜೀವರಾಜ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ ಎಸ್.ಜಿ. ಕೃಷ್ಣಮೂರ್ತಿ ಕಸಾಪ ಧ್ವಜಾರೋಹಣ ನೆರವೇರಿಸಲಿದ್ದಾರೆ. ಜಿಲ್ಲಾ ಕಸಾಪ ಅಧ್ಯಕ್ಷ ಎನ್.ಎಸ್. ಶಿವಸ್ವಾಮಿ ನಾಡಧ್ವಜಾರೋಹಣ ಮಾಡಲಿದ್ದಾರೆ.
 ಸಮ್ಮೇಳಾಧ್ಯಕ್ಷರ ಮೆರವಣಿಗೆಯನ್ನು ನಿವೃತ್ತ ಶಿಕ್ಷಕ ವಿ.ಎಸ್. ಕೃಷ್ಣಭಟ್ ಉದ್ಘಾಟಿಸಲಿದ್ದಾರೆ. ಮೆರವಣಿಗೆಯ ನಂತರ ಸಮ್ಮೇಳಾಧ್ಯಕ್ಷರನ್ನು ನೂತವಾಗಿ ನಿರ್ಮಿಸಿರುವ ನಿರ್ವಾಣಪ್ಪ ಶೆಟ್ಟಿ ಮಹಾದ್ವಾರದ ಮೂಲಕ ರಾಷ್ಟ ಕವಿ ಕುವೆಂಪು ಮಹಾಮಂಟಪ ಹಾಗೂ ಟಿ.ಎಸ್. ರಾಮಚಂದ್ರರಾವ್ ವೇದಿಕೆಗೆ ಕರೆ ತರಲಾಗುವುದು.
ಸಚಿವರಿಂದ ಉದ್ಘಾಟನೆ: ಬೆಳಗ್ಗೆ 10.30 ಗಂಟೆಗೆ 6 ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಉದ್ಘಾಟನೆ  ನಡೆಯಲಿದೆ. ಸ್ವಾಗತ ಸಮಿತಿ ಅಧ್ಯಕ್ಷ ಕೆ.ಟಿ. ವೆಂಕಟೇಶ್ ಸ್ವಾಗತಿಸಲಿದ್ದಾರೆ. ತಾಲೂಕು ಕಸಾಪ ಅಧ್ಯಕ್ಷ  ಎಸ್.ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಸಚಿವ ಡಿ.ಎನ್. ಜೀವರಾಜ್ ಸಮ್ಮೇಳನ ಉದ್ಘಾಟಿಸಲಿದ್ದಾರೆ.
ಸಮ್ಮೇಳಾಧ್ಯಕ್ಷರ ಭಾಷಣ: ನಂತರ ಸಮ್ಮೇಳಾಧ್ಯಕ್ಷೆ ಎಂ. ಜಯಮ್ಮ ಸಮ್ಮೇಳಾಧ್ಯಕ್ಷ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತಾಪಂ ಅಧ್ಯಕ್ಷ ಜೆ.ಜಿ. ನಾಗರಾಜ್, ಸ್ವಾಗತ ಸಮಿತಿ  ಕೋಶಾಧ್ಯಕ್ಷ ಪಿ.ಜೆ. ಆಂಟೋನಿ, ಜಿಪಂ ಸದಸ್ಯ ಮಹ್ಮಮದ್ ಇಪ್ತೀಕರ್ ಆದಿಲ್, ಶ್ರೀಮತಿ ಸುಜಾತ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಎಚ್.ಟಿ. ರಾಜೇಂದ್ರ, ತಾಲೂಕು ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ಎಂ. ಗಂಗಾಧರ್, ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ನೀಲೇಶ್, ತಹಸೀಲ್ದಾರ್ ಕೃಷ್ಣಮೂರ್ತಿ ಉಪಸ್ಥಿತರಿರುವರು.
   ಮಧ್ಯಾಹ್ನದ ನಂತರ 3 ಗಂಟೆಗೆ ನಮ್ಮ ಪ್ರೀತಿಯ ಮಲೆನಾಡು ಹಾಗೂ ಸಂಜೆ 5 ಗಂಟೆಗೆ ನರಸಿಂಹರಾಜಪುರ ತಾಲೂಕು ದರ್ಶನ ಎಂಬ 2 ಗೋಷ್ಠಿಗಳು ನಡೆಯಲಿದೆ.
   ಸಂಜೆ 6 .30ರಿಂದ ಶೆಟ್ಟಿಕೊಪ್ಪದ ಎಂ. ಮಹೇಶ್ ತಂಡದವರಿಂದ ಅಂಟಿಗೆ -ಪಿಂಟಿಗೆ ಹಾಗೂ ಬೆಂಗಳೂರಿನ ಚಲನಚಿತ್ರ ಹಿನ್ನೆಲೆ ಗಾಯಕಿ ಡಾ.ಶಮಿತ ಮಲ್ನಾಡ್ತ್‌ಂಡವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆ. ಹೀಗೆ 6ನೇ ತಾಲುಕು ಸಮ್ಮೇಳನ ನಡಘೆಯಲಿದೆ.

ಸಾಹಿತ್ಯ ಸಮ್ಮೇಳಾಧ್ಯಕ್ಷೆ ಎಂ. ಜಯಮ್ಮ
ಶನಿವಾರದಿಂದ ಪ್ರಾರಂಭವಾಗಲಿರುವ 2 ದಿನಗಳ ಕಾಲ ನಡೆಯುವ 6ನೇ ತಾಲೂಕು ಕನ್ನಡ ಸಾಹಿತ್ಯ  ಸಮ್ಮೇಳಾಧ್ಯಕ್ಷೆ ಎಂ. ಜಯಮ್ಮ ಸಾಹಿತ್ಯ ಕ್ಷೇತ್ರವಲ್ಲದೆ ವಿವಿಧ ಕ್ಷೇತ್ರದಲ್ಲೂ ಸಾಧನೆ ಮಾಡಿದ್ದು ಬಹುಮುಖ ಪ್ರತಿಭಾವಂತೆ.
  ಶಿಕ್ಷಣ ಇಲಾಖೆಯಲ್ಲಿ 40 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತಗೊಂಡ ಎಂ. ಜಯಮ್ಮ ಅವರು 8 ಕಾದಂಬರಿ, 6 ಸಣ್ಣಕಥೆ, 2 ನಾಟಕಗಳನ್ನು ಬರೆದಿದ್ದಾರೆ. ಮುಗಿಲ ಮಲ್ಲಿಗೆ, ರಜನಿ, ಸಿರಿಯ ಸೆಳೆಯೋ, ಒಲವಿನ ಬಲೆಯೋ, ಧರ್ಮದ ಬೇರು, ವಿಧಿ ತಂದ ವಧು, ಗಗನ ಕುಸುಮ ಅವರ ಪ್ರಕಟಗೊಂಡ ಕಾದಂಬರಿಗಳು. ರಜನಿ ಕಾದಂಬರಿಗೆ 1997ರಲ್ಲಿ ಅತ್ತಿಮಬ್ಬೆ ಪ್ರಶಸ್ತಿ ಲಭಿಸಿದೆ. ಧರ್ಮದ ಬೇರು ಕಾದಂಬರಿಗೆ ಗೊರೂರು ಪ್ರಶಸ್ತಿ ಲಭಿಸಿದೆ. ಮಾಟ, ಉಡುಗೆರೆ, ಗೆಳೆತನದ ಗೆಲವು, ಕೃಷಿ ತಜ್ಞ ನನ್ನ ನಲ್ಲ, ಹೆಪ್ಪಿ ಡೆಲಿವರಿ ಟು ಯು, ನನ್ನೊಂದಿಗೆ ಮಲಗುವೆಯಾ ಇವರು ಬರೆದ ನಾಟಕಗಳು. ಕಾರ್ಗಿಲ್ ಕರೆ, ಸ್ವಯಂಕೃತ ಅಪರಾಧ   ಎಂ. ಜಯಮ್ಮ ಅವರು ಬರೆದ ನಾಟಕಗಳು.  
ರಂಗೋಲಿಯಲ್ಲಿ ರಾಮಾಯಣ: ರಂಗೋಲಿಯಲ್ಲಿ ರಾಮಾಯಾಣದ ಘಟನೆಗಳನ್ನು ರಾಮಚಂದ್ರಾಪುರ ಮಠದಲ್ಲಿ ಚಿತ್ರಿಸಿದ್ದರಿಂದ ಶ್ರೀ ರಾಮಚಂದ್ರಾಪುರ ಮಠದ ಶ್ರೀಗಳು ಚಿತ್ರ ವಾಲ್ಮೀಕಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.