ಆಮಿಷಗಳಿಗೆ ಬಲಿಯಾಗದೆ ಪ್ರಾಮಾಣಿಕರಿಗೆ ಮತ ನೀಡಿ
ಕಪ್ರ ವಾರ್ತೆ, ಚಿಕ್ಕಮಗಳೂರು, ಮಾ. 16
ಹಳ್ಳಿಗಳು ಅಭಿವೃದ್ಧಿ ಹೊಂದಿ, ಉದ್ದಾರವಾಗಬೇಕಾದರೆ ಗ್ರಾಮೀಣ ಜನತೆ ಚುನಾವಣೆಗಳಲ್ಲಿ ಯಾವುದೇ ಆಮಿಷಕ್ಕೆ ಬಲಿಯಾಗದೇ ಪ್ರಾಮಾಣಿಕರಿಗೆ ಮತ ನೀಡುವ ಕೆಲಸ ಮಾಡಬೇಕು ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಮನವಿ ಮಾಡಿದರು.
ತಾಲೂಕಿನ ತೇಗೂರಿನಲ್ಲಿ ಶನಿವಾರ ಆರಂಭಗೊಂಡ ಹಾಸನ ಹಾಲು ಒಕ್ಕೂಟದ ಹಾಲಿನ ಡೈರಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಚುನಾವಣೆಗಳಲ್ಲಿ ಹಣ, ಹೆಂಡ ಸೇರಿದಂತೆ ಇತರೆ ಆಮಿಷಗಳಿಗೆ ಬಲಿಯಾಗಿ ಮತದಾನ ಮಾಡುವವರ ಸಂಖ್ಯೆ ಪ್ರತಿವರ್ಷ ಹೆಚ್ಚಾಗತೊಡಗಿದೆ. ಇದರಿಂದಾಗಿ ದೇಶದಲ್ಲಿಂದು ರಾಜಕೀಯ ಉದ್ಯಮವಾಗಿ ಮಾರ್ಪಟ್ಟಿದ್ದು ಚುನಾವಣೆಯಲ್ಲಿ ಹಣ ಸುರಿದು ಗೆದ್ದವರು ನಂತರ ಅಭಿವೃದ್ಧಿಯನ್ನು ಬದಿಗಿಟ್ಟು ರಾಜ್ಯವನ್ನು ಲೂಟಿ ಹೊಡೆಯುವ ಕೆಲಸ ಮಾಡುತ್ತಿದ್ದಾರೆ ಎಂದು ವಿಷಾಧಿಸಿದರು.
ಎಚ್ಚೆತ್ತುಕೊಳ್ಳಬೇಕು: ಈ ಬೆಳವಣಿಗೆಯಿಂದಾಗಿ ಹಳ್ಳಿಗಳು ಅಭಿವೃದ್ಧಿಯಿಂದ ವಂಚಿತವಾಗುತ್ತಿವೆ ಎಂದ ಅವರು, ಪ್ರಾಮಾಣಿಕರನ್ನು ಬದಿಗಿಟ್ಟು ಚುನಾವಣೆಯಲ್ಲಿ ಹಣ ಪಡೆದು ಮತ ನೀಡಿದರೆ ಗ್ರಾಮದ ಅಭಿವೃದ್ಧಿ ಹೇಗಾಗುತ್ತದೆ ಎಂದು ಪ್ರಶ್ನಿಸಿದರು. ಗ್ರಾಮೀಣ ಜನತೆ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಗ್ರಾಮದ ಅಭಿವೃದ್ಧಿಗೆ ದುಡಿಯುವವರಿಗೆ ಕಷ್ಟಕಾಲದಲ್ಲಿ ಸ್ಪಂದಿಸುವವರಿಗೆ ಮತ್ತು ಪ್ರಾಮಾಣಿಕರಿಗೆ ಚುನಾವಣೆಯಲ್ಲಿ ಮತ ನೀಡಬೇಕು ಎಂದು ಕಿವಿಮಾತು ಹೇಳಿದರು.
ಭರವಸೆ: ತಾವು ಬಹಳಷ್ಟು ಶ್ರಮವಹಿಸಿ ಗ್ರಾಮಕ್ಕೆ ತಂದಿರುವ ಡೈರಿಯನ್ನು ಗ್ರಾಮಸ್ಥರು ಸದ್ಬಳಕೆ ಮಾಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ಕಲಬೆರಕೆ ಹಾಲನ್ನು ಡೈರಿಗೆ ಹಾಕಬಾರದು ಎಂದು ಸಲಹೆ ಮಾಡಿದರು. ವಕೀಲರ ರಾಷ್ಟ್ರೀಯ ಪರಿಷತ್ತಿನ ಸದಸ್ಯ ಎಸ್.ಎಲ್. ಭೋಜೇಗೌಡ ಮಾತನಾಡಿ, ಹಸುಗಳನ್ನು ಖರೀದಿಸಲು ಡಿಸಿಸಿ ಬ್ಯಾಂಕ್‌ನಿಂದ ಗ್ರಾಮಸ್ಥರಿಗೆ ಸಾಲ ಒದಗಿಸುವ ಭರವಸೆ ನೀಡಿದರು.
ಹಾಸನ ಹಾಲು ಒಕ್ಕೂಟದ ಉಪ ವ್ಯವಸ್ಥಾಪಕ ಪರಮೇಶ್ವರಪ್ಪ ಮಾತನಾಡಿ, ಎಸ್.ಎಲ್. ಧರ್ಮೇಗೌಡ ಮತ್ತು ಎಸ್.ಎಲ್. ಭೋಜೇಗೌಡ ಸತತ ಪರಿಶ್ರಮದಿಂದಾಗಿ ತೇಗೂರು ಗ್ರಾಮಕ್ಕೆ ಹಾಲಿನ ಡೈರಿ ಮಂಜೂರಾಗಿದ್ದು ಅದನ್ನು ಗ್ರಾಮಸ್ಥರು ಉಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು. ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಮಾತನಾಡಿ, ಗ್ರಾಮಕ್ಕೆ ಹಾಲಿನ ಡೈರಿ ಮಂಜೂರಾಗಲು ಶ್ರಮವಹಿಸಿದ ಎಸ್.ಎಲ್. ಧರ್ಮೇಗೌಡ ಮತ್ತು ಭೋಜೇಗೌಡರಿಗೆ ಕೃತಜ್ಞತೆ ಸಲ್ಲಿಸಿದರು.
ಗ್ರಾಮದ ಮಹಿಳಾ ಸಂಘದ ಅಧ್ಯಕ್ಷೆ ಜಯಮ್ಮ ಸೋಮರಾಜು ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಅಧ್ಯಕ್ಷ ದಿನೇಶ್‌ರಾಜ್ ಅರಸ್, ಸದಸ್ಯರಾದ ಶ್ರೀನಿವಾಸ್ ರಾಜ್ ಅರಸ್, ಮಂಜಣ್ಣ, ರಮೇಶ್‌ರಾಜ್ ಅರಸ್, ಕಾಂತರಾಜ್, ನಿವೃತ್ತ ಪಶುಪರೀಕ್ಷಕ ಲಕ್ಷ್ಮಣರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜಪ್ಪ, ಗ್ರಾಮದ ಹಿರಿಯರಾದ ನಾರಾಯಣ ರಾಜು, ಲಿಂಗರಾಜ್ ಅರಸ್, ರೂಪಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

