ಚಿಕ್ಕಮಗಳೂರು

ಬಿಎಸ್‌ವೈ ಸಾಧನೆಯೇ ಶ್ರೀರಕ್ಷೆ

Published On :

ಕ.ಪ್ರ.ವಾರ್ತೆ, ತರೀಕೆರೆ, ಮಾರ್ಚಿ.16 ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಿರ್ವಹಿಸಿದ ಅಭಿವೃದ್ಧಿ ಪರ ಕೆಲಸ ಕಾರ್ಯಗಳೇ ಪಕ್ಷಕ್ಕೆ ಬಹುದೊಡ್ಡ ಶ್ರೀರಕ್ಷೆಯಾಗಿದೆ ಎಂದು ಕೆಜೆಪಿ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ, ಶಾಸಕ ಡಿ.ಎಸ್. ಸುರೇಶ್ ಹೇಳಿದರು.
 ಅವರು, ಶನಿವಾರ ಪಟ್ಟಣದಲ್ಲಿ ಕೆಜೆಪಿ ತಾಲೂಕು ಘಟಕದಿಂದ ಪಕ್ಷದ ಸಂಘಟನೆ ಸಂಬಂಧವಾಗಿ ಏಪಡಿಸಲಾಗಿದ್ದ ಪಕ್ಷದ ಕಾರ್ಯಕರ್ತರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಾಖಲೆ ಸ್ಥಾಪಿಸಿದೆ: ಪಕ್ಷ ಸಂಘಟನೆಯಾದ ಕೆಲವೇ ಸಮಯದಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ರಾಜ್ಯದಲ್ಲಿ 274 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಅಭೂತಪೂರ್ವ ದಾಖಲೆ ಸ್ಥಾಪಿಸಿದೆ. ತರೀಕೆರೆ ಪುರಸಭೆ ಚುನಾವಣೆಯಲ್ಲೂ ಕೆಜೆಪಿ ಎರಡು ಸ್ಥಾನಗಳಿಸಿದೆ. ಮತದಾರರು ಪಕ್ಷಕ್ಕೆ ಹೆಚ್ಚಿನ ಮತ ನೀಡಿದ್ದಾರೆ ಅದಕ್ಕಾಗಿ ಎಲ್ಲ ಮತದಾರರಿಗೆ  ಪಕ್ಷ ಕೃತಜ್ಞತೆ ಅರ್ಪಿಸುತ್ತದೆ ಎಂದು ತಿಳಿಸಿದರು.
ಶೀಘ್ರದಲ್ಲೇ ವಿಧಾನಸಭಾ ಚುನಾವಣೆ ಸಮೀಪಿಸುವುದರಿಂದ ಬೂತ್ ಮಟ್ಟದಲ್ಲಿ ಪ್ರತಿಯೊಂದು ಹಳ್ಳಿ ಮತ್ತು ಹೋಬಳಿಗಳಲ್ಲಿ ಹೆಚ್ಚು ಬಲಯುತವಾಗಿ ಪಕ್ಷವನ್ನು ಎಲ್ಲರ ಸಹಕಾರದಿಂದ ಸಂಘಟಿಸಬೇಕು ಎಂದರು.
ಸಮಾವೇಶ: ಪಕ್ಷ ಸಂಘಟಿಸುವ ಸಲುವಾಗಿ ತರೀಕೆರೆಯಲ್ಲಿ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಮಾರ್ಚ್ 22 ರಂದು ಪಟ್ಟಣದ ಎಂ.ಜಿ. ಹಾಲ್‌ನಲ್ಲಿ ಏರ್ಪಡಿಸಲಾಗಿದೆ. ಪಕ್ಷದ ಮುಖಂಡರಾದ ಶೋಭಾ ಕರಂದ್ಲಾಜೆ, ಬಿ.ಆರ್. ಪಾಟೀಲ್ ಮೊದಲಾದವರು ಸಭೆಯಲ್ಲಿ ಭಾಗವಹಿಸಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬೂತ್ ಮಟ್ಟದ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಬೇಕೆಂದು ಅವರು ಮನವಿ ಮಾಡಿದರು.
ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್, ಕೆಜೆಪಿ ತಾಲೂಕು ಅಧ್ಯಕ್ಷ ರಮೇಶ್, ಟಿಎಪಿಸಿಎಂಎಸ್ ಅಧ್ಯಕ್ಷ ಮಂಜುನಾಥ್, ಯುವಕವಿ ದಾದಾಪೀರ್, ಸಯದ್ ಯೂಸುಫ್ ಮೊದಲಾದರು   ಮಾತನಾಡಿದರು. ಪಕ್ಷದಿಂದ ವಿಜೇತರಾದ ನೂತನ ಪುರಸಭಾ ಸದಸ್ಯ ಆನಂದ್, ಸಯದ್ ಖಾಸಿಂ ಅವರನ್ನು ಸನ್ಮಾನಿಸಲಾಯಿತು.
ತಾಪಂ ಅಧ್ಯಕ್ಷೆ ದೀಪಾ ಉಮೇಶ್, ಶಿವಕುಮಾರ್ ಡಿ.ಆರ್. ಗುರುಮೂರ್ತಿ, ಡಿ.ಎಸ್. ಗಿರೀಶ್, ಪಕ್ಷದ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು. ಬೇಲೇನಹಳ್ಳಿ ಸೋಮಶೇಖರ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.