ನಮ್ಮ ಗ್ರಾಮ ನಮ್ಮ ರಸ್ತೆಗೆ 13 ಕೋಟಿ: ಕಿಮ್ಮನೆ
ಕ.ಪ್ರ.ವಾರ್ತೆ \ಹೊಸನಗರ \ಮಾ.19
ತೀರ್ಥಹಳ್ಳಿ ಕ್ಷೇತ್ರ ವ್ಯಾಪ್ತಿಯಲ್ಲಿ ನಮ್ಮ ಗ್ರಾಮ, ನಮ್ಮ ರಸ್ತೆ ಯೋಜನೆಯಡಿ ರು. 13 ಕೋಟಿ ಮಂಜೂರಾಗಿದ್ದು ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ ಎಂದು ಶಾಸಕ ಕಿಮ್ಮನೆ ರತ್ನಾಕರ್ ಹೇಳಿದರು.
ತಾಲೂಕಿನ ಕೋಡೂರು, ನಗರ ಹೋಬಳಿಯ ಬೈಸೆ ಮತ್ತು ದೊಡ್ಡಿನಗದ್ದೆ ಬಳಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಅವರು, ಹಳ್ಳಿಗಳ ಸಂಪರ್ಕ ರಸ್ತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದರು.
ತಾಲೂಕಿನ ಮೈಥಳ್ಳಿ ರಸ್ತೆಗೆ ರು. 1.63 ಕೋಟಿ, ಬೈಸೆ ರಸ್ತೆಗೆ ರು. 83 ಲಕ್ಷ, ರ್ಯಾವೆ ದೊಡ್ಡಿನಗದ್ದೆಗೆ ರು. 1.52 ಕೋಟಿ, ಮತ್ತಿಕೈ ರಸ್ತೆಗೆ ರು. 1.2 ಕೋಟಿ ಹಣ ಮಂಜೂರಾಗಿದೆ ಎಂದರು.
ರು. 400 ಕೋಟಿ ಅನುದಾನ: ನನ್ನ ಶಾಸಕ ಸ್ಥಾನದ ಅವಧಿಯಲ್ಲಿ ರು. 400 ಕೋಟಿ ಅನುದಾನವನ್ನು ಕ್ಷೇತ್ರದ ಅಭಿವೃದ್ಧಿಗೆ ತರುವಲ್ಲಿ ಯಶಸ್ವಿಯಾಗಿದ್ದೇನೆ. ಆದ್ಯತೆ ಮೇಲೆ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಇನ್ನು ಸಾಕಷ್ಟು ಕೆಲಸ ಆಗಬೇಕಿದ್ದು ಪ್ರಯತ್ನ ಮುಂದುವರೆಸಿದ್ದೇನೆ ಎಂದರು.
ಮನೆಗಳ ಪಟ್ಟಿ ಮಾಡಿ: ಪ್ರತಿ ಗ್ರಾಪಂಗಳ ವ್ಯಾಪ್ತಿಯಲ್ಲಿ ಮನೆಯ ಅಗತ್ಯವಿರುವ ಬಡರೈತ ಕೂಲಿಕಾರ್ಮಿಕರನ್ನು ಪಟ್ಟಿ ಮಾಡಿ ಕಳುಹಿಸಿ. ವಸತಿ ಸಚಿವರೊಂದಿಗೆ ಈಗಾಗಲೆ ಮಾತುಕತೆ ನಡೆಸಲಾಗಿದ್ದು ಮನೆ ಮಂಜೂರು ಮಾಡುವ ಭರವಸೆ ನೀಡಿದ್ದಾರೆ.
ಪಟ್ಟಿ ಮಾಡುವಾಗ ಪಕ್ಷ ಭೇದ ಮಾಡದೆ ಅರ್ಹ ಫಲಾನುಭವಿಗಳನ್ನು ಗುರುತಿಸಿ ಎಂದು ಗ್ರಾಪಂಗಳಿಗೆ ಮನವಿ ಮಾಡಿದರು.
ಜಿಪಂ ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಕಲಗೋಡು ರತ್ನಾಕರ್, ತಾಪಂ ಅಧ್ಯಕ್ಷೆ ಗೀತಾ ನಿಂಗಪ್ಪ, ಸದಸ್ಯರಾದ ಕುನ್ನೂರು ಮಂಜಪ್ಪ, ಪೂರ್ಣಿಮಾ, ಪ್ರಮುಖರಾದ ಅಬ್ಬಿಮಲ್ಲೇಶಪ್ಪ, ಚಂದ್ರಮೌಳಿ, ನಾಗರಾಜಗೌಡ ಡಿ.ಟಿ. ಚಂದ್ರಶೇಖರ್ ಊರಿನ ಗ್ರಾಮಸ್ತರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

