476ನೇ ಮದ್ಯವರ್ಜನ ಶಿಬಿರದ ವಾರ್ಷಿಕೋತ್ಸವ
ಬೀರೂರು: ಸಪ್ತ ವ್ಯವಸನಗಳಲ್ಲಿ ಮದ್ಯಪಾನ ಮೂದಲ ಮೆಟ್ಟಿಲಾಗಿದ್ದು ಅದನ್ನು ಜಾರಿದರೆ ಉಳಿದೆಲ್ಲವನ್ನೂ ಜಾರಿದಂತೆ ಎಂದು ವಕೀಲ ತಿಪ್ಪೇಶ್ ಹೇಳಿದರು.
ಕಡೂರು ತಾಲೂಕು ಹೊಗರೇಹಳ್ಳಿಯ ಶ್ರೀ ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಯೋಜನೆ, ನವಜೀವನ ಸಮಿತಿ ಮತ್ತು ದೇವಸ್ಥಾನ ಸಮಿತಿಗಳ ಸಹಭಾಗಿತ್ವದಲ್ಲಿ ನಡೆದ 476 ನೇ ಮದ್ಯವರ್ಜನ ಶಿಬಿರದ ವಾರ್ಷಿಕೋತ್ಸವ ಮತ್ತು ಶ್ರೀ ಸತ್ಯನಾರಾಯಣಸ್ವಾಮಿ ಪೂಜಾ ಕಾರ್ಯಕ್ರಮ ಉಧ್ಘಾಟಿಸಿ ಮಾತನಾಡಿ, ವ್ಯಸನಗಳನ್ನು ಮೆಟ್ಟಿ ನಿಲ್ಲುವಲ್ಲಿ ದೃಢ ಮನಸ್ಸು ಮತ್ತು ಆತ್ಮವಿಶ್ವಾಸ ಬಹು ಮುಖ್ಯವಾಗಿದೆ. ಅದರಂತೆ ಪ್ರತೀ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ಇರುತ್ತದೆ ಎಂಬ ನಾಣ್ಣುಡಿಯಂತೆ ಮಹಿಳೆ ಪುರುಷನಿಗೆ ತುಂಬುವ ಅದಮ್ಯ ವಿಶ್ವಾಸದಿಂದ ವ್ಯಸನದಿಂದ ಮುಕ್ತವಾಗಲು ಕಾರಣವಾಗುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ವಿವೇಕ್ ಕಾನ್ವೆಂಟ್ ಪಾಯಸ್, ಮದ್ಯಪಾನದ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು. ಸ್ವಾಮಿ ಪೂಜೆಯನ್ನು ಹೊನ್ನಾಳಿಯ ವೇ.ಬ್ರ. ವರದರಾಜ್ ಅಯ್ಯಂಗಾರ್ ನೇತೃತ್ವದಲ್ಲಿ ವಿವಿಧ ವಿಧಾನಗಳೊಂದಿಗೆ ನೆರವೇರಿತು. ಶ್ರೀ ರಂಗನಾಥಸ್ವಾಮಿ, ಶ್ರೀ ಸಿದ್ದೇಶ್ವರಸ್ವಾಮಿ, ಶ್ರೀ ಅಂತರಘಟ್ಟಮ್ಮ ದೇವರನ್ನು ತಂದು ಪೂಜಾ ಕಾರ್ಯಕ್ರಮ ನಡೆಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರ್ಚಕ ಎಚ್.ಎನ್. ಸಂತೋಷ್ ಇದ್ದರು. ದಿನೇಶ್, ಯೋಗ ಶಿಕ್ಷಕ ಎಚ್.ವಿ. ಗಿರೀಶ್, ಭಾಗ್ಯಮ್ಮಸಿದ್ದಪ್ಪ, ದಶರಥಗೌಡ, ಎಚ್.ಜಿ. ಶಶಿಧರ್, ಶಿವಕುಮಾರ್, ಜಯಕುಮಾರ್ ಇದ್ದರು. ಮದ್ಯಮುಕ್ತ ಸದಸ್ಯರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

