ಚಿಕ್ಕಮಗಳೂರು

ಟಿಕೆಟ್‌ಗಾಗಿ ಆಕಾಂಕ್ಷಿಗಳ ತೀವ್ರ ಕಸರತ್ತು

Published On :

ಕ.ಪ್ರ.ವಾರ್ತೆ,ಕಡೂರು, ಮಾ.20
ಕಡೂರು ವಿಧಾನಸಭಾ ಕ್ಷೇತ್ರದ ಚುನಾವಣೆಯ ವಿವಿಧ ಪಕ್ಷಗಳ ಟಿಕೇಟಿಗಾಗಿ ಹಲವು ಆಕಾಂಕ್ಷಿತ ಅಭ್ಯರ್ಥಿಗಳು ತೀವ್ರ ಕಸರತ್ತು ನಡೆಸುತ್ತಿರುವ ಬೆನ್ನಲ್ಲೇ ದಿನಕ್ಕೊಂದು ಗಾಳಿಸುದ್ದಿ ಹಬ್ಬುತ್ತಿದೆ.      
ಕಡೂರು ಕ್ಷೇತ್ರದ ಕಾಂಗ್ರೆಸ್‌ನಲ್ಲಿ ಕಡೂರು, ಬೀರೂರು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್ ನಾಯಕರಾದ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಮಹೇಶ್ ಒಡೆಯರ್, ಕೆ.ಎಂ.ವಿನಾಯಕ್, ಎಂ.ಎಚ್. ಚಂದ್ರಪ್ಪ ಮತ್ತು ಕಡೂರು ಸಿ. ನಂಜಪ್ಪ ನೇತೃತ್ವದಲ್ಲಿ ನಡೆದ ಪುರಸಭಾ ಚುನಾವಣೆಯಲ್ಲಿ ಎರಡೂ ಪುರಸಭೆಗಳಲ್ಲಿ ಬಂದ ಫಲಿತಾಂಶದಿಂದ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿ, ವಿಧಾನಸಭಾ ಚುನಾವಣೆಯ ಆಕಾಂಕ್ಷಿಗಳು ಹೆಚ್ಚುವ ಮೂಲಕ ಟಿಕೇಟಿಗಾಗಿ ಮುಗಿಬಿದ್ದು ಪ್ರಯತ್ನ ನಡೆಯುತ್ತಿದೆ.
ಟಿಕೆಟ್‌ಗಾಗಿ ಕಸರತ್ತು: ಈ ಹಿನ್ನೆಲೆಯಲ್ಲಿ ಕೆ.ಬಿ. ಮಲ್ಲಿಕಾರ್ಜುನ್, ಕೆ.ಎಂ. ಕೆಂಪರಾಜು, ಮಹೇಶ್ ಒಡೆಯರ್ ಹಾಗೂ ಕೆ.ಎಂ.ವಿನಾಯಕ್ ಮತ್ತು ಸಿ. ನಂಜಪ್ಪ ಟಿಕೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ. ಈ ಐವರು ಆಕಾಂಕ್ಷಿಗಳಲ್ಲಿ ಮೂವರ ಹೆಸರು ಮಾತ್ರ ರಾಜ್ಯ ಕೆಪಿಸಿಸಿ ಪಟ್ಟಿಯಲ್ಲಿದ್ದು, ಆ ಮೂವರು ಯಾರು ಎಂಬುದು ಬಹಿರಂಗಗೊಂಡಿಲ್ಲ. ಆದರೆ ಮೂವರ ಪೈಕಿ ಇಬ್ಬರ ಹೆಸರನ್ನು ಮಾತ್ರ ಅಂತಿಮ ಮಾಡಿ ಹೈಕಮಾಂಡಿಗೆ ಕಳುಹಿಸುವ ಪ್ರಕ್ರಿಯೆ ನಡೆಯುತ್ತಿದೆ ಎನ್ನುತ್ತಿರುವ ಬೆನ್ನಲ್ಲೇ ಕಾಂಗ್ರೆಸ್ ಟಿಕೇಟ್ ಹಂಚಿಕೆ ಹಿನ್ನೆಲೆಯಲ್ಲಿ ದಿನಕ್ಕೊಂದು ಸುದ್ದಿ ಹರಡುತ್ತಿರುವುದರಿಂದ ಕೆಲ ನಾಯಕರು ಬೆಂಗಳೂರಿನಿಂದ ವಾಪಸ್ ಬಂದರೆ ಮತ್ತೆ ಕೆಲ ನಾಯಕರು ಮತ್ತೆ ಬೆಂಗಳೂರಿಗೆ ದೌಡಾಯಿಸುತ್ತಿದ್ದಾರೆ.
ಇನ್ನು ಕೆಲ ಆಕಾಂಕ್ಷಿ ನಾಯಕರು ಬೆಂಗಳೂರಿನಲ್ಲಿಯೇ ಇದ್ದು ಟಿಕೇಟಿಗಾಗಿ ಪ್ರಯತ್ನಿಸುತ್ತಿದ್ದಾರೆ ಎನ್ನಲಾಗಿದೆ. ಅಂತಿಮವಾಗಿ ಹೈ ಕಮಾಂಡ್ ಇವರೇ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿ ಎಂದು ಘೋಷಿಸುವವವರೆಗೂ ದಿನಕ್ಕೊಂದು ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿಕೊಳ್ಳುತ್ತಲೇ ಇರುತ್ತದೆ.    
ಬಿಜೆಪಿ ಆಕಾಂಕ್ಷಿಗಳು: ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾಗಲೂ ಕೂಡ ಹಲವರ ಹೆಸರು ಕೇಳಿಬರುತ್ತಿದೆ. ಕಳೆದ ಉಪ ಚುನಾವಣೆಯಲ್ಲಿ ಶಾಸಕ ಡಾ ವೈ.ಸಿ. ವಿಶ್ವನಾಥ್ ಬಿಜೆಪಿ ಅಭ್ಯರ್ಥಿಯಾಗಿ ಗೆಲವು ಸಾಧಿಸಿದ್ದರು. ಆದರೆ ಈ ಬಾರಿ ವಿಶ್ವನಾಥ್ ಅವರ ಮುಂದಿನ ನಡೆ ಏನು ಎಂಬುದರ ಬಗ್ಗೆ ಅವರು ಸುಳಿವು ಬಿಟ್ಟುಕೊಡದ ಹಿನ್ನೆಲೆಯಲ್ಲಿ ಅಲ್ಲಿಯೂ ಕೂಡ ಗಾಳಿಸುದ್ದಿ ಹಬ್ಬುತ್ತಿರುವುದರಿಂದ ಆಕಾಂಕ್ಷಿಗಳೂ ಕೂಡ ನಾಮುಂದು ತಾಮುಂದು ಎಂದು ಟಿಕೇಟಿಗೆ ಪ್ರಯತ್ನಿಸುತ್ತಿದ್ದಾರೆ.
ಬೀರೂರು ದೇವರಾಜು, ರೇಖಾ ಹುಲಿಯಪ್ಪಗೌಡ, ಅರೇಕಲ್ ಪ್ರಕಾಶ್, ಎಚ್. ಉಮೇಶ್, ಕೆ.ಎಚ್. ಏ.ಪ್ರಸನ್ನರವರ ಹೆಸರು ಕೇಳಿಬರುವ ಮೂಲಕ ಬಿಜೆಪಿ ಟಿಕೇಟಿಗೆ ಕಸರತ್ತು ನಡೆಯುತ್ತಿದೆ. ಟಕೆಟ್ ನೀಡಿಕೆಗೆ ಪಕ್ಷದ ಶಾಸಕರಾದ ಡಾ ವೈ.ಸಿ. ವಿಶ್ವನಾಥ್‌ರವರಿಗೆ ಮೊದಲ ಆದ್ಯತೆ ಇದ್ದು, ಅವರ ನಿಲುವಿನ ನಂತರ ಉಳಿದವರಿಗೆ ಟೇಕೆಟ್ ನೀಡಿಕೆ ಬಗ್ಗೆ ಪಕ್ಷ ನಿರ್ಧರಿಸಲಿದೆ ಎನ್ನಲಾಗಿದೆ.
ಜೆಡಿಎಸ್‌ನಿಂದ ವೈ.ಎಸ್.ವಿ. ದತ್ತರವರು ಜೆಡಿಎಸ್ ಕಡೂರು ಕ್ಷೇತ್ರದ ಅಭ್ಯರ್ಥಿಯಾಗಿ ಘೋಷಣೆಯಾಗಿದೆ. ಕೆಜೆಪಿಯಿಂದ ಬೆಳ್ಳಿಪ್ರಕಾಶ್ ಮತ್ತು ಕಾಮನಕೆರೆ ಶಶಿಧರ್ ಹೆಸರು ಇದ್ದು, ಬಿ.ಎಸ್.ಆರ್.
ಕಾಂಗ್ರೆಸ್‌ನಿಂದ ಕೆ.ಎಚ್. ಶಂಕರ್ ಮತ್ತು ಎಂ, ರಾಜಪ್ಪನವರ ಹೆಸರಿದೆ. ಒಟ್ಟಾರೆ ಅಂತಿಮ ಪಟ್ಟಿ ಪ್ರಕಟವಾಗುವವರೆಗೂ ಈ ಪಕ್ಷದಲ್ಲಿ ಇವರೇ ಅಭ್ಯರ್ಥಿ ಎಂಬ ಬಗ್ಗೆ ದಿನಕ್ಕೊಂದು ಹಬ್ಬುವ ಗಾಳಿಸುದ್ದಿಗೆ ರೆಕ್ಕೆಪುಕ್ಕೆ ಸೇರಿಕೊಳ್ಳುತ್ತಲೇ ಇರುತ್ತದೆ.      

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.