ಚಿಕ್ಕಮಗಳೂರು

ಲಾನ್ ಟೆನಿಸ್ ಕೋರ್ಟ್ ಇದೆ, ತರಬೇತುದಾರರಿಲ್ಲ

Published On :

ಕ.ಪ್ರ ವಾರ್ತೆ , ಚಿಕ್ಕಮಗಳೂರು , ಮಾ. 24
ಇಲ್ಲಿ ಕ್ರೀಡಾಂಗಣ ಇದೆ. ಆದರೆ, ತರಬೇತಿದಾರರು ಇಲ್ಲ.
- ಇದು, ಜಿಲ್ಲಾ ಕ್ರೀಡಾ ಕ್ಷೇತ್ರದ ಸ್ಥಿತಿಗತಿ.
ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಎರಡು ಕ್ರೀಡಾಂಗಣಗಳಿವೆ. ಇಲ್ಲಿ ಹೇಳಿಕೊಳ್ಳಲು ಮೂಲಭೂತ ಸೌಲಭ್ಯಗಳಿಲ್ಲ. ಆದರೂ ಸಹ ಕ್ರೀಡೆಗೆ ಉತ್ತೇಜನ ನೀಡಲು ಕ್ರೀಡಾಂಗಣಕ್ಕೆ ಲಕ್ಷಾಂತರ ರುಪಾಯಿ ಖರ್ಚು ಮಾಡಲಾಗುತ್ತಿದೆ. ಆದರೆ, ಈ ಕ್ರೀಡಾಂಗಣಗಳು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿಲ್ಲ.
ಹರ್ಷ ಗುಪ್ತಾ ಅವರು ಚಿಕ್ಕಮಗಳೂರು ಜಿಲ್ಲಾಧಿಕಾರಿಯಾಗಿದ್ದಾಗ ಜಿಲ್ಲಾ ಆಟದ ಮೈದಾನದಲ್ಲಿ ಸ್ಕೇಟಿಂಗ್ ರಿಂಗ್, ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಲಾನ್ ಟೆನಿಸ್ ಕೋರ್ಟ್ ನಿರ್ಮಾಣ  ಮಾಡಲಾಯಿತು. ಈ ಕೋರ್ಟ್,ಗೆ ಅಂದು ಖರ್ಚು ಮಾಡಿದ್ದು 8.75 ಲಕ್ಷ ಇದು, ಸಾಧಾರಣವಾದ ಮೊತ್ತವೇನೂ ಅಲ್ಲ. ಕ್ರೀಡೆಗೆ ಉತ್ತೇಜನ ನೀಡಲು ಈ ಕೋರ್ಟ್ ನಿರ್ಮಾಣ ಮಾಡಿತಾದರೂ, ಇದರ ಬಳಕೆ ಬಗ್ಗೆ ಅಂದು ಯಾವುದೇ ಮುಂದಾಲೋಚನೆ ಮಾಡಿಲ್ಲ ಎಂಬುವುದನ್ನು ಲಾನ್ ಟೆನಿಸ್ ಕೋರ್ಟ್ ಸಾರಿ ಸಾರಿ ಹೇಳುತ್ತಿದೆ.
ಈ ಕೋರ್ಟ್ ನಿರ್ಮಾಣ ಮಾಡಿದ ಕೆಲವೇ ದಿನಗಳಲ್ಲಿ ಇಲ್ಲಿ ಅಂತರಾಷ್ಟ್ರೀಯ ಮಟ್ಟದ ಲಾನ್ ಟೆನಿಸ್ ಟೂರ್ನಮೆಂಟ್ ನಡೆಯಿತು. ಇದರಲ್ಲಿ ದೇಶದ ವಿವಿಧೆಡೆಗಳಿಂದ ಕ್ರೀಡಾಪಟುಗಳು ಆಗಮಿಸಿದ್ದರು. ಇದೇ ಮೊದಲು ಮತ್ತು ಕೊನೆಯ ಕ್ರೀಡೆ.
ಕೋರ್ಟ್ ಸಂಪೂರ, ಹಾಳು: ನೀರು ಸರಾಗವಾಗಿ ಹರಿದು ಹೋಗುವ ವ್ಯವಸ್ಥೆ ಇಲ್ಲದಿದ್ದರಿಂದ ನೀರು ನಿಂತಿರುವ ಜಾಗದಲ್ಲಿ ಕೋರ್ಟ್ ಸಂಪೂರ,ವಾಗಿ ಹಾಳಾಗಿ ಹೋಗಿದೆ. ಈ ಕೋರ್ಟ್,ನ ಸುತ್ತಲು ಕಟ್ಟಲಾಗಿದ್ದ ತಂತಿಯ ಬೇಲಿಯೂ ಅಲ್ಲಲ್ಲಿ ಕಿತ್ತು ಹೋಗಿದೆ. ಈ ಕೋರ್ಟ್,ವನ್ನು ಇಲ್ಲಿನ ಸುತ್ತಮುತ್ತಲಿನ ಯುವಕರು  ಕ್ರಿಕೆಟ್, ವಾಲಿಬಾಲ್ ಸೇರಿದಂತೆ ಇತರೆ ಆಟಗಳಿಗೆ ಬಳಸಿಕೊಳ್ಳುತ್ತಿದ್ದಾರೆ.
ಇರುವುದೊಂದೇ ಲಾನ್ ಟೆನಿಸ್ ಕೋರ್ಟ್: ಚಿಕ್ಕಮಗಳೂರು ಜಿಲ್ಲಾ ಕೇಂದ್ರದಲ್ಲಿ ಇರುವುದೊಂದೇ ಲಾನ್ ಟೆನಿಸ್ ಕೋರ್ಟ್. ಇದಕ್ಕೆ ಕ್ರೀಡಾ ಇಲಾಖೆಯಲ್ಲಿ ಪ್ರತ್ಯೇಕವಾದ ತರಬೇತಿದಾರರು ಇಲ್ಲ. ಈ ಕೊರತೆ ಇದ್ದರೂ ಕೂಡ 8.75 ಲಕ್ಷ ಖರ್ಚು ಮಾಡಿ ಕೋರ್ಟ್ ನಿರ್ಮಾಣ ಮಾಡಲಾಯಿತು. ಹರ್ರ್ಷ ಗುಪ್ತಾ ಅವರು ವರ್ಗಾವಣೆಯಾದ ನಂತರ ಇದರ ನಿರ್ವಹಣೆಯ ಬಗ್ಗೆ ಜಿಲ್ಲಾಡಳಿತವಾಗಲೀ, ಕ್ರೀಡಾ ಇಲಾಖೆವಾಗಲೀ ತಲೆ ಕೆಡಿಸಿಕೊಂಡಿಲ್ಲ. ಆರಂಭದಲ್ಲಿ ಇದರತ್ತ ಗಮನ ಹರಿಸಿದ್ದರೆ, ಈ ಕೋರ್ಟ್,ಗೆ ಇಂತಹ ಗತಿ ಬರುತ್ತಿರಲಿಲ್ಲ.
ತರಬೇತುದಾರರ ನೇಮಕವಾಗಲಿ: ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದ ಸಮೀಪದಲ್ಲಿರುವ ಈಜು ಕೊಳ ಹಾಗೂ ಜಿಮ್,ವನ್ನು ಖಾಸಗಿಯವರಿಗೆ ವಹಿಸಲಾಗಿದೆ. ಲಾನ್ ಟೆನಿಸ್ ಕೋರ್ಟ್,ವನ್ನು ಖಾಸಗಿಯವರಿಗೆ ವಹಿಸಿ, ತರಬೇತುದಾರರನ್ನು ನೇಮಕ ಮಾಡುವ ಕೆಲಸ ಆಗಬೇಕಾಗಿತ್ತು. ಅಧಿಕಾರಿಗಳ ಉದಾಸೀನತೆಯಿಂದ ಲಕ್ಷಾಂತರ ರುಪಾಯಿ ಮಣ,ು ಪಾಲಾಗಿದೆ.
ಅವ್ಯವಸ್ಥೆ: ಆಟದ ಮೈದಾನವೆಂದರೆ ಅದು ವಿಶಾಲವಾಗಿರಬೇಕು. ಅಲ್ಲಿ ಕ್ರೀಡಾಪಟುಗಳಿಗೆ ಆಟವಾಡಲು ಯಾವುದೇ ಅಡಚಣೆಯಾಗಬಾರದು. ಆದರೆ, ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಇದಕ್ಕೆ ವ್ಯತಿರಿಕ್ತವಾದ ಪರಿಸ್ಥಿತಿ ಇದೆ.
ಹಾಳಾಗಿರುವ ಲಾನ್ ಟೆನಿಸ್ ಕೋರ್ಟ್,ನ ಸಮೀಪದಲ್ಲಿ ಬುಡ ಸಹಿತ ಕಿತ್ತು ಹಾಕಿರುವ ಮರ ಹಲವು ದಿನಗಳಿಂದ ಹಾಗೆಯೇ ಬಿದ್ದಿದೆ. ಅದನ್ನು ತೆಗೆದು ಹಾಕುವ ಕೆಲಸವು ಸಹ ಅಧಿಕಾರಿಗಳಿಂದ ಆಗಿಲ್ಲ. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಕಚೇರಿ ಇದೇ ಆವರಣದಲ್ಲಿದ್ದರೂ ಸಹ ಈ ಮರವನ್ನು ತೆಗೆದು ಹಾಕುವತ್ತ ಗಮನ ಹರಿಸದೆ ಇರುವುದು ಅಧಿಕಾರಿಗಳ ಕಾರ್ಯ  ವೈಖರಿ ಎಷ್ಟರ ಮಟ್ಟಿಗೆ ಇದೆ ಎಂಬುದನ್ನು ತಿಳಿಸುತ್ತದೆ.
ಇಲ್ಲಿ ಪುರುಷರಿಗೆ ಮತ್ತು ಮಹಿಳೆಯರಿಗೆ ಪ್ರತ್ಯೇಕವಾಗಿ ಶೌಚಾಲಯದ ವ್ಯವಸ್ಥೆಇಲ್ಲ. ಇನ್ನು ರಾತ್ರಿ ವೇಳೆಯಲ್ಲಿ ಮದ್ಯ ಪ್ರಿಯರಿಗೆ ಪಾರ್ಟಿ ಮಾಡಲು ಇಲ್ಲಿ ಯಾವುದೇ ಅಡೆತಡೆಗಳಿಲ್ಲ.
ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಮಾತುಗಳನ್ನು ಆಡುವ ಜತೆಗೆ ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಬೇಕಾಗಿದೆ.

-ಆರ್. ತಾರಾನಾಥ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.