ಚಿಕ್ಕಮಗಳೂರು

'ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು'

Published On :

ಕ.ಪ್ರ.ವಾರ್ತೆ ಟಿ ಬೀರೂರು ಟಿ  ಮಾ.25
ಪಟ್ಟಣದ ರಾಮ ಬನಶಂಕರಿ ದೇವಾಲಯದ ಆವರಣದಲ್ಲಿ ದೇವಾಂಗ ನೌಕರರ ಸಂಘದ ಉದ್ಘಾಟನಾ  ಸಮಾರಂಭ ಮತ್ತು ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು.
ಸಂಘವನ್ನು ಉದ್ಘಾಟಿಸಿದ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಅರೇಕಲ್ ಕಾಂತರಾಜ್ ಮಾತನಾಡಿ,  ಶಿಕ್ಷಕರು ಈ ದೇಶದ ಬೆನ್ನೆಲುಬು. ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದದ್ದು. ಸಂಘದ ಸದಸ್ಯರು ಸಮಾಜದ ಬೆಳವಣಿಗೆಗೆ ಪೂರಕವಾಗಿ ಸ್ಪಂದಿಸುವುದರ ಜೊತೆ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಸಂಘದ ಪ್ರಗತಿ ಸಾಧ್ಯ ಎಂದರು.
ಸಂಘ ಬೆಳೆಯಲಿ: ಎಲ್ಲ ವರ್ಗದ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸಂಘ ಮತ್ತು ಸಮಾಜದ ಉನ್ನತಿಗೆ ಕಾರಣೀಭೂತರಾಗಿ. ಬೀರೂರಿನ ಈ ದೇವಾಂಗ ನೌಕರರ ಸಂಘ ರಾಜ್ಯದಲ್ಲಿ ಉತ್ತಮ ಸಂಘವಾಗಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಾಂಗ ಸಮಾಜದ ಅಧ್ಯಕ್ಷ ಎಲ್. ಕೃಷ್ಣಮೂರ್ತಿ ಮಾತನಾಡಿ, ಸಂಘ ಸಧೃಢವಾಗಿ ಬೆಳೆಯಬೇಕಾದರೆ ಆರ್ಥಿಕವಾಗಿ ಸಧೃಢವಾಗಬೇಕು. ಅರ್ಥಿಕ ಸಂಪತ್ತನ್ನು ಕ್ರೋಢೀಕರಿಸಿ ಬೆಳೆಸಬೇಕು. ಲೆಕ್ಕಪತ್ರಗಳ ನಿರ್ವಹಣೆ ಪಾರದರ್ಶಕವಾಗಿರಬೇಕು ಎಂದರು.
ದೇವಾಂಗ ನೌಕರರ ಸಂಘದ ಅಧ್ಯಕ್ಷ ದೈಹಿಕ ಶಿಕ್ಷಕ ಜಿ. ಕೃಷ್ಣಮೂರ್ತಿ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಘದ ಸ್ಥಾಪನೆ, ಉದ್ದೇಶ, ಸಂಘದಿಂದ ಸಮಾಜಕ್ಕೆ ದೊರಕಬಹುದಾದ ಸೌಲಭ್ಯಗಳ ಬಗ್ಗೆ ಸವಿವರವಾಗಿ ಮಾಹಿತಿ ನೀಡಿದರು.
ಸನ್ಮಾನ: ಪುರಸಭಾ ಸದಸ್ಯರಾಗಿ ಆಯ್ಕೆಯಾಗಿರುವ ಡಿ.ಆರ್. ಯತೀಶ್‌ರನ್ನು ನೌಕರರ ಸಂಘದಿಂದ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿದ ಯತೀಶ್ ಮಾತನಾಡಿ, ಸಂಘದ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ಲೋಕೇಶಪ್ಪ, ಉಪಾಧ್ಯಕ್ಷ ವಾಸಪ್ಪ, ಕಾರ್ಯದರ್ಶಿ ಬಿ.ಟಿ. ಸುರೇಶಬಾಬು, ಕೋಶಾಧಿಕಾರಿ ಎಚ್. ಮಂಜುನಾಥ್,
ಸದಸ್ಯರಾದ ಶಿವಮೂರ್ತಿ, ವಿಜಯಕುಮಾರ್, ಶಿವಪುತ್ರಪ್ಪ, ಬಿ. ರಮೇಶ್, ಎನ್. ಮನಂಜಪ್ಪ, ಪ್ರಕಾಶ್, ರಘು, ಪುಷ್ಪಾವತಿ, ಮೀನಾಕ್ಷಮ್ಮ, ಈರಮ್ಮ, ಕೆ.ಜಿ.  ಲೋಕೇಶ್, ಬಿ.ವೈ. ರಮೇಶ್ ಮತ್ತಿತರರು ಉಪಸ್ಥಿತರಿದ್ದರು.
ಶಿವಮೂರ್ತಿ ನಿರೂಪಿಸಿ, ಮಂಜುನಾಥ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.