ಚಿಕ್ಕಮಗಳೂರು

ಮಣಪ್ಪುರಂ ಗೋಲ್ಡ್ ಕಚೇರಿಗೆ ಮುತ್ತಿಗೆ

Published On :

ಕ.ಪ್ರ.ವಾರ್ತೆ ಟಿ ಚಿಕ್ಕಮಗಳೂರು ಟಿ  ಮಾ.26
ಒಡವೆಗಳನ್ನು ಗಿರವಿಗೆ ಇಟ್ಟಿರುವವರನ್ನು ವಂಚಿಸಲಾಗುತ್ತಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಮಂಗಳವಾರ ನಗರದ ಮಣಪ್ಪುರಂ ಗೋಲ್ಡ್ ಲೋನ್ ಸಂಸ್ಥೆಗೆ ಮುತ್ತಿಗೆ ಹಾಕಿದರು.
ಕರವೇ ಜಿಲ್ಲಾಧ್ಯಕ್ಷ ತೇಗೂರು ಜಗದೀಶ್ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಸಂಘಟನೆಯ ಕಾರ್ಯಕರ್ತರು ಕಚೇರಿಗೆ ಬೀಗ ಹಾಕಿ, ಅದರ ನಾಮಫಲಕವನ್ನು ಕಿತ್ತು ಹಾಕಿದರು. ಮಣಪ್ಪುರಂ ಗೋಲ್ಡ್ ಲೋನ್ ಕಚೇರಿಗೆ ತೆರಳಿ ಗಿರವಿ ಇಟ್ಟಿದ್ದ ಒಡವೆಗಳನ್ನು ವಾಪಸ್ ಕೇಳಿದರೆ ಹಾರಾಜಾಗಿದೆ ಎಂಬ ಉಡಾಫೆ ಉತ್ತರವನ್ನು ಅಲ್ಲಿನ ಸಿಬ್ಬಂದಿ ನೀಡಿದರು ಎಂದು ತೇಗೂರು ಜಗದೀಶ್ ಹೇಳಿದರು.
ನಗರದ ನಾಗರಿಕರು ತಮ್ಮ ಕಷ್ಟದಲ್ಲಿ ಒಡವೆಗಳನ್ನು ಖಾಸಗಿ ಕಂಪನಿಗಳಲ್ಲಿ ಗಿರವಿ ಇಡುವಾಗ ಎಚ್ಚರಿಕೆ ವಹಿಸಬೇಕು. ದುಪ್ಪಟ್ಟು ಬಡ್ಡಿ ವಿಧಿಸಿ ನಮಗೆ ಒಡವೆ ದಕ್ಕದಂತೆ ಮಾಡುತ್ತಾರೆ. ಇಂತಹ ಕಂಪನಿಗಳು ನಗರಕ್ಕೆ ಬೇಡ. ಗಿರವಿ ಇಟ್ಟಿರುವ ನಾಗರಿಕರು ತಕ್ಷಣವೇ ಆಭರಣಗಳನ್ನು ವಾಪಸ್ ಪಡೆಯಬೇಕೆಂದು ತಿಳಿಸಿದರು.  ಸಂಘಟನೆಯ ಪ್ರಧಾನ ಕಾರ್ಯದರ್ಶಿ ವಸಂತ ಕುಮಾರ್, ಅಶೋಕ್, ಮಲ್ಲೇಶ್, ಮಂಜುನಾಥ್, ರಾಜು, ಲೋಕೇಶ್, ಶರತ್ ಹಾಗೂ ಗ್ರಾಹಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.