ವೀರಭದ್ರಸ್ವಾಮಿ ರಥೋತ್ಸವಕ್ಕೆ ಸಂಭ್ರಮದ ತೆರೆ
ಕ.ಪ್ರ.ವಾರ್ತೆ ಟಿ ಬೀರೂರು ಟಿ ಮಾ.26
ಪಟ್ಟಣದ ಹಳೇಪೇಟೆಯಲ್ಲಿರುವ ಪುರಾಣ ಪ್ರಸಿದ್ಧ ವೀರಭದ್ರಸ್ವಾಮಿ ರಥೋತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು.
ರಥೋತ್ಸವದ ಅಂಗವಾಗಿ ಆರು ದಿನಗಳ ಕಾಲ ಸರ್ಪ, ಕುದುರೆ, ಬಸವ, ಸಿಂಹ, ನವಿಲು,ಆನೆ ಮುಂತಾದ ವಾಹನಗಳಲ್ಲಿ ಮಂಟಪೋತ್ಸವ ಪಟ್ಟಣದ ರಾಜಬೀದಿಗಳಲ್ಲಿ ನಡೆಯಿತು. 101ಎಡೆ ಸೇವೆ, ವೀರಭದ್ರಸ್ವಾಮಿ ಮತ್ತು ಭದ್ರಕಾಳಿ ಅಮ್ಮನವರ ಕಲ್ಯಾಣ ಮಹೋತ್ಸವ, ಬ್ರಹ್ಮರಥ, ಹೋಮ, ಪೂರ್ಣಾಹುತಿ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ರಥದ ಸುತ್ತ ಪ್ರದಕ್ಷಿಣೆ: ರಾತ್ರಿ 9 ಗಂಟೆಗೆ ಹರಕೆ ಹೊತ್ತ ಸುಮಂಗಲಿಯರಿಂದ ದುಗ್ಗಳ ಸೇವೆ ನಡೆಯಿತು. 726 ಕ್ಕೂ ಹೆಚ್ಚು ಸುಮಂಗಲಿಯರು ಮಣ್ಣಿನ ಕುಡಿಕೆಯಲ್ಲಿ ಕರ್ಪೂರದ ದೀಪ ಹಚ್ಚಿಕೊಂಡು ರಥದ ಸುತ್ತಲೂ ಮೂರು ಪ್ರದಕ್ಷಿಣೆ ಹಾಕುವ ಮೂಲಕ ತಮ್ಮ ಭಕ್ತಿ ಸಮರ್ಪಿಸಿದರು.
ವೀರಭದ್ರಸ್ವಾಮಿಯವರ ರಥವನ್ನು ದೇವಾಲಯದ ಆವರಣದಿಂದ ಮಾರನವಮಿ ಬಯಲಿನವರೆಗೆ ಸಾಗಿ ಬಂದ ರಥೋತ್ಸವದಲ್ಲಿ ರಾಜ್ಯದ ನಾನಾ ಭಾಗಗಳಿಂದ ಸಹಸ್ರಾರು ಭಕ್ತರು ಪಾಲ್ಗೊಂಡು ಹಣ್ಣುಕಾಯಿ ಹರಕೆ ಸಮರ್ಪಿಸಿ ಧನ್ಯತಾ ಭಾವ ಮೆರೆದರು.
ವೀರಗಾಸೆ, ಡೊಲ್ಳುಕುಣಿತ, ಖಡ್ಗ ಮುಂತಾದ ಜಾನಪದ ಕಲಾವಿದರು ಪಾಲ್ಗೊಂಡು ರಥೋತ್ಸವಕ್ಕೆ ಮೆರಗು ನೀಡಿದರು. ದೇವಾಲಯದ ಮಾರ್ಗದ ಉದ್ದಕ್ಕೂ ಜಗಮಗಿಸುವ ವಿದ್ಯುತ್ ದೀಪಗಳ ಅಲಂಕಾರ ನೋಡುಗರ ಕಣ್ಣು ಮತ್ತು ಮನಸನ್ನು ಸೆಳೆಯುವಂತಿತ್ತು.
ಮಾಜಿ ಶಾಸಕ ಕೆ.ಬಿ. ಮಲ್ಲಿಕಾರ್ಜುನ್, ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ಮಹೇಶ್ ಒಡೆಯರ್, ಬೀರೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ವಿನಾಯಕ್, ಬೀರೂರು ಪುರಸಭಾ ಸದಸ್ಯರು ಸೇರಿದಂತೆ ರಾಜ್ಯದ ಹಲವು ಭಾಗಗಳಿಂದ ಸಾವಿರಾರು ಭಕ್ತರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

