ಶೌಚಾಲಯ ಸಾಮಗ್ರಿ ವಿತರಣೆ (ಸುದ್ದಿ ಸಂಕ್ಷೇಪ)
ಚಿಕ್ಕಮಗಳೂರು:ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕಿನ 600 ಕುಟುಂಬಗಳಿಗೆ ಉಚಿತ ಶೌಚಾಲಯ ಸಾಮಾಗ್ರಿ ವಿತರಣೆ ಮಾಡಲಾಗುತ್ತಿದೆ ಎಂದು ಯೋಜನಾಧಿಕಾರಿ ಎಂ. ಲಕ್ಷ್ಮಣ್ ಹೇಳಿದ್ದಾರೆ. ನಗರದ ಹೊರವಲಯದ ರಾಂಪುರದಲ್ಲಿ ಗುರುವಾರ ಶೌಚಾಲಯ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದರು.
ತಾಲೂಕಿನ ಬೆಳವಾಡಿ, ಜೋಳದಾಳ್, ಕೆ.ಆರ್.ಪೇಟೆ, ಅಂಬಳೆ, ಬಿಳೆಕಲ್ಲಳ್ಳಿ, ಮಲ್ಲೇನಹಳ್ಳಿ, ವಸ್ತಾರೆ, ರಾಂಪುರ ಸೇರಿದಂತೆ 600 ಕುಟುಂಬಗಳಿಗೆ ಪೈಪ್, ಬೇಸಿನ್, ಬೆಂಡ್ ಸೇರಿದಂತೆ ರು. 1500 ಮೌಲ್ಯದ ಸಾಮಗ್ರಿ ವಿತರಿಸಲಾಗುತ್ತಿದೆ ಎಂದರು. ತಾಲೂಕಿನಲ್ಲಿ 8700 ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿದ್ದು, 30 ಲಕ್ಷ ಪ್ರಗತಿನಿಧಿ ವಿನಿಯೋಗಿಸಲಾಗಿದೆ. ಆದರೂ ಕೆಲವು ಗ್ರಾಮ ಮತ್ತು ಕಾಲೋನಿಗಳಲ್ಲಿ ಶೌಚಾಲಯ ಇಲ್ಲದಿರುವುದು ತಿಳಿದುಬಂದಿದೆ. ಈ ಸಂಬಂಧ ಹೆಚ್ಚಿನ 600 ಕುಟುಂಬಗಳಿಗೆ ಶೌಚಾಲಯ ಸಾಮಗ್ರಿ ವಿತರಿಸಲಾಗಿದ್ದು ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದೆಂದರು. ದಿನೇಶ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದವರು ಶೌಚಾಲಯ ರಚನೆ, ಸ್ವಚ್ಛತೆ, ಆರೋಗ್ಯ ಕಾರ್ಯಕ್ರಮಗಳಿಗೆ ವಿಶೇಷ ಮಹತ್ವ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದ್ದು, ಗ್ರಾಮಸ್ಥರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕೆಂದರು. ತೇಗೂರು ಜಗದೀಶ್, ಅನುಸೂಯ, ಪುಷ್ಪ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

