ಚಿಕ್ಕಮಗಳೂರು

ಯುವ ಜನಾಂಗ ದೇಶದ ಅಮೂಲ್ಯ ಸಂಪತ್ತು: ರಂಭಾಪುರಿ ಶ್ರೀ

Published On :

ನರಸಿಂಹರಾಜಪುರ: ಯುವ ಜನಾಂಗವು ದೇಶದ ಅಮೂಲ್ಯ ಸಂಪತ್ತಾಗಿದೆ. ಯುವ ಜನಾಂಗದವರಿಗೆ ಆದರ್ಶ, ಮಾನವೀಯ ಮೌಲ್ಯಗಳ ಬಗ್ಗೆ ಸರಿಯಾದ ತಿಳುವಳಿಕೆ ನೀಡುವ ಅಗತ್ಯವಿದೆ ಎಂದ ಬಾಳೆಹೊನ್ನೂರಿನ ರಂಭಾಪುರೀ ಜಗದ್ಗುರು ಪ್ರಸನ್ನ ರೇಣುಕ ವೀರ ಸೋಮೇಶ್ವರ ಶಿವಾಚಾರ್ಯ ಭಗವಾತ್ಪಾದರು ತಿಳಿಸಿದರು.
ಅವರು ಬಾಳೆಹೊನ್ನೂರಿನಲ್ಲಿ ನಡೆಯುತ್ತಿರುವ ರೇಣುಕಾಚಾರ್ಯ ಜಯಂತಿ ಯುಗ ಮಾನೋತ್ಸವ ಅಂಗವಾಗಿ ಆಯೋಜಿಸಿದ್ದ ಯುವ ಸಮಾವೇಶದ ಸಾನ್ನಿದ್ಯ ವಹಿಸಿ ಆಶೀರ್ವಾಚನ ನೀಡಿದರು.
ಬಾಲ್ಯದಲ್ಲಿ ಜ್ಞಾನ, ತಾರುಣ್ಯದಲ್ಲಿ ಸಂಪತ್ತು, ವೃದ್ಯಾಪದಲ್ಲಿ ಭಗವಂತನ ಚಿಂತನೆ ಮಾಡಬೇಕು. ಸತ್ಯದ ತಳಹದಿಯ ಮೇಲೆ ಜೀವನ ರೂಪಿತಗೊಳ್ಳಬೇಕು. ಸದ್ವಿಚಾರ, ಸಂಸ್ಕೃತಿಯನ್ನು ಬದುಕಿನಲ್ಲಿ ಆಚರಣೆಗೆ ತಂದರೆ ಅಮೂಲ್ಯ ಜೀವನವು ಸಾರ್ಥಕತೆಯಾಗಲಿದೆ. ಹುಟ್ಟು ಸಾವುಗಳ ಮಧ್ಯೆ ಇರುವ ಜೀವನ ಸಮೃದ್ಧಿಗೊಳ್ಳಬೇಕಾದರೆ ಗುರುವಿನ ಜ್ಞಾನ, ಬೋಧಾಮೃತ ಅವಶ್ಯಕ ಎಂದು ತಿಳಿಸಿದರು.
ದಾವಣಗೆರೆ ಶ್ರೀ ಅಭಿನವ ರೇಣುಕ ಮಂದಿರದ ಕಾರ್ಯದರ್ಶಿ ದೇವರಮನೆ ಶಿವಕುಮಾರ್ ಸಮಾರಂಭ ಉದ್ಘಾಟಿಸಿದರು. ಜಗದ್ಗುರು ರೇಣುಕಾಚಾರ್ಯ ಗುರುಕುಲದ ಉಪಕುಲಪತಿ ಶ್ರೀ ರುದ್ರಮನಿ ಶಿವಾಚಾರ್ಯರು ಉಪದೇಶಾಮೃತ ನೀಡಿದರು. ಹರಪನಹಳ್ಳಿಯ ಎಂ.ಪಿ.ಎಂ. ಶಾಂತವೀರಯ್ಯ ಉಪನ್ಯಾಸ ನೀಡಿದರು. ದಿಣ್ಣೆ ಕೆರೆ ಡಾ.ಎಂ. ಮಂಜುನಾಥ ಸ್ವಾಮಿ ಚಿಂತನ ಸ್ಮರಣೆ ಮಾಡಿದರು.
ಸಭೆಯಲ್ಲಿ ಎಡೆಯೂರಿನ ಶ್ರೀ ರೇಣುಕ ಶಿವಾಚಾರ್ಯರು, ಹೂಲಿ, ಮಳಲಿಮಠ, ಇಂಚಿಗೇರಿ, ಜಕ್ಕಲಿ,ಧನಗೂರು,ಬುಕ್ಕಸಾಗರ, ಸಂಗೊಳ್ಳಿ, ಮೊರಬ, ಕರ್ತಾಳ, ಕಲ್ಲೂರ ಮಠದ ಶ್ರೀಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.