ಚಿಕ್ಕಮಗಳೂರು

ನ್ಯಾಯಬೆಲೆ ಅಂಗಡಿಯಿಂದ ಅಕ್ರಮ ಅಕ್ಕಿ ಸಾಗಣೆ: ಮೂವರ ಬಂಧನ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಮಾ. 29
ಸರ್ಕಾರಿ ನ್ಯಾಯಬೆಲೆ ಅಂಗಡಿಯಿಂದ ಅಕ್ರಮವಾಗಿ ದಿನಸಿ ಅಂಗಡಿಯೊಂದಕ್ಕೆ ಮಾರಾಟ ಮಾಡಲು  ಸಾಗಿಸುತ್ತಿದ್ದ ಸಾವಿರಾರು ರುಪಾಯಿ ಮೌಲ್ಯದ ಅಕ್ಕಿ ಚೀಲಗಳನ್ನು ವಶಕ್ಕೆ ಪಡೆದು, ಮೂವರನ್ನು ಬಂಧಿಸಿದ ಘಟನೆ ಶುಕ್ರವಾರ ಬೆಳಿಗ್ಗೆ ಆಲ್ಕೊಳ ಸಮೀಪ ನಡೆದಿದೆ.
ವಿನೋಬ ನಗರದಲ್ಲಿರುವ ಸರ್ಕಾರಿ ನ್ಯಾಯಬೆಲೆ ಅಂಗಡಿ ಕಾರ್ಯದರ್ಶಿ ಪವಿತ್ರಪ್ಪ(55), ಟೆಂಪೋ ಟ್ರ್ಯಾಕ್ಸ್ ಚಾಲಕ ರೆಹಮಾನ್ (35) ಹಾಗೂ ದಿನಸಿ ಅಂಗಡಿ ಮಾಲೀಕ ತೌಷಿಬ್ ಬಂಧಿತ ಆರೋಪಿಗಳು. ಇಲ್ಲಿನ ವಿನೋಬನಗರದ 60 ಅಡಿ ರಸ್ತೆಯಲ್ಲಿರುವ ತೌಷಿಬ್ರ ದಿನಸಿ ಅಂಗಡಿಗೆ ಹತ್ತಿರದ ನ್ಯಾಯಬೆಲೆ ಅಂಗಡಿ  ಕಾರ್ಯದರ್ಶಿ ಪವಿತ್ರಪ್ಪ ಸುಮಾರು 50 ಚೀಲ ಅಕ್ಕಿಯನ್ನು ಸಾಗಾಣೆ ಮಾಡಲು ಯತ್ನಿಸಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಆಹಾರ ಇಲಾಖೆ ಅಧಿಕಾರಿಗಳು ಪೊಲೀಸರ ಸಹಾಯ ಪಡೆದು ಆರೋಪಿಗಳನ್ನು  ಮಾಲು ಸಮೇತ ಬಂಧಿಸುವಲ್ಲಿ ಯಶಸ್ವಿಯಾದರು. 50 ಅಕ್ಕಿ ಚೀಲಗಳ ಮೌಲ್ಯ ಸುಮಾರು ರು. 25 ಸಾವಿರ ಎಂದು ಅಂದಾಜಿಸಲಾಗಿದೆ.  
ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ಕಾರ್ಯಚರಣೆಯಲ್ಲಿ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ವಿನೋಬನಗರ ಠಾಣೆ ಪಿಎಸ್ಐ ಮಂಜುನಾಥ್, ಸಿಬ್ಬಂದಿ ಇದ್ದರು. ಇನ್ನೊಂದೆಡೆ ಈ ಅಕ್ಕಿ ಹರಿಯಾಣ- ಪಂಜಾಬ್ನಿಂದ ಬಂದಿದ್ದು, ಶಾಲಾ ಮಕ್ಕಳ ಬಿಸಿಯೂಟ ಯೋಜನೆ ಬಳಕೆಗಾಗಿ  ಬಂದಿತ್ತು ಎಂಬ ಮಾಹಿತಿಯೂ ಇದೆ.
ಸರ ಅಪಹರಣ
ಶಿವಮೊಗ್ಗ: ಬೈಕ್ನಲ್ಲಿ ಬಂದ ಅಪರಿಚಿತರಿಬ್ಬರು ಮಹಿಳೆಯೊಬ್ಬರ ಸರ ಅಪಹರಿಸಿ ಪರಾರಿಯಾದ ಘಟನೆ ವಿನೋಬನಗರದಲ್ಲಿ ನಡೆದಿದೆ.
ಇಲ್ಲಿನ ನಿವೃತ್ತ ಶಿಕ್ಷಕಿ ಎಸ್. ಶಾಂತಾಬಾಯಿ ಸರ ಕಳೆದುಕೊಂಡವರು. ಇವರು ತಮ್ಮ ಸಹೋದರರನ್ನು ಮನೆಯ ಸಮೀಪದ ಪೊಲೀಸ್ ಚೌಕಿ ಬಸ್ ನಿಲ್ದಾಣಕ್ಕೆ ಬಿಡಲು ನಡೆದು ಬರುತ್ತಿರುವಾಗ ಬೈಕ್ನಲ್ಲಿ ಬಂದ  ಇಬ್ಬರು ಅಪರಿಚಿತರು ಏಕಾಏಕಿ ಸರಕ್ಕೆ ಕೈ ಹಾಕಿ ಎಳೆದು ಅಪಹರಿಸಿ ಪರಾರಿಯಾದರು. ಸರದ ಮೌಲ್ಯ  ರು. 80 ಸಾವಿರ ಎಂದು ಅಂದಾಜಿಸಲಾಗಿದೆ. ಪ್ರಕರಣ ವಿನೋಬನಗರ ಠಾಣೆಯಲ್ಲಿ ದಾಖಲಾಗಿದೆ.
ಡಕಾಯಾಯಿತಿಗೆ ಹೊಂಚು: ಬಂಧನ
ಶಿವಮೊಗ್ಗ: ನಿರ್ಜನ ಪ್ರದೇಶದಲ್ಲಿ ಮಾರಕಾಸ್ತ್ರಗಳನ್ನು ಹಿಡಿದು ಜನರನ್ನು ಹೆದರಿಸಿ ಸುಲಿಗೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪದ ಮೇರೆಗೆ 6 ಜನರನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ತೀರ್ಥಹಳ್ಳಿ ರಸ್ತೆಯ ಹರಕರೆ ಕಾನಹಳ್ಳದ ಚೌಡಮ್ಮ ದೇವಸ್ಥಾನದ ಬಳಿ ನಡೆದಿದೆ.  
ಬಂಧಿತ ಆರೋಪಿಗಳು ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನವರಾಗಿದ್ದಾರೆ. ಭೈರಪುರ ಗ್ರಾಮದ ನಾಗನಾಯ್ಕ್ (45), ಕೋಡಿಕ್ಯಾಂಪ್ನ ರವಿನಾಯ್ಕ್ (24), ಲಿಂಗದಹಳ್ಳಿಯ ಮಂಜುನಾಯ್ಕ್ (28),  ಕೋಡಿಕ್ಯಾಂಪ್ನ ಅಜ್ಗರ್ (32), ಭೋವಿಕಾಲೋನಿಯ ಬಾಬು (28) ಹಾಗೂ ತರೀಕೆರೆ ಪಟ್ಟಣದ ಎಂ.ಜಿ.ರಸ್ತೆಯ ಭಾಸ್ಕರ್ (28)ಅವರನ್ನು ಬಂಧಿಸಲಾಗಿದೆ.
ತೀರ್ಥಹಳ್ಳಿಯ ಈ ರಸ್ತೆಯಲ್ಲಿ ಐದಾರು ಜನರು ಮಾರಕಾಸ್ತ್ರ ಹಿಡಿದುಕೊಂಡು ಡಕಾಯಿತಿಗೆ ಹೊಂಚು ಹಾಕುತ್ತಿದ್ದಾರೆಂಬ ಖಚಿತ ಮಾಹಿತಿಯನ್ನು ಪೊಲೀಸರು ಪಡೆದಿದ್ದರು. ಸ್ಥಳಕ್ಕಾಗಮಿಸಿದ ಪೊಲೀಸರನ್ನು ನೋಡಿ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ. ನಂತರ ಬೆನ್ನಟ್ಟಿದ ಪೊಲೀಸರು 6 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರಿಂದ ಲಾಂಗ್, ಕಬ್ಬಿಣದ ರಾಡು, ಚಾಕು, ಹಗ್ಗ, ಖಾರದ ಪುಡಿ ಪ್ಯಾಕೆಟ್ಗಳನ್ನು ವಶಪಡೆಸಿಕೊಳ್ಳಲಾಗಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.