ಬಿಎಸ್ವೈ ಅಭಿವೃದ್ಧಿ ಚಿಂತನೆ ಬೆಂಬಲಿಸಿ
ಕ.ಪ್ರ.ವಾರ್ತೆ, ತರೀಕೆರೆ, ಮಾ.29
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಲ್ಲಿದ್ದ ಅಭಿವೃದ್ಧಿ ಚಿಂತನೆಯನ್ನು ಎಲ್ಲರೂ ಬೆಂಬಲಿಸಬೇಕು ಎಂದು ಕೆಜೆಪಿ ಜಿಲ್ಲಾಧ್ಯಕ್ಷ ಡಿ.ಎಸ್. ಸುರೇಶ್ ಹೇಳಿದರು.
ಅವರು ಶುಕ್ರವಾರ ಕೆಜೆಪಿ ತಾಲೂಕು ಘಟಕದಿಂದ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ನಗರ ಘಟಕ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ನಿರಂತರ ಕಿರುಕುಳ: ಯಡಿಯೂರಪ್ಪನವರು ರಾಜ್ಯವನ್ನು ಅಭಿವೃದ್ಧಿ ವಿಚಾರದಲ್ಲಿ ಮೊದಲ ಸ್ಥಾನಕ್ಕೆ ತಂದಿದ್ದರು. ಎಲ್ಲ ವರ್ಗದ ಜನರಿಗೆ ಮೂಲ ಸೌಕರ್ಯ ಒದಗಿಸಿಕೊಟ್ಟಿದ್ದರು. ಕೃಷಿಗಾಗಿ ಪ್ರತ್ಯೇಕ ಆಯವ್ಯಯವನ್ನೇ ಮಂಡಿಸಿದ್ದರು. ಪಕ್ಷಕ್ಕಾಗಿ ಪಾದಯಾತ್ರೆ ನಡೆಸಿದ್ದರು ಆದರೆ ಸಿಎಂ ಸ್ಥಾನದಲ್ಲಿ ಒಂದೇ ಒಂದು ದಿನ ನಿರಾಳವಾಗಿ ಕುಳಿತು ಕೆಲಸ ಮಾಡಲು ಅವರಿಗೆ ಅವಕಾಶ ಕೊಡದೆ ನಿರಂತರವಾಗಿ ಕಿರುಕುಳಕೊಡಲಾಯಿತು ಎಂದು ಆರೋಪಿಸಿದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎ.ಆರ್. ರಾಜಶೇಖರ್ ಮಾತನಾಡಿ, ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಅವರು ನೀಡಿದ ಅಭಿವೃದ್ಧಿ ಪರ ನೀಡಿದ ಕೊಡಗೆ ಆತ್ಮವಿಶ್ವಾಸ ಹೆಚ್ಚಿಸಿದೆ ಕಾರ್ಯಕರ್ತರು
ಬೂತ್ಮಟ್ಟದಿಂದ ಕಾರ್ಯಕ್ರಮವನ್ನು ರೂಪಿಸಿಕೊಳ್ಳಬೇಕು. ಶಾಸಕ ಡಿ.ಎಸ್. ಸುರೇಶ್ ಅವರು ಶಾಂತಿಯುತವಾಗಿ ಆಡಳಿತವನ್ನು ನಡೆಸಿದ್ದಾರೆ. ಅಭಿವೃದ್ಧಿ ಕಾರ್ಯಕ್ರಮಗಳ ಕಡೆಗೆ ಹೋಗೋಣ, ಪಕ್ಷವನ್ನು ಎಲ್ಲರೂ ಬೆಂಬಿಲಿಸೋಣ ಎಂದರು.
ದಾದಾಪೀರ್, ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲೋಕೇಶ್ ಮಾತನಾಡಿದರು. ಕೆಜಿಪಿ ತಾಲೂಕು ಅಧ್ಯಕ್ಷ ರಮೇಶ್ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಇಬ್ರಾಹಿಂ ಅವರು ಸಮಾರಂಭ ಉದ್ಘಾಟಿಸಿದರು.
ಪುರಸಭೆ ಸದಸ್ಯ ಆನಂದ್, ಸೈಯದ್ ಖಾಸಿಂ, ಮಾಜಿ ಪುರಸಭಾಧ್ಯಕ್ಷ ರಮೇಶ್, ಪುರಸಭೆ ಮಾಜಿ ಸದಸ್ಯರಾದ ಜಿಯಾ ಉಲ್ಲಾ, ಮಿಲ್ಟ್ರಿ ಶ್ರೀನಿವಾಸ್, ಮೊಹಮದ್ ಯೂಸುಫ್, ಚಂದ್ರಣ್ಣ ಮೊದಲಾದವರು ಮಾತನಾಡಿದರು.
ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಜಿ. ಮಂಜುನಾಥ್, ಡಿ,.ಆರ್. ಗುರುಮೂರ್ತಿ, ಡಿ.ಎಸ್. ಗಿರೀಶ್, ನಾಗರಾಜ್, ಟಿ.ಸಿ. ಲೋಕೇಶ್, ಪಕ್ಷದ ಕಾರ್ಯಕರ್ತರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಮಹಮದ್ ಯುಸುಫ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

