ಇಂದು ಪಂಚಕರ್ಮ ಕ್ರಿಯಾಧ್ಯಾನ ಶಿಬಿರ
ಶಿವಮೊಗ್ಗ: ಡಾ.ಕೆ.ಎಸ್. ಶ್ರೀವತ್ಸ ಅವರು ಮಾ.31 ರಂದು ಬೆಳ್ಗಿಗೆ 10 ಗಂಟೆಯಿಂದ ಸಂಜೆ 5ರ ವರೆಗೆ ವಿನೋಬನಗರದ ಮಾಧಮ ನೆಲೆಯಲ್ಲಿ ರೇಕಿ ಹೀಲಿಂಗ್ ಮಾಹಿತಿ ಮತ್ತು ಪಂಚಕರ್ಮ ಕ್ರಿಯಾಧ್ಯಾನ ಶಿಬಿರ ಏರ್ಪಡಿಸಿದ್ದಾರೆ. ಮಕ್ಕಳ ಬುದ್ಧಿವಿಕಾಸ, ವ್ಯಕ್ತಿತ್ವ ವಿಕಾಸಗೊಳ್ಳುವುದು, ನಿದ್ರಾಹೀನತೆ, ಗರ್ಭಕೋಶದ ತೊಂದರೆ ಮತ್ತು ಇತರೆ ಎಲ್ಲಾ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು ಎಂದು ಎನ್.ಡಿ. ಸುಧೀಂದ್ರ ತಿಳಿಸಿದ್ದಾರೆ. ವಿವರಗಳಿಗಾಗಿ- 9964245271.
ಏ.14ರಿಂದ ವಿಶೇಷ ತರಬೇತಿ ಶಿಬಿರ
ಶಿವಮೊಗ್ಗ: ರಂಗಾಯಣ ಏ.14ರಿಂದ 20 ದಿನಗಳ ಕಾಲ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ರಂಗಕಲೆಗೆ ಸಂಬಂಧಿಸಿದಂತೆ ವಿಶೇಷ ತರಬೇತಿ ಶಿಬಿರ ಏರ್ಪಡಿಸಿದೆ. ಶಿವಮೊಗ್ಗ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೊಡಗು, ಹಾಸನ, ಚಿತ್ರದುರ್ಗ, ದಾವಣಗೆರೆ, ಚಿಕ್ಕಮಗಳೂರು ಜಿಲ್ಲೆಗಳ ಹವ್ಯಾಸಿ ತಂಡಗಳು ಕಲಾವಿದರಿಗೆ ಪ್ರಸಾಧನ, ರಂಗವಿನ್ಯಾಸ ಹಾಗೂ ರಂಗ ಪರಿಕರ ನಿರ್ಮಾಣ, ಉಡುಗೆ- ತೊಡುಗೆ, ಮುಖವಾಡ ತಯಾರಿಕೆ, ಬೆಳಕಿನ ವಿನ್ಯಾಸ ಮತ್ತಿತರ ವಿಷಯಗಳ ಕುರಿತಂತೆ ಮಾಹಿತಿ ನೀಡಲಾಗವುದು. 30 ಜನರಿಗೆ ಅವಕಾಶವಿದ್ದು, ಉಚಿತ ವಸತಿ ವ್ಯವಸ್ಥೆ ಮಾಡಲಾಗುವುದು ಎಂದು ಶಿಬಿರದ ನಿರ್ದೇಶಕ ಪುರೋಷೋತ್ತಮ ತಲವಾಟ ತಿಳಿಸಿದ್ದಾರೆ. ವಿವರಗಳಿಗಾಗಿ- 9480396217.
ಇಂದು ನಾಟಕ ಪ್ರದರ್ಶನ
ಶಿವಮೊಗ್ಗ: ಮಲೆನಾಡು ಕಲಾ ತಂಡ ಮಾ.31ರಂದು ಸಂಜೆ 6.45ಕ್ಕೆ ಕುವೆಂಪು ರಂಗಮಂದಿರದಲ್ಲಿ ಕನಕ ದರ್ಶನ ನಾಟಕ ಏರ್ಪಡಿಸಿದೆ. ಗಣೇಶ್ ಆರ್. ಕೆಂಚನಾಲ ಅವರು ನಾಟಕವನ್ನು ರಚಿಸಿ, ನಿರ್ದೇಶಿಸಿದ್ದಾರೆ. ಕನಕದಾಸರ ಜೀವನ, ಚಿಂತನೆ ಹಾಗೂ ಕೀರ್ತನೆಗಳ ಸಾರ ಈ ನಾಟಕದಲ್ಲಿದೆ. ಮಹದೇವ್, ಹರ್ಷ ಅವರ ರಂಗಸಜ್ಜಿಕೆ ಈ ನಾಟಕಕ್ಕಿದೆ.
ಧರ್ಮಜಾಗೃತಿ ಸಭೆ
ಶಿವಮೊಗ್ಗ: ಹಾರನಹಳ್ಳಿಯ ಶ್ರೀ ಶನೈಶ್ಚರಸ್ವಾಮಿ ದೇವಾಲಯದಲ್ಲಿ ಮಾರ್ಚ್ 29ರಿಂದ ಏಪ್ರಿಲ್ 1ರವರೆಗೆ 17ನೇ ಜಾತ್ರಾ ವೈಭವ, ಶ್ರೀ ಶ್ರೀನಿವಾಸ ಕಲ್ಯಾಣ, ಸಾಮೂಹಿಕ ವಿವಾಹ ಮತ್ತು ಧರ್ಮಜಾಗೃತಿ ಸಭೆ ಏರ್ಪಡಿಸಿದೆ. ಮಾ.31ರಂದು ಶ್ರೀ ವೆಂಕಟರಮಣ ಸ್ವಾಮಿಯ ವೈಕುಂಠ ವೈಭವ, ಶ್ರೀ ಶ್ರೀನಿವಾಸ ಕಲ್ಯಾಣ, ಏ.1ರಂದು 9ನೇ ವರ್ಷದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಮತ್ತು ಜನಜಾಗೃತಿ ಸಮ್ಮೇಳನವಿದ್ದು, ಶ್ರೀ ಒಡೆಯರ್ ಚಂದ್ರಶೇಖರ ಶಿವಚಾರ್ಯ ಸ್ವಾಮಿಗಳು ಸಾನ್ನಿಧ್ಯ ವಹಿಸುವರು. ರಾತ್ರಿ 9.30ಕ್ಕೆ ಶ್ರೀ ಬಸವೇಶ್ವರ ಕಲಾತಂಡ, ಹೊರಬಯಲು ಮತ್ತು ಶ್ರೀ ಶನೈಶ್ಚರ ಕಲಾತಂಡ- ಸನ್ನಿವಾಸ ಯುವಕ ಕಲಾ ತಂಡದಿಂದ ಶನಿ ಪ್ರಭಾವ, ರಾಜಾ ವಿಕ್ರಮ ಪೌರಾಣಿಕ ನಾಟಕ ಪ್ರದರ್ಶನಗೊಳ್ಳಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

