ಚಿಕ್ಕಮಗಳೂರು

5 ಕೇಂದ್ರಗಳಲ್ಲಿ ಎಸ್ಸೆಸೆಲ್ಸಿ ಪರೀಕ್ಷೆ

Published On :

ಮೂಡಿಗೆರೆ: 2012-13 ನೇ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಏ.1ರಿಂದ10 ರವರಗೆ ತಾಲೂಕಿನ 5 ಕೇಂದ್ರಗಳಲ್ಲಿ ನಡೆಯಲಿದ್ದು, ತಾಲೂಕಿನಲ್ಲಿ ಪರೀಕ್ಷೆಗೆ 820 ಗಂಡು ಹಾಗೂ 863 ಹೆಣ್ಣು ಸೇರಿದಂತೆ ಒಟ್ಟು 1,683 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ಕ್ಷೇತ್ರಶಿಕ್ಷಣಾಧಿಕಾರಿ ಪ್ರಕಟಣೆ ತಿಳಿಸಿದೆ.
ಜಾತ್ರಾ ಮಹೋತ್ಸವ
ಶೃಂಗೇರಿ: ತಾಲೂಕಿನ ಅಡ್ಡಗದ್ದೆ ಚಿದ್ರವಳ್ಳಿ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ ವೈಭವಯುತವಾಗಿ ನಡೆಯಿತು. ಜಾತ್ರಾ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಧಾರ್ಮಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದರು.
ರಸ್ತೆಯಲ್ಲಿ ಚೆಲ್ಲಿದ ರಕ್ತ: ಜನರಲ್ಲಿ ಆತಂಕ
ಚಿಕ್ಕಮಗಳೂರು: ನಗರದ ಜನನಿಬಿಡ ಪ್ರದೇಶದಲ್ಲಿ ಚೆಲ್ಲಿದ ರಕ್ತ ಭಾನುವಾರ ಜನರಲ್ಲಿ ಆತಂಕ ಮೂಡಿಸಿತು.
ಯಾರೋ ಕೊಲೆ ಮಾಡಿದ್ದಾರೆಂಬ ಗಾಳಿ ಸುದ್ದಿ ನಗರದಲ್ಲಿ ದಟ್ಟವಾಗಿ ಹರಡಿಕೊಂಡಿತ್ತು. ಆದರೆ, ಖಚಿತವಾಗಿರಲಿಲ್ಲ. ಇಲ್ಲಿನ ತೊಗರಿಹಂಕಲ್ ವೃತ್ತದ ಅಂಗಡಿಯ ಮುಂಭಾಗದಲ್ಲಿ ರಕ್ತ ಕಂಡು ಬಂದಿತು. ಅಲ್ಲಿಯೇ ಸಮೀಪದಲ್ಲಿರುವ ಪಾರ್ಕ್ ಕೆಲವೆಡೆ ರಕ್ತ ಕಂಡು ಬಂದಿತು.
ದುಷ್ಕರ್ಮಿಗಳು ಯಾರನ್ನೋ ಕೊಲೆ ಮಾಡಿರಬಹುದೆಂದು ಪೊಲೀಸರು ಶ್ವಾನದಳದ ಸಹಿತ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರು. ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.