ಅಗ್ನಿ ಆಕಸ್ಮಿಕ: ಲಕ್ಷಾಂತರ ರು. ನಷ್ಟ
ಕ.ಪ್ರ.ವಾರ್ತೆ, ಬೀರೂರು, ಮೇ.1 ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಡಿ.ಎಸ್. ಅಶೋಕ್ ಎಂಬುವರಿಗೆ ಸೇರಿದ ತೆಂಗಿನ ನಾರು ಉತ್ಪಾದನಾ ಘಟಕಕ್ಕೆ ಬುಧವಾರ ಮಧ್ಯಾಹ್ನ ಆಕಸ್ಮಿಕವಾಗಿ ಬೆಂಕಿ ಬಿದ್ದು ಲಕ್ಷಾಂತರ ರು. ನಷ್ಟ ಸಂಭವಿಸಿ ಘಟಕಕ್ಕೆ ಹಾನಿಯಾದ ಘಟನೆ ಬುಧವಾರ ನಡೆದಿದೆ. ಸುಮಾರು ಎಂಬತ್ತು ಲಕ್ಷ ರು. ಯಂತ್ರೋಪಕರಣಗಳು ಬೆಂಕಿಯ ಉರಿಗೆ ಸಿಕ್ಕಿದ್ದು, ಸುಮಾರು ರು. 5 ಲಕ್ಷ ಮೌಲ್ಯದ ನಾರು ಬೆಂಕಿಗೆ ಆಹುತಿಯಾಗಿದೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಘಟಕ ಸಂಪೂರ್ಣ ಹೊಗೆಯಿಂದ ಆವೃತವಾಗಿದ್ದು ತಕ್ಷಣ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಡಬೇಕಾಯಿತು.
ಈ ಕೈಗಾರಿಕಾ ಘಟಕದ ಸಮೀಪದಲ್ಲಿ ಬೇರೆ ಬೇರೆ ನಾರು ಉತ್ಪಾದನಾ ಘಟಕಗಳಿದ್ದು, ಬೇಸಿಗೆ ಸಂದರ್ಭದಲ್ಲಿ ಈ ಘಟಕಗಳ ಸಂರಕ್ಷಣೆ ಮತ್ತು ನಿರ್ವಹಣೆ ಮಾಲೀಕರಿಗೆ ದೊಡ್ಡ ಪ್ರಯಾಸವಾಗಿದೆ. ಸಣ್ಣ ಕೈಗಾರಿಕಾ ವಲಯದ ಈ ಕೈಗಾರಿಕೆಗಳ ಸಂರಕ್ಷಣೆಗೆ ಇಲಾಖೆ ಉತ್ತಮ ರೀತಿಯಲ್ಲಿ ಸೌಲಭ್ಯ ಹಾಗು ಸೂಕ್ತ ಭದ್ರತೆ ಒದಗಿಸಿಕೊಟ್ಟಲ್ಲಿ ಗ್ರಾಮೀಣ ಕೈಗಾರಿಕೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿದೆ. ಬೆಂಕಿಗೆ ನಾರು ಘಟಕ ಆಹುತಿಯಾದ ಪ್ರಕರಣಕ್ ಸಂಬಂಧಿಸಿದಂತೆ ಬೀರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೋಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಪಂಚವಟಿ ಸೇವಾ ಕೇಂದ್ರ ಪ್ರಾರಂಭ
ನರಸಿಂಹರಾಜಪುರ: ಬಡ, ಅನಾಥ ಮಕ್ಕಳಿಗೆ ಹಾಗೂ ವೃದ್ಧರಿಗೆ ಆಶ್ರಯ ಕಲ್ಪಿಸಲು ನರಸಿಂಹರಾಜಪುರ ತಾಲೂಕಿನ ಮಡಬೂರು ಗ್ರಾಮದಲ್ಲಿ ಪಂಚವಟಿ ಸೇವಾ ಕೇಂದ್ರ ಪ್ರಾರಂಭಿಸಲಾಗಿದ್ದು, 3 ರಿಂದ 10 ನೇ ತರಗತಿಯವರೆಗೆ ಮಕ್ಕಳಿಗೆ ಉಚಿತ ಊಟ, ವಸತಿ ಮತ್ತು ಶಿಕ್ಷಣ ನೀಡಲಾಗುತ್ತಿದೆ. ವಯೋವೃದ್ಧರಿಗೆ ಮಾತ್ರ ನಿಗದಿತ ಶುಲ್ಕದೊಂದಿಗೆ ಆರೋಗ್ಯ ಸೇವೆ ಕಲ್ಪಿಸಲಾಗುವುದು. ಆಸಕ್ತರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಡಬೂರು ಪಂಚವಟಿ ಸೇವಾ ಕೇಂದ್ರ ಮನವಿ ಮಾಡಿದೆ. ಸಂಪರ್ಕಿಸಬೇಕಾದ ದೂರವಾಣಿ- 9008939747, 08266-235009
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

