'ರಾಜಕೀಯ ಪ್ರೇರಿತ ಸಂಘಟನೆಯಲ್ಲ'
ಕ.ಪ್ರ.ವಾರ್ತೆ, ನರಸಿಂಹರಾಜಪುರ, ಮೇ.1 ಶೃಂಗೇರಿ ಕ್ಷೇತ್ರ ಮಟ್ಟದ ಬ್ರಾಹ್ಮಣ ಪರಿಷತ್ ಯಾವುದೇ ಜಾತಿ, ಪಕ್ಷ ಅಥವಾ ವ್ಯಕ್ತಿ ವಿರೋಧಿ ಸಂಘಟನೆಯಲ್ಲ. ರಾಜಕೀಯ ಪ್ರೇರಿತವೂ ಅಲ್ಲ ಎಂದು ಶೃಂಗೇರಿ ಕ್ಷೇತ್ರ ಬ್ರಾಹ್ಮಣ ಪರಿಷತ್ತು ಸ್ಪಷ್ಟಪಡಿಸಿದೆ.
ಮಂಗಳವಾರ ಇಲ್ಲಿನ ಅಗ್ರಹಾರದಲ್ಲಿ ಶೃಂಗೇರಿ ಕ್ಷೇತ್ರ ಬ್ರಾಹ್ಮಣ ಪರಿಷತ್ ಅಧ್ಯಕ್ಷ ಪ್ರಭಾಕರ ಕಾರಂತ್ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಮಾನ ಮನಸ್ಕರು ಸೇರಿ ಶೃಂಗೇರಿ ಕ್ಷೇತ್ರ ಮಟ್ಟದ ಬ್ರಾಹ್ಮಣ ಪರಿಷತ್ತು ಹುಟ್ಟು ಹಾಕಿದ್ದೇವೆ. ಬ್ರಾಹ್ಮಣರ ಸಂಘಟನೆ ಮತ್ತು ಸಮಸ್ತ ಮಾನವ ಜನಾಂಗದ ಹಿತಕ್ಕಾಗಿ ರಚಿತವಾದ ಸಂಘಟನೆ ಇದಾಗಿದೆ.
50 ಮೈಕ್ರೋ ಸಭೆ: ಬ್ರಾಹ್ಮಣ ಸಭಾದ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳಲ್ಲೂ ನಾವು ಪಾಲ್ಗೊಂಡು ಸಂಘಟನೆ ಬಲಪಡಿಸಲಿದ್ದೇವೆ. ಪ್ರಸ್ತುತ ಬ್ರಾಹ್ಮಣರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸುತ್ತೇವೆ. ಶೃಂಗೇರಿ ಕ್ಷೇತ್ರ ಮಟ್ಟದಲ್ಲಿ 50 ಮೈಕ್ರೋ ಸಭೆಗಳನ್ನು ಏರ್ಪಡಿಸುವ ಗುರಿ ಹೊಂದಲಾಗಿತ್ತು. ಈಗಾಗಲೇ 40 ಮೈಕ್ರೋ ಸಭೆಗಳನ್ನು ನಡೆಸಿ ಯಶಸ್ವಿಯಾಗಿದ್ದೇವೆ ಎಂದರು.
ಸಂಘಟನೆಗೆ ಹಕ್ಕಿದೆ: ಪ್ರಜಾಪ್ರಭತ್ವದಲ್ಲಿ ಯಾರು ಬೇಕಾದರೂ ಸಂಘಟಿತರಾಗಬಹುದು. ಬ್ರಾಹ್ಮಣ ಪರಿಷತ್ತು ರಾಜಕೀಯ ಜಾಗೃತಿ ಮೂಡಿಸಲಿದೆ. ನಮ್ಮ ಸಂಘಟನೆಯು ನಮ್ಮ ಶಕ್ತಿಯ ಮೇಲೆ ನಿಂತಿದೆ. ಆದರೂ, ಕೆಲವರು ಈಗಾಗಲೇ ನಮ್ಮ ಸಂಘಟನೆ ವಿರುದ್ಧ ಅಪಪ್ರಚಾರದಲ್ಲಿ ನಿರತರಾಗಿದ್ದಾರೆ ಎಂದರು.
ಕೆಲವು ಮುಖಂಡರ ಸೂಚನೆ ಮೇರೆಗೆ ನಮ್ಮ ಸಂಘಟನೆಯ ಮೇಲೆ ಅಪಪ್ರಚಾರ ನಡೆಯುತ್ತಿದೆ ಎಂಬ ಅನುಮಾನ ಬರುತ್ತಿದೆ. ನಮ್ಮ ಸಂಘಟನೆ ಯಾವುದೇ ಪಕ್ಷದ ಪರ ನಿಂತಿಲ್ಲ. ಚುನಾವಣೆ ಮುಗಿದರೂ ನಮ್ಮ ಸಂಘಟನೆ ನಿರಂತರವಾಗಿ ಮುಂದುವರಿಯಲಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಮತ ನೀಡಿ ಎಂದು ಕರೆ ನೀಡುತ್ತಿದ್ದೇವೆ. ನಮ್ಮ ಸಂಘಟನೆಯು ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರಲ್ಲಿ ಜಾಗೃತಿ ಮೂಡಿಸಿದೆ ಎಂದು ಅವರು ತಿಳಿಸಿದರು.
ತಾಲೂಕು ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಗುರುಮೂರ್ತಿ, ಚೇಪುಗೋಡು ಶಿವಶಂಕರ ರಾಯರು, ರಾಗೋಡು ಗೋಪಿನಾಥ್, ಮೊದಲಮನೆ ವಿಶ್ವನಾಥ್,ರವಿಶಂಕರ್, ರಾಜೇಂದ್ರ, ಶ್ರೀನಾಥ್ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

