ಚಿಕ್ಕಮಗಳೂರು

ಜನಪರ ಮಾತನಾಡುವ ಅಭ್ಯರ್ಥಿಯನ್ನು ಆಯ್ಕೆ ಮಾಡಿ

Published On :

ಕಡೂರು: ವಿಧಾನಸಭೆಯಲ್ಲಿ ಜನಪರ ಮಾತನಾಡುವ ಅಭ್ಯರ್ಥಿಯನ್ನು  ಆಯ್ಕೆ ಮಾಡಬೇಕು ಎಂದು ಖ್ಯಾತ ನಿರ್ದೇಶಕ ಟಿ.ಎನ್. ಸೀತಾರಾಮ್ ಹೇಳಿದರು.
 ಪಟ್ಟಣದ ಕನಕ ವೃತ್ತದಲ್ಲಿ ಪ್ರಚಾರದ ಕೊನೆ ದಿನವಾದ ಶುಕ್ರವಾರ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಗೆ ಚಾಲನೆ ನೀಡಿ ಮಾತನಾಡಿ, ಸಮಸ್ಯೆ ಪರ ಹೋರಾಟ ಮಾಡುವ ಮನೋಭಾವ ಕಡಿಮೆಯಾಗುತ್ತಿದೆ. ಜನರಿಗೆ ಅಗತ್ಯವಾಗಿರುವ ಸಮಸ್ಯೆಗಳ ಪರಿಹಾರಕ್ಕೆ ಧ್ವನಿಯಾಗಿ ಕೆಲಸ ಮಾಡುವ ಜನಪರ ಧ್ವನಿಗಳ ಅಗತ್ಯ ಇದೆ ಎಂದರು.
 ಅಭ್ಯರ್ಥಿ ವೈ.ಎಸ್.ವಿ. ದತ್ತ ಮಾತನಾಡಿ, ಜನ ಸಾಮಾನ್ಯರ ಆಶೋತ್ತರಗಳಿಗೆ ಸ್ಪಂದಿಸುವ ಮತ್ತು ಕ್ಷೇತ್ರದ ಜನರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಚುನಾವಣೆಗ ಸ್ಪರ್ಧಿಸಿದ್ದು ಜನರ ದ್ವನಿಯಾಗಿ ಕೆಲಸ ಮಾಡುವ ಏಕೈಕ ಉದ್ದೇಶದಿಂದ ಕಣಕ್ಕಿಳಿದಿದ್ದೇನೆ. ಮತದಾರ ಪ್ರಭುಗಳು ಆಶೀರ್ವಾದ ಮಾಡಲಿದ್ದಾರೆ ಎಂದು ಹೇಳಿದರು. ಬೈಕ್ ರ್ಯಾಲಿ ಪಟ್ಟಣದ ನಜೀರ್ ಸಾಬ್ ಬಡಾವಣೆಯಿಂದ ಪಟ್ಟಣದ ಎಲ್ಲ ವಾರ್ಡುಗಳಲ್ಲಿ ನಡೆಸಲಾಯಿತು. ನಟ ಹನುಮಂತೇಗೌಡ, ಜೆಡಿಎಸ್ ನಗರ ಘಟಕದ ಕಾರ್ಯಾಧ್ಯಕ್ಷ ಭಂಢಾರಿ ಶ್ರೀನಿವಾಸ್, ಜೆಡಿಎಸ್ನ ಎನ್. ಇಮಾಮ್, ಗಿರೀಶ್ ಉಪ್ಪಾರ್, ಕೆ.ವಿ. ವಾಸು, ಮಹಮದ್ ಇಸ್ಮಾಯಿಲ್, ಬಿ.ಟಿ. ಗಂಗಾಧರ ನಾಯ್ಕ, ಕೆ.ಜಿ. ಸೋಮಯ್ಯ, ಕೆ.ಎಚ್. ಲಕ್ಕಣ್ಣ, ತನ್ವೀರ್ ಅಹಮದ್ ಇದ್ದರು.
ಪ್ರೀತಿ ರಾಜಕಾರಣಕ್ಕೆ ಮಣೆ
ಬೀರೂರು: ಕಡೂರು ವಿಧಾನಸಭಾ ಕ್ಷೇತ್ರದ ಮತದಾರ ಪ್ರಭುಗಳು ಈ ಬಾರಿ ಜಾತಿ ರಾಜಕೀಯಕ್ಕೆ ತಿಲಾಂಜಲಿ ನೀಡಿ ಪ್ರೀತಿ ರಾಜಕಾರಣಕ್ಕೆ ಮಣೆ ಹಾಕಲಿದ್ದಾರೆ ಎಂದು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ ಹೇಳಿದರು.
  ಅವರು ಶುಕ್ರವಾರ ಬೀರೂರು ಪಟ್ಟಣದಲ್ಲಿ ಜೆಡಿಎಸ್ನಿಂದ ಹಮ್ಮಿಕೊಂಡಿದ್ದ ಬೈಕ್ ರೋಡ್ನಲ್ಲಿ ಪಾಲ್ಗೊಂಡು ಮಹಾತ್ಮಗಾಂಧಿ ವೃತ್ತದಲ್ಲಿ ಮಾತನಾಡಿದರು.
 ಕ್ಷೇತ್ರದ ಮತದಾರರು ಹಣ ಬಲದ ರಾಜಕೀಯಕ್ಕೆ ಬೆಂಬಲ ನೀಡದೇ ಜನಬಲ ಹೊಂದಿರುವ ದತ್ತ ಅವರನ್ನು ಗೆಲ್ಲಿಸಲು ಶ್ರಮಿಸುತ್ತಿದ್ದು, ಜನ ಈ ಬಾರಿ ಬದಲಾವಣೆ ಬಯಸಿ ಜೆಡಿಎಸ್ ಕಡೆ ಮುಖ ಮಾಡುತ್ತಿದ್ದಾರೆ ಎಂದರು.  
 ತೆರೆದ ವಾಹನದಲ್ಲಿ ಪ್ರಚಾರದಲ್ಲಿ ತೊಡಗಿದ್ದ ದತ್ತ ಜೊತೆಯಲ್ಲಿ ಧಾರಾವಾಹಿ ನಿರ್ದೇಶಕ ಟಿ.ಎನ್. ಸೀತಾರಾಮ್ ಸಾತ್ ನೀಡಿ, ಪ್ರಚಾರಕ್ಕೆ ರಂಗು ತಂದರು.
 ಪಟ್ಟಣದ ಬಿ.ಹೆಚ್. ರಸ್ತೆ ಹಳೇಪೇಟೆ, ಬಳ್ಳಾರಿ ಕ್ಯಾಂಪು, ಉಪ್ಪಾರ ಕ್ಯಾಂಪು, ಮಾರನವಮಿ ಬಯಲು ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಕಾರ್ಯಕರ್ತರೊಂದಿಗೆ ತೆರಳಿ ಮತ ಯಾಚಿಸಿದರು. ಜಾತದಲ್ಲಿ ಜೆಡಿಎಸ್ ಕಾರ್ಯಕರ್ತರು, ಅಭಿಮಾನಿಗಳು ಪಾಲ್ಗೊಂಡಿದ್ದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.